ಬೇಲಿನೇ ಎದ್ದು ಹೊಲ ಮೇಯೊದು ಅಂದ್ರೆ ಇದೇನಾ?

ಬೇಲಿನೇ ಎದ್ದು ಹೊಲ ಮೇಯೊದು ಅಂದ್ರೆ ಇದೇನಾ?

ಬರಹ
ಎಂಧಿರನ್ ಕರ್ನಾಟಕದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು ೨೫ ಚಿತ್ರಮಂದಿರಗಳಲ್ಲಿ(ಅನಧಿಕೃತವಾಗಿ ಇನ್ನೆಷ್ಟು ಕಡೇನೋ ಆ ದೇವರೇ ಬಲ್ಲ). ಜಾಕಿ ಬಿಡುಗಡೆಯಾಗಿದ್ದು ಸುಮಾರು ೧೧೪ ಚಿತ್ರಮಂದಿರಗಳಲ್ಲಿ. ಆದರೆ ಕನ್ನಡ ಪತ್ರಿಕೆ, ಟಿವಿ ಮಾಧ್ಯಮಗಳು ಈ ಎರಡು ಚಿತ್ರಕ್ಕೆ ಕೊಟ್ಟ ಪ್ರಚಾರದಲ್ಲಿ ಅಜಗಜಾಂತರ ವ್ಯತ್ಯಾಸ.
ಎಂಧಿರನ್ ಚಿತ್ರ ಬಿಡುಗಡೆಗೆ ಸಿದ್ಧವಾದ ದಿನದಿಂದ ಹಿಡಿದು ಇವತ್ತಿನ ತನಕ ಈ ಪತ್ರಿಕೆಗಳ ಮುಖಪುಟದಲ್ಲೆಲ್ಲಾ ಎಂಧಿರನ್ ಚಿತ್ರ ಹಾಗು ರಜನಿಕಾಂತ್ ಮುಖಸ್ತುಥಿ. ಇನ್ನು ಟಿ.ವಿ.ಚ್ಯಾನಲ್ ಗಳಲ್ಲಿ ಎಂಧಿರನ್ ಪ್ರಚಾರಕ್ಕೆಂದೇ ವಿಶೇಷ ಕಾರ್ಯಕ್ರಮಗಳು.
ಜಾಕಿ ಬಿಡುಗಡೆಯಾಗಿ ಇವತ್ತಿಗೆ ೫ ದಿನ ಆಗಿದ್ದು ಪ್ರತಿ ದಿನವು ಎಲ್ಲ ಚಿತ್ರಮಂದಿರಗಳು ಭರ್ತಿಯಾಗುತ್ತಿದೆ. ಮೊದಲ ವಾರದ ಗಳಿಕೆ ಸುಮಾರು ೮ ಕೋಟಿ ದಾಟುವುದು ಖಚಿತವಾಗಿದ್ದು ಅದರಲ್ಲಿ ಲಾಭವೇ ೪ ಕೊಟಿಯಷ್ಟಿರಲಿದೆ ಅನ್ನುವುದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಕನ್ನಡ ಮಾಧ್ಯಮಗಳು ಈ ಚಿತ್ರದ ಯಶಸ್ಸಿನ ಬಗ್ಗೆ ಆಸಕ್ತಿಯೇ ತೋರದಿರುವುದು ಕನ್ನಡಿಗರ ಪಾಲಿಗೆ ವಿಪರ್ಯಾಸವೇ ಸರಿ. ರಾಜ್ಯದ ಅತಿ ಹೆಚ್ಚು ಮಾರಾಟವಾಗುವ ಕನ್ನಡ ದಿನಪತ್ರಿಕೆಯಲ್ಲಿ ಜಾಕಿ ವಿಮರ್ಶೆಯಲ್ಲಿ ಜಾಕಿಗಿಂತ ಹೆಚ್ಚು ಎಂಧಿರನ್ ಬಗ್ಗೆಯೇ ಇತ್ತು.
ಕನ್ನಡಿಗರಿಂದಲೇ ನಡೆಯುತ್ತಿರುವ ಕನ್ನಡ ಪತ್ರಿಕೆ, ಟಿವಿ ವಾಹಿನಿಗಳು ಕನ್ನಡಿಗರ ಮೇಲೆ ಮಾಡುತ್ತಿರುವ ಈ ಪರಭಾಷಾ ಚಿತ್ರಗಳ ಹೇರಿಕೆಯನ್ನು ಪ್ರಶ್ನಿಸಬೇಕಿದೆ. ಕನ್ನಡ ನಾಡಿನಲ್ಲಿ ಕನ್ನಡ ಚಿತ್ರಗಳು ಮಕಾಡೆ ಮಲಗಿದರೂ ಪರವಾಗಿಲ್ಲ, ಪರಭಾಷೆ ಚಿತ್ರಗಳನ್ನು ಮೆರೆಸಿ ಆ ಚಿತ್ರದ ನಿರ್ಮಾಪಕರು/ವಿತರಕರು ಕೊಡುವ ಪುಡಿಗಾಸಿಗೆ ಕೈಯೊಡ್ಡುವ ಪತ್ರಕರ್ತರನ್ನು, ಟಿ.ವಿ.ಮಾಧ್ಯಮಗಳನ್ನು ಇವತ್ತು ಜನರು ಪ್ರಶ್ನಿಸಬೇಕಿದೆ.
ಗೆಳೆಯರೇ, ಎಲ್ಲ ಪತ್ರಿಕೆಗಳಿಗೆ, ಟಿ.ವಿ ಚ್ಯಾನಲ್ ಗಳಿಗೆ ಪತ್ರಗಳನ್ನು ಬರೆದು ಅವರು ಮಾಡುತ್ತಿರುವ ಕನ್ನಡ ದ್ರೋಹದ ವಿರುದ್ಧ ಪ್ರತಿಭಟಿಸೋಣ. 

ಎಂಧಿರನ್ ಕರ್ನಾಟಕದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು ೨೫ ಚಿತ್ರಮಂದಿರಗಳಲ್ಲಿ(ಅನಧಿಕೃತವಾಗಿ ಇನ್ನೆಷ್ಟು ಕಡೇನೋ ಆ ದೇವರೇ ಬಲ್ಲ). ಜಾಕಿ ಬಿಡುಗಡೆಯಾಗಿದ್ದು ಸುಮಾರು ೧೧೪ ಚಿತ್ರಮಂದಿರಗಳಲ್ಲಿ. ಆದರೆ ಕನ್ನಡ ಪತ್ರಿಕೆ, ಟಿವಿ ಮಾಧ್ಯಮಗಳು ಈ ಎರಡು ಚಿತ್ರಕ್ಕೆ ಕೊಟ್ಟ ಪ್ರಚಾರದಲ್ಲಿ ಅಜಗಜಾಂತರ ವ್ಯತ್ಯಾಸ.ಎಂಧಿರನ್ ಚಿತ್ರ ಬಿಡುಗಡೆಗೆ ಸಿದ್ಧವಾದ ದಿನದಿಂದ ಹಿಡಿದು ಇವತ್ತಿನ ತನಕ ಈ ಪತ್ರಿಕೆಗಳ ಮುಖಪುಟದಲ್ಲೆಲ್ಲಾ ಎಂಧಿರನ್ ಚಿತ್ರ ಹಾಗು ರಜನಿಕಾಂತ್ ಮುಖಸ್ತುಥಿ. ಇನ್ನು ಟಿ.ವಿ.ಚ್ಯಾನಲ್ ಗಳಲ್ಲಿ ಎಂಧಿರನ್ ಪ್ರಚಾರಕ್ಕೆಂದೇ ವಿಶೇಷ ಕಾರ್ಯಕ್ರಮಗಳು.ಜಾಕಿ ಬಿಡುಗಡೆಯಾಗಿ ಇವತ್ತಿಗೆ ೫ ದಿನ ಆಗಿದ್ದು ಪ್ರತಿ ದಿನವು ಎಲ್ಲ ಚಿತ್ರಮಂದಿರಗಳು ಭರ್ತಿಯಾಗುತ್ತಿದೆ. ಮೊದಲ ವಾರದ ಗಳಿಕೆ ಸುಮಾರು ೮ ಕೋಟಿ ದಾಟುವುದು ಖಚಿತವಾಗಿದ್ದು ಅದರಲ್ಲಿ ಲಾಭವೇ ೪ ಕೊಟಿಯಷ್ಟಿರಲಿದೆ ಅನ್ನುವುದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಕನ್ನಡ ಮಾಧ್ಯಮಗಳು ಈ ಚಿತ್ರದ ಯಶಸ್ಸಿನ ಬಗ್ಗೆ ಆಸಕ್ತಿಯೇ ತೋರದಿರುವುದು ಕನ್ನಡಿಗರ ಪಾಲಿಗೆ ವಿಪರ್ಯಾಸವೇ ಸರಿ. ರಾಜ್ಯದ ಅತಿ ಹೆಚ್ಚು ಮಾರಾಟವಾಗುವ ಕನ್ನಡ ದಿನಪತ್ರಿಕೆಯಲ್ಲಿ ಜಾಕಿ ವಿಮರ್ಶೆಯಲ್ಲಿ ಜಾಕಿಗಿಂತ ಹೆಚ್ಚು ಎಂಧಿರನ್ ಬಗ್ಗೆಯೇ ಇತ್ತು.ಕನ್ನಡಿಗರಿಂದಲೇ ನಡೆಯುತ್ತಿರುವ ಕನ್ನಡ ಪತ್ರಿಕೆ, ಟಿವಿ ವಾಹಿನಿಗಳು ಕನ್ನಡಿಗರ ಮೇಲೆ ಮಾಡುತ್ತಿರುವ ಈ ಪರಭಾಷಾ ಚಿತ್ರಗಳ ಹೇರಿಕೆಯನ್ನು ಪ್ರಶ್ನಿಸಬೇಕಿದೆ. ಕನ್ನಡ ನಾಡಿನಲ್ಲಿ ಕನ್ನಡ ಚಿತ್ರಗಳು ಮಕಾಡೆ ಮಲಗಿದರೂ ಪರವಾಗಿಲ್ಲ, ಪರಭಾಷೆ ಚಿತ್ರಗಳನ್ನು ಮೆರೆಸಿ ಆ ಚಿತ್ರದ ನಿರ್ಮಾಪಕರು/ವಿತರಕರು ಕೊಡುವ ಪುಡಿಗಾಸಿಗೆ ಕೈಯೊಡ್ಡುವ ಪತ್ರಕರ್ತರನ್ನು, ಟಿ.ವಿ.ಮಾಧ್ಯಮಗಳನ್ನು ಇವತ್ತು ಜನರು ಪ್ರಶ್ನಿಸಬೇಕಿದೆ.ಗೆಳೆಯರೇ, ಎಲ್ಲ ಪತ್ರಿಕೆಗಳಿಗೆ, ಟಿ.ವಿ ಚ್ಯಾನಲ್ ಗಳಿಗೆ ಪತ್ರಗಳನ್ನು ಬರೆದು ಅವರು ಮಾಡುತ್ತಿರುವ ಕನ್ನಡ ದ್ರೋಹದ ವಿರುದ್ಧ ಪ್ರತಿಭಟಿಸೋಣ.