ಗೌಡಪ್ಪನ ಮನೆಯಲ್ಲಿ ಸೋನಿಯಾ

ಗೌಡಪ್ಪನ ಮನೆಯಲ್ಲಿ ಸೋನಿಯಾ

ಬರಹ

ಬೆಳಗ್ಗೆ ಎಲ್ಲಾ ನಿಂಗನ ಅಂಗಡಿ ತಾವ ಸೇರಿದ್ವಿ. ಚಾ ಕುಡೀತಾ ಇದ್ದ ಗೌಡಪ್ಪ. ಒಂದೇ ಸಾರಿ ಫಿಟ್ಸ್ ಬಂದಂಗೆ ಮೈಯೆಲ್ಲಾ ಅಲುಗಾಡಿಸಿದ. ಚಾನ್ನ ಸುಬ್ಬನ ಮೈ ಮ್ಯಾಕೆ ಸುರಿದಿದ್ದ. ಯಾಕ್ರೀ ಗೌಡ್ರೆ. ಲೇ ಮೊಬೈಲ್ ವೈಬ್ರೇಟಿಂಗ್ ಮೋಡಿಗೆ ಹಾಕಿದ್ದೆ ಅದಕ್ಕೆ ಕಲಾ ಅಂದ. ಏ ಥೂ. ಯಾರದ್ದು ಅಂತಾ ನೋಡ್ರಿ. ಲೇ ಸಿದ್ದರಾಮಯ್ಯ ಕಲಾ ಅಂದೋನೆ ಸ್ಪೀಕರ್ ಆನ್ ಮಾಡ್ದ,. ಹಲೋ ಹೇಳಿ ಸಾ. ನಾನು ಕಲಾ ಸಿದ್ದು. ನೋಡಲಾ ಮುಂದಿನ ವಾರ ನಿಮ್ಮ ಹಳ್ಳಿಗೆ ಸೋನಿಯಾ ಗಾಂಧಿ ಬತ್ತಾವ್ರೆ. ಸ್ವಲ್ಪ ಹಳ್ಳೀನಾ ಅಂಗೇ ಕೆರೆತಾವ ಕಿಲೀನ್ ಆಗಿ ಮಡುಗು.   ನಿನ್ನ ಫ್ರೆಂಡ್ಸ್ ಗೆ ಚಂಗೂಲಿ ಬುದ್ದಿ ತೋರಿಸ್ಬೇಡ ಅಂತ ಹೇಳಲಾ. ನೀವೇನಾದ್ರೂ ಹೆಚ್ಚು ಕಮ್ಮಿ ಮಾಡಿದ್ರೆ. ಆ ಯಮ್ಮನ ಹಿಂದೆ ಇದ್ದ ಎಸ್ಕಾರ್ಟ್ ನೋರು 'ಢಂ" ಅನ್ನಿಸಿ ಮನೆ ಮುಂದೆ ಹೊಗೆ ಹಾಕಿಸ್ತಾರೆ ಹುಸಾರ್ ಅಂದು ಕಟ್ ಮಾಡಿದ್ರು,. ಬಡ್ಡೆ ಐದ ಗೌಡಪ್ಪ ಹಲೋ ಹಲೋ ಅಂತ ಬಡ್ಕಂತಾನೇ ಇದ್ದ. ಲೇ ಸಿದ್ದು ಕೆರೆತಾವ ಕಿಲೀನ್ ಮಡುಗು ಅಂದ್ರು ಯಾಕಲಾ. ಏ ಥೂ. ನೋಡ್ರಲಾ ನಿಮ್ಮ ಬುದ್ದಿ ನಮ್ಮ ಸಿದ್ದೂಗೆ ಗೊತ್ತಾಗೈತೆ. ನಿಮ್ಮ ಜಲ್ಮ ವ ಚಾಪೆ ಸುತ್ಕಂಡ್ ಹೋಗಾ ಅಂತ ಸಾನೇ ಬೈದ.


ನೋಡ್ರಲಾ ಆ ವಮ್ಮ ನಮ್ಮ ಹಳ್ಳಿಗೆ ಬತ್ತದೆ ಅಂದ್ರೆ ವರಮಹಾಲಕ್ಸ್ಮಿ ಬಂದಂಗೆ ಕನ್ರಲಾ ಅಂದ ಗೌಡಪ್ಪ. ಮತ್ತೆ ಸುಸ್ಮಾ ಸ್ವರಾಜ್, ಆ ವಮ್ಮ ಬಿಜೆಪಿ ವರ ಮಹಾಲಕ್ಸ್ಮಿ ಕಲಾ ಅಂದ ಗೌಡಪ್ಪ. ಸರಿ ಕಿಸ್ನ, ಊರು ಹೊರಗೆ ಒಳಗೆ ಚಪ್ಪರ ಹಾಕಿದ್ದ. ಮಗಂದು ಎಲ್ಲಾ ಗೌಡಪ್ಪನ ತೋಟದ ಅಡಿಕೆ ಮರ. ಫಸಲು ಬಂದಿದ್ದೆಲ್ಲಾ ಕಿತ್ತು ಹಾಕಿದ್ದ. ಹತ್ರತ್ರ ಒಂದು 20 ಮಾವಿನ ಮರ ಬೋಳಿಸಿದ್ವಿ. ಪಾಪ ಕೋಗಿಲೆ ಎಲ್ಲಾ ಬೇವಿನ ಮರಕ್ಕೆ ಸಿಫ್ಟ್ ಆಗಿತ್ತು. ಮತ್ತೆ ಎಲೆ ಬರೋದನ್ನೆ ಕಾಯ್ತಾ ಇದ್ವು. ರಂಗಂಗೆ ಮೈಕ್ ಸೆಟ್ ಹೇಳಿದ್ದಾತು.ಏನಾದ್ರೂ ಮೈಕ್ ಗೊಯ್ ಅಂದ್ರೆ ನಿನ್ನ ಹೆಂಡರು ವಿಧವೆ ಆಯ್ತಾಳೆ  ಅಂದಿದ್ದ ಗೌಡಪ್ಪ.
ಸರಿ ಸೋನಿಯಾ ಗಾಂಧಿ ಹೆಲಿಕಾಪ್ಟರ್ ಬಂದೇ ಬಿಟ್ರು. ಗೌಡಪ್ಪ ಇಳಿಯೋದಕ್ಕಿಂತ ಮುಂಚೆನೇ ಹೆಲಿ ಪ್ಯಾಡ್ ಹತ್ರ ಹೋಗಿದ್ದ. ಪೈಲೆಟ್ ಸೈಡಿಗೆ ಬಾರಲೇ ಇಲ್ಲಾ ಹೊಗೆ ಹಾಕ್ಬೇಕಾಯ್ತದೆ ಅನ್ನೋನು. ಹೆಲಿಕಾಪ್ಟರ್ ಗಾಳಿಗೆ ಬೆಳ್ಳಗೆ ಇದ್ದ ಗೌಡಪ್ಪ ಕೆಂಪು ಬಣ್ಣಕ್ಕೆ ತಿರುಗಿದ್ದ,. ಮಣ್ಣೆಲ್ಲಾ ಗೌಡಪ್ಪನ ಮೇಲೆ ಇತ್ತು. ಕೊಡವಿದರೆ ಒಂದು 4ಕೆಜಿ ಮಣ್ಣು ಬಿದ್ದಿತ್ತು. ನಮ್ಮ ಹೆಣ್ಣು ಐಕ್ಳು ಆರತಿ ಎತ್ತೋದೆಯಾ. ಆ ವಮ್ಮ ತಟ್ಟೆಗೆ ಸಾವಿರ ರೂಪಾಯಿ ನೋಟು ಹಾಕ್ತಾನೆ ಇದ್ಲು. ಸ್ಟೇಜ್ ಬರೋದ್ರಾಗೆ ಒಂದು 20ಕಿತಾ ಆರತಿ ಮಾಡಿದ್ರು. ಮಗಾ ಗೌಡಪ್ಪ ಅಲ್ಲೂ ಕಮಿಸನ್ ಮಾತಾಡಿದ್ದ. ತಟ್ಟಗೆ 200ರೂಪಾಯಿಯಂತೆ. ಏ ಥೂ. ಸೋನಿಯಾನ ನೋಡಿದ್ರೆ ಸಣ್ಣ ಮಾರಮ್ಮನ ನೋಡ್ದಂಗೆ ಆಗೋದು. ಬೆವರಿಗೆ ರಕ್ತ ಸುರಿದಂಗೆ ಕಾಣೋದು. ಅಟೊತ್ತಿಗೆ ದೇಸಪಾಂಡೆ ಬಂದು ಲೇ ಗೌಡಪ್ಪ ಬಬಬಬಬಬ ಅಂತು. ಏನಲಾ ಅಂದಿದ್ದು, ಬೇಗ ಹೋಗಿ ಸ್ಟೇಜ್ನಾಗೆ ಜೈ ಹೇಳಲಾ ಅಂದ್ರು. ಆ ಯಪ್ಪ ಅದೇನ್ ಹೇಳ್ತದೋ ಅಂತಾ ಗೊಣಿಕ್ಕಂಡ್ ಹೋದ. ಸರಿ ಗೌಡಪ್ಪನ್ನ ಮೇಡಂಗೆ ಸಿದ್ದು ಪರಿಚಯ ಮಾಡಿಸ್ತು. oh bad smell. like 2days before dog died. ಅದಕ್ಕೆ ಡಿಕೇಶಿ oh that is gowda. 
ಪಾಪ ಆ ವಮ್ಮ ಕೆಟ್ಟ ವಾಸನೆಗೆ ಕನ್ನಡದಲ್ಲಿ ಗೌಡ ಅಂತಾ ಕರೀತಾರೆ ಅನ್ಕಂತು.
ಸರೀ ಭಾಸಣ ಸುರುವಾತು. ಸೋನಿಯಾ ಹಿಂದಿಯಲ್ಲಿ ಹೇಳಿದ್ದನ್ನು ಗೌಡಪ್ಪ ತನ್ನ ಇಷ್ಟ ಬಂದ ಹಾಗೆ ಏನೇನೋ ಹೇಳ್ತಾ ಇದ್ದ,. ಹಿಂದೆ ಇದ್ದ ಇಸ್ಮಾಯಿಲ್ ಲೇ ಬರೀ ಸುಳ್ಳು ಹೇಳ್ತಾನೆ ಕನ್ರಲಾ ಅನ್ನೋನು. ಗರೀಬಿ ಹಟಾವೋ ಅಂತಾ ಸೋನಿಯಾ ಅಂದ್ರೆ ಗಾಬರಿ ಬೀಳ್ಬೇಡ್ರಿ ಅನ್ನೋನು. ರೋಟಿ ಕಪಡಾ ಔರ್ ಮಕಾನ್ ಅಂದ್ರೆ. ರೊಟ್ಟಿ ಚೆಟ್ನಿಗೆ ಅಂಗೇ ಕಾಯಿತುರಿ ಹಾಕ್ಕಂಡು ತಿನ್ನಿ ಸಂದಾಗಿರುತ್ತೆ ಅನ್ನೋನು ಬಡ್ಡೆ ಐದ.  ಅಂಗೇ ದೇಸಪಾಂಡೆ ಮಾತಾಡಿದ್ರು. ಅವರು ಮಾತಾಡಿದ ಕನ್ನಡವನ್ನ ಕನ್ನಡಕ್ಕೆ ತರ್ಜುಮೆ ಮಾಡಿ ಡಿಕೇಶಿ ಹೇಳ್ತು. ಎಲ್ರೂ ಬಿಳಿ ಟೋಪಿ. ಸೋನಿಯಾ ಖುಸಿಯಾಗಿ ಹೋದ್ರು. ಮಗಾ ಗೌಡಪ್ಪ ಸಾಲೆಯಿಂದ ಸೇವಾದಳದೋರ ಟೋಪಿ ಬಾಡಿಗೆಗೆ ತಂದಿದ್ದ. ಸರಿ ಸೋನಿಯಾ ವಾಪಸ್ಸು ಹೋಗೋದು ಅಂತಾ ಆತು. ನೋಡಿದ್ರೆ ಹೆಲಿಕಾಪ್ಟರ್ ನಲ್ಲಿ ಪೆಟ್ರೋಲ್ ಇಲ್ಲ ಅಂದ ಪೈಲೆಟ್. ಸೀಮೆ ಎಣ್ಣೆ ಆಯ್ತದ ಅಂದ ಗೌಡಪ್ಪ. ಅದೇನು ಉದಯ ರಂಗ ಬಸ್ಸಾ ಅಂದ ಸುಬ್ಬ., ಸರಿ ಸೋನಿಯಾ ಅವತ್ತಿನ ರಾತ್ರಿ ಗೌಡಪ್ಪನ ಮನೆಯಲ್ಲಿ ಉಳಿದ್ರು.
ಮನೆಗೆ ಹೋಗ್ತಿದ್ದಂಗೆನೇ ಓಹ್ ಗೌಡ ಅಂದ್ರು. ಗೌಡಪ್ಪ ಹೊರಗೆ ಇದ್ದೋನು ಒಳಗೆ ಬಂದು ಮೇಡಂ ಕರೆದ್ರಾ ಅಂದ. ಮತ್ತೆ ಸೋನಿಯಾ ಕೊಟ್ಟಿಗೆ ತಾವ ಹೋದ್ರು ಅಲ್ಲೂ ಓಹ್ ಗೌಡ ಅಂದ್ರು. ಮತ್ತೆ ಗೌಡಪ್ಪ ಕರೆದ್ರಾ ಮೇಡಂ ಅಂದ. ಜನಕ್ಕೆಲ್ಲಾ ಆಸ್ಚರ್ಯ ಬಂದು ಎರಡು ಗಂಟೆ ಆಗಿಲ್ಲ. ಆಗಲೇ ಈ ವಮ್ಮ ಗೌಡ ಅಂತದ್ದಲ್ಲಾ ಅಂತ. ಗೌಡಪ್ಪನ ಹೆಂಡರಿಗೂ ಸಾನೇ ಖುಸಿ. ಮತ್ತೆ ಊಟಕ್ಕೆ ಅಂತಾ ತಟ್ಟೆ ಇಟ್ಟರೆ ಅದ್ರಾಗೆ ಸಾನೇ ಕೊಳೆ ಅಂಗೇ ವಾಸನೆ ಬತ್ತಾ ಇತ್ತು. ಮತ್ತೆ ಸೋನಿಯಾ ಓಹ್ ಗೌಡ, ಮೇಡಂ ಅಂತಾ ಗೌಡಪ್ಪ ಹೇಳ್ತಿದ್ದಾಗೆನೇ ಹಿಂದಗಡೆ ಇದ್ದ ಬಾಡಿ ಗಾರರ್ಡ್ ನೋರು ಗನ್ ತೋರಿಸಿ, ಹೋಗಲಾ ಹೊರಿಕ್ಕೆ. ನಮ್ಮ ಮೇಡಂ ಗಲೀಜು, ಕೆಟ್ಟ ವಾಸನೆ ಇದ್ರೆ ಕನ್ನಡದಾಗೆ ಗೌಡ ಅಂತಾರೆ ಅಂದ. ಜೋರಾಗಿ ಹೇಳ್ ಬೇಡಿ ಅಂದ. ಏ ಥೂ. ಬಾಡಿ ಗಾರ್ಡ್ ನೋರು ಒಂದು 20ಜನ ತಿನ್ನೋದನ್ನ ಇಬ್ಬರೇ ತಿಂದಿದ್ರು. ಗಣಪತಿ ಹಬ್ಬಕ್ಕೆ, ದಸರಕ್ಕೆ ಮಾಡಿದ್ದು, ಉಳಿದಿದ್ದು ಎಲ್ಲಾ ಅವರಿಗೆ ಹಾಕಿದ್ದೇ ಆತು. ಏನಲಾ ಇವರು ನಾವೇನಾದ್ರು ಯಾಮಾರಿದರೆ ನಮ್ಮನ್ನು ರೋಸ್ಟ್ ಮಾಡ್ಕಂಡು ತಿನ್ನಂಗೆ ಅವ್ರಲಾ ಅಂದ ಗೌಡಪ್ಪ. ಬೆಳಗ್ಗೆ ನಾವೆಲ್ಲಾ ಚೊಂಬು ಒಯ್ದರೆ ಬಡ್ಡೇ ಹತ್ತಾವು ಬಕ್ಕೀಟು ಒಯ್ದಿದ್ವು.
ಸರಿ ಬೆಳಗ್ಗೆ ಆತು. ಆ ವಮ್ಮನೇ ಹಾಲು ಕರೆದು. ಚಾ ಮಾಡಿಕಂಡು ಕುಡಿದು. ಮೈ ಚಲ್ತಾ ಹೂಂ ಅಂತಾ ಹೋತು. ಗೌಡಂಗೆ ಫುಲ್ ಡಿಮ್ಯಾಂಡ್. ಬಿಳಿ ಟೋಪಿ ಹಾಕ್ಕಂಡು ಓಡಾಡಿದ್ದೇಯಾ. ನಿಂಗನ ಅಂಗಡಿ ತಾವ ಸಾನೇ ಗಲೀಜಾಗಿತ್ತು. ಸುಬ್ಬ ಬಂದೋನೆ ಓಹ್ ಗೌಡ ಅಂದ. ಗೌಡಪ್ಪ ಏನಲಾ ಸುಬ್ಬ. ನಿಮಗಲ್ರೀ ಇಲ್ಲಿ ಸಾನೇ ಗಲೀಜೈತೆ ಅಂದ. ಲೇ ನಿನಗೆ ಗೊತ್ತಾಗಿ ಹೋತೇನ್ಲಾ. ಯಾರಿಗೂ ಹೇಳ್ಬೇಡ ಅಂತಾ ಅವನು ಕೇಳಿದಾಗಲೆಲ್ಲಾ ಕಾಸು ಕೊತ್ತಾನೆ. ಸುಬ್ಬ ಲೇ ಗೌಡ ಅಂದ್ರೆ ಸಾಕು ಕಾಸು ಬತ್ತದೆ. ಹೆಂಗೆ ನಮ್ಮ ಐಡಿರೀಯಾ.