ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ..

ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ..

ಬರಹ

ನಮ್ಮೂರ ದೇವರಾದ ಶ್ರೀ ಮುಖ್ಯಪ್ರಾಣ ದೇವರ ಕುರಿತಾಗಿ ಬರೆದ ಎರಡು ಪದ್ಯಗಳು...


 


ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ..


ನಮ್ಮ ಮಾರಂಡಹಳ್ಳಿಯ ಹನುಮನ ದರುಶನಕೆ..


 


ನಾನೂರು ವರುಷದ ಇತಿಹಾಸದ ಹನುಮನು..


ವರದರಾಜ ಶ್ರೀದೇವಿ ಭೂದೇವಿ ಸನ್ನಿಧಿಯಲಿ ನಿಂತಿಹನು..


 


ಅಭಯ ಹಸ್ತವ ನೀಡುತ ನಿಂತಿಹನು..


ಭಕ್ತರ ಮೊರೆಗಳ ಆಲಿಸುತ ನಿಂತಿಹನು...


 


ಸೀತಾರಾಮ ಲಕ್ಷ್ಮಣ ಸಮೇತ ಉತ್ಸವಕೆ ಹೊರಟಿಹನು..


ಭಕ್ತರ ಪೂಜೆಯ ಸ್ವೀಕರಿಸುತ ಊರನು ಕಾಯುತಲಿಹನು.. 


 


ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ..


ನಮ್ಮ ಮಾರಂಡಹಳ್ಳಿಯ ಹನುಮನ ದರುಶನಕೆ..


 ******************************************


ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..


ಅಂಜನಿ ಸುತನ, ವಾಯುಪುತ್ರನ, ಹನುಮನ ನಂಬಿರಯ್ಯ..


 


ಅಯೋಧ್ಯ ರಾಮನ ನೆಚ್ಚಿನ ಬಂಟನು, ಪಾವನ ಸುತನು ನಮ್ಮೀ ಹನುಮನು,


ಅಪ್ರತಿಮ ಬಲವಂತ ಹನುಮನು, ಗಂಧಮಾದನ ನಿವಾಸಿ ಹನುಮನು,


ಜಾಂಬವ ಪ್ರಿಯನಿವ ಹನುಮನು, ಕಪಿಗಳ ನಾಯಕನಿವನು ಹನುಮನು,


ಸಂಜೀವನಿಯ ತಂದವನಿವನು, ಚಿರಂಜೀವಿಯಾದವನಿವನು ಹನುಮನು..


ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..


 


ಮಾರುತಾತ್ಮಜ ಹನುಮನು ಇವನು, ಲೋಕಪೂಜ್ಯ ಹನುಮನು ಇವನು,


ವಾಗದೀಕ್ಷ ಹನುಮನು ಇವನು, ವಜ್ರನಾಕ್ಷ ಹನುಮನು ಇವನು,


ಸಂಕಟ ವಿಮೋಚನ ಹನುಮನು ಇವನು, ವೀರ ಶೂರ ದೀರ ಹನುಮನು,


ವಾರಿಧಿ ಲಂಘಿಸಿದ ಹನುಮನು ಇವನು, ಸೀತಾನ್ವೇಷಣೆಗೆ ಹೊರಟನು ಹನುಮನು,


ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..


 


ರುದ್ರವೀರ್ಯ ಹನುಮನು ಇವನು, ಪಿಂಗಲಾಕ್ಷ ಹನುಮನು ಇವನು,


ಮಹಾತಪಸ್ವಿ ಹನುಮನು ಇವನು, ಮಹಾತೇಜಸ್ವಿ ಹನುಮನು ಇವನು,


ಕೇಸರಿನಂದನ ಹನುಮನು ಇವನು, ಲಂಕೆಯ ಸುಟ್ಟವ ಹನುಮನು ಇವನು,


 


ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..


ಅಂಜನಿ ಸುತನ, ವಾಯುಪುತ್ರನ, ಹನುಮನ ನಂಬಿರಯ್ಯ