ಆಪ್ತರಕ್ಷಕ ನೋಡಲು ಹೋಗಿ ಆದ ಅವಾಂತರ

ಆಪ್ತರಕ್ಷಕ ನೋಡಲು ಹೋಗಿ ಆದ ಅವಾಂತರ

ಬರಹ
ಅಂದು ಭಾನುವಾರ. ಹಿಂದಿನ ದಿನವೇ ನನಗೆ ನನ್ನ ಅಕ್ಕ ಫೋನಾಯಿಸಿ ಭಾನುವಾರ ನನ್ನನ್ನು ನನ್ನ ತಂಗಿಯನ್ನು ಅಪ್ತರಕ್ಷಕ ಚಿತ್ರಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ನಾನು ನನ್ನ ತಾಯಿಗೆ ಹೇಳಲು ಮರೆತೇಬಿಟ್ಟಿದ್ದೆ. ನಮ್ಮ ಮನೆಯಲ್ಲಿ ನನ್ನ ತಂದೆ ಹಾಗೂ ತಾಯಿ ಬಹಳ ಸಂಪ್ರದಾಯಸ್ಥರು. ಸಿನಿಮಾ ಹೋಟೆಲ್ಗಳಿಗೆಲ್ಲ ಹೋಗುವ ಪದ್ಧತಿಯೇ ಇಲ್ಲ. (ಪ್ರತಿ ಭಾನುವಾರ ನಮ್ಮ ತಂದೆ ಊರಿಗೆ ಹೋಗುತ್ತಾರೆ ಹಾಗಾಗಿ ಭಾನುವಾರ ಅಮ್ಮನನ್ನು ಒಪ್ಪಿಸಿದರೆ ಹೋಗಬಹುದೆಂದುಕೊಂಡೆವು)ಭಾನುವಾರ ಅಕ್ಕ ಭಾವ ಇಬ್ಬರು ಬಂದರು. ನಮಗೆ ಭಯ ಶುರುವಾಯಿತು. ಹಿಂದಿನ ದಿನವೇಅಮ್ಮನಿಗೆ ವಿಷಯವನ್ನು ಹೇಳಿ ಒಪ್ಪಿಸಬೇಕಿತ್ತೆಂದುಕೊಂಡೆವು. ನಾನು ಅಕ್ಕನಿಗೆ ಹೇಳಿದೆ ಅಕ್ಕ ನಾನು ಅಮ್ಮನಿಗೆ ಏನು ಹೇಳಿಲ್ಲ ಎಂದು. ಅಕ್ಕನಿಗೋ ಮೊದಲೇ ಹೆದರಿಕೆ ಜಾಸ್ತಿ. ಹೇಗೆ ಅಮ್ಮನನ್ನು ಕೇಳುತ್ತಾರೆ. ನನ್ನ ಅಕ್ಕ ಮದುವೆಯಾದ ಮೇಲೆಯೇ ಥೀಯೇಟರಿನ ಮುಖದರ್ಶನ ಮಾಡಿದ್ದು. ನನ್ನ ಭಾವನವರೇ ನನ್ನ ತಾಯಿಗೆ ನಮ್ಮನ್ನು ಚಿತ್ರಕ್ಕೆ ಕರೆದುಕೊಂಡು ಹೋಗುವ ವಿಷಯ ಹೇಳಿದರು. ಅಮ್ಮ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟರು. ನಾವು ಹೊರಡುವ ಮುನ್ನ ನಮ್ಮ ತಾಯಿಗೆ ಅಮ್ಮ ಹೋಗಿಬರ್ತಿವಿ ಅಂತ ಹೇಳುದ್ವಿ. ಅಮ್ಮ ನಿಮ್ಮಿಷ್ಟ ಅಂತ ಒಂದು ಬಾಂಬ್ ಅನ್ನು ಹಾಕಿದರು. ನಮಗೆ ಅತ್ತ ಹೋಗುವುದಕ್ಕೂ ಮನಸ್ಸಾಗಲಿಲ್ಲ, ಬಿಡುವುದಕ್ಕೂ ಮನಸ್ಸಾಗಲಿಲ್ಲ. ಬರಲ್ಲ ಅಂದ್ರೆ ಇನ್ನೂ ಭಾವನ ಮುಂದೆ ನಮ್ಮ ಮಾನ ನಾವೇ ಕಳೆದುಕೊಂಡ ಹಾಗೆ. ಸರಿ ಹೊರಟೆವು. ನಮಗಂತೂ ಕೂತು ಚಿತ್ರವನ್ನು ಸವಿಯಲಾಗಲೆ ಇಲ್ಲ. ಮನಸ್ಸೆಲ್ಲ ಅಮ್ಮನ ಕಡೆಗೆ ಇತ್ತು. ಮನೆಗೆ ಹೋದ ಮೇಲೆ ಇನ್ನೂ ಏನೇನು ಕಾದಿದೆಯೋ ಅಂತ ಯೋಚಿಸುತ್ತಲೇ ಸಿನಿಮಾ ನೋಡಿ ಮನೆಗೆ ಬಂದೆವು. ಅಮ್ಮನದು ಮಾತಿಲ್ಲ ಕತೆಯಿಲ್ಲ.  ನಮ್ಮ ಜೊತೆ ಮಾತನಾಡಲಿಲ್ಲ. ಸಾಕಷ್ಟು ಕ್ಷಮೆ ಕೇಳಿದ್ದಾಯಿತು. ಅಮ್ಮನದು ಒಂದೇ ಮಾತು. ಯಾರನ್ನು ಕೇಳಿ ನೀವು ಹೋದ್ರೀ ಸಿನಿಮಾಗೆ ಅಂತ. ಆಮೇಲೆ ಬಹಳಷ್ಟು ಬೆಣ್ಣೆ ಹಚ್ಚಿ ಅಮ್ಮನ ಮೇಲೆ ಪ್ರಮಾಣ ಮಾಡಿದೆ. ಏನು ಪ್ರಮಾಣ ಗೊತ್ತಾ? ಇನ್ನು ಮೇಲೆ ಯಾವತ್ತೂ ಸಿನಿಮಾಗೆ ಹೋಗುವುದೇ ಇಲ್ಲ ಎಂದು. ತಟ್ಟನೆ ನನ್ನ ಅಕ್ಕ ಮದುವೆಯಾಗುವವರೆಗೂ ಹೋಗಲ್ಲ ಬಿಡಮ್ಮ ಅವಳು ಅಂದರು. ಆಮೇಲೆ ಅಮ್ಮ ಬುದ್ಧಿ ಹೇಳಿದರು. ಹಾಗೆಲ್ಲಾ ಹೋಗುವುದು ತಪ್ಪು. ಇನ್ನು ಮೇಲೆ ಹೋಗಬೇಡಿ ಎಂದು. ಪುಣ್ಯ ಅಮ್ಮ ಅಂತೂ ರಾಜಿಯಾದರು. ಅಮ್ಮನನ್ನು ಮಾತನಾಡಿಸುವುದಕ್ಕೆ ಒಂದು ದಿನ ಬೇಕಾಯಿತು. ಅಂದೇ ಕಡೆ ಅವತ್ತಿನಿಂದ ಯಾವ ಸಿನಿಮಾಗು ಹೋಗಲಿಲ್ಲ. ನನ್ನ ಸಹೋದ್ಯೋಗಿಗಳು, ಸ್ನೇಹಿತರು ಬಹಳಷ್ಟು ಒತ್ತಾಯ ಮಾಡುತ್ತಾರೆ. ಆದರೆ ನನಗೆ ಸಿನಿಮಾ ಅಂದ ತಕ್ಷಣ ಆ ದಿನ ನೆನಪಾಗುತ್ತದೆ. 
ಶಾರದ ಎಮ್