ಡಾ// ರಾಜ್ ಹಾಗು ಅಮಿತಾಭ್

ಡಾ// ರಾಜ್ ಹಾಗು ಅಮಿತಾಭ್

ಬರಹ

ಈ ಹಾಸ್ಯ ಬರಹವನ್ನು ಮುಂಚೆ ಓದಿರಬಹುದು...ಓದಿದ್ದರೆ ಇನ್ನೊಮ್ಮೆ ಓದಿ ನಕ್ಕು ಹಗುರಾಗಿ....ಇಲ್ಲದಿದ್ದರೆ ತಿರಸ್ಕರಿಸಿ...


 


ಡಾ// ರಾಜ್ ಹಾಗು ಅಮಿತಾಭ್ ರ ನಡುವೆ ವಾಗ್ವಾದ ನಡೆಯುತ್ತಿತ್ತು...ರಾಜ್ ಹೇಳುತ್ತಿದ್ದರು ನನಗೆ ಪ್ರಪಂಚದ ಎಲ್ಲ ಪ್ರಖ್ಯಾತ ವ್ಯಕ್ತಿಗಳಪರಿಚಯವೂ ಇದೆ ಬೇಕಾದರೆ ಆಧಾರ ಸಮೇತವಾಗಿ ನಿರೂಪಿಸಬಲ್ಲೆ  ಎಂದು...


ಆದರೆ ಅಮಿತಾಭ್ ಅಷ್ಟು ಸುಲಭವಾಗಿ ಒಪ್ಪಲು ತಯಾರಿರಲಿಲ್ಲ...


 


ಸರಿ ರಾಜ್ ಅಮಿತಾಭ್ ಗೆ ಹೇಳಿದರು...ನೀವು ಯಾವುದಾದರು ಖ್ಯಾತ ವ್ಯಕ್ತಿಯ ಹೆಸರು ಹೇಳಿರಿ ನಾನು ಅವರೊಡನೆ ಮಾತಾಡಿ ನಿಮ್ಮ ಸಂಶಯವನ್ನು ಪರಿಹರಿಸಬಲ್ಲೆ ಎಂದರು...ಅಮಿತಾಭ್ ಕ್ಷಣ ಕಾಲ ಯೋಚಿಸಿ "ಟಾಮ್ ಕ್ರೂಸ್" ಎಂದಾಕ್ಷಣ...ರಾಜ್ ಅವರು ಹೋ ಗೊತ್ತು ನಡೀರಿ ಹೋಗೋಣ ಎಂದು ಇಬ್ಬರು ಹಾಲಿವುಡ್ ಗೆ ತೆರಳಿದರು. 


 


ರಾಜ್ ಅವರನ್ನು ಕಂಡಾಕ್ಷಣ ಟಾಮ್ "ಅಣ್ಣಾವ್ರೆ" ಎಂದು ಉದ್ಗಾರ ತೆಗೆದು ಅವರಿಗೆ ಊಟೋಪಚಾರ ನೀಡಿ ಬೀಳ್ಕೊಟ್ಟರು. ಇದನ್ನು


ಕಂಡು ಅಮಿತಾಭ್ ಗೆ ನಂಬಲಸಾಧ್ಯವಾಯ್ತು.


ಆದರು ಏನೋ ಗೊತ್ತಿರಬಹುದೆಂದು ....ಈ ಸಲ ಬೇರೆ ಹೆಸರು ಹೇಳಬೇಕೆಂದು ಒಬಾಮ ಎಂದರು..


ಕೂಡಲೇ ರಾಜ್ ಗೊತ್ತೆಂದರು..


ತಕ್ಷಣ ಇಬ್ಬರು ವೈಟ್ ಹೌಸ್ ಗೆ ತೆರಳಿದರು... ಒಬಾಮ ಅಲ್ಲಿ ರಾಜ್ ನ ಕಂಡು ಓಹೋ ಅಣ್ಣಾವ್ರು ಏನಿದು ಅಪರೂಪದ ದರ್ಶನ....ನಾನು ಯಾವುದೊ ಮುಖ್ಯವಾದ ಕೆಲಸದ ಮೇಲೆ ಆಚೆ ಹೊರಟಿದ್ದೆ...ಈಗ ನೀವು ಬಂದಿದ್ದಿರ....ನಿಮಗಿಂತ ಮುಖ್ಯವಾದ ಕೆಲಸ ಯಾವುದು....ಬನ್ನಿ ಒಳಗೆ ಹೋಗೋಣ ಎಂದು ಕರೆದುಕೊಂಡು ಹೋಗಿ


ಉಪಚಾರ ಮಾಡಿ ಬೀಳ್ಕೊಟ್ಟರು...ಇದನ್ನು ಕಂಡ ಅಮಿತಾಭ್ ತಬ್ಬಿಬ್ಬಾದರು...


ಇಷ್ಟಾದರೂ ಅಮಿತಾಭ್ ಸೋಲೊಪ್ಪಲು ತಯಾರಿರಲಿಲ್ಲ...


ಈ ಸಲ ಹೇಗಾದರೂ ಸೋಲಿಸಬೇಕು ಎಂದು "ಪೋಪ್" ಎಂದರು...


ರಾಜ್ ಸ್ವಲ್ಪವು ವಿಚಲಿತರಾಗದೆ ಗೊತ್ತು ಎಂದರು...ರಾಜ್ ಹಾಗು ಅಮಿತಾಭ್ ಇಬ್ಬರು ವ್ಯಾಟಿಕನ್ ಸಿಟಿ ಗೆ ಬಂದರೆ ಅಲ್ಲಿ ಸಿಕ್ಕಾಪಟ್ಟೆ ಜನಸಂದಣಿಯಿತ್ತು.


ಇದನ್ನು ಕಂಡ ರಾಜ್ ಅಮಿತಾಭ್ ಗೆ ಹೇಳಿದರು ನಾನು ಇಲ್ಲಿದ್ದರೆ ಪೋಪ್ ಕಣ್ಣಿಗೆ ಬೀಳುವುದು ತುಂಬಾ ಕಷ್ಟ... ನನಗೆ ಇಲ್ಲಿನ ಭದ್ರತಾ ಸಿಬ್ಬಂದಿಯವರೆಲ್ಲ ಚೆನ್ನಾಗಿ ಪರಿಚಯ, ನೀವು ಇಲ್ಲೇ ನಿಂತಿರಿ...ನಾನು ಮೇಲೆ ಹೋಗಿ ಪೋಪ್ ಅವರೊಡನೆ ಬಾಲ್ಕನಿಗೆ ಬರುತ್ತೇನೆ ಎಂದು ಹೊರಟರು...


 


ಅರ್ಧ ಗಂಟೆಯ ನಂತರ ರಾಜ್ ಪೋಪ್ ಅವರೊಡನೆ ಬಾಲ್ಕನಿಗೆ ಬಂದರು....


 


ರಾಜ್ ಅವರು ವಾಪಸ್ ಕೆಳಗಡೆ ಬರುವ ವೇಳೆಗೆ ಅಮಿತಾಭ್ ಮೂರ್ಚೆ ತಪ್ಪಿ ಬಿದ್ದಿದ್ದರು... ರಾಜ್,ಅವರಿಗೆ ನೀರು ಹಾಕಿ ಎಬ್ಬಿಸಿ ಯಾಕೆ ಏನಾಯ್ತೆಂದು ವಿಚಾರಿಸಿದಾಗ ಅಮಿತಾಭ್ ಹೇಳಿದರು...ಎಲ್ಲಾ ಚೆನ್ನಾಗಿತ್ತು... ಆದರೆ ನೀವು ಪೋಪ್ ಜೊತೆ ಬಾಲ್ಕನಿಗೆ ಬಂದಾಗ ನನ್ನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ನನ್ನನ್ನು ಒಂದು ಪ್ರಶ್ನೆ ಕೇಳಿದ


 


ಆ ಪ್ರಶ್ನೆ ಕೇಳಿ ನನಗೆ ಮೂರ್ಚೆ ತಪ್ಪಿತು ಎಂದರು.... ಆ ಪ್ರಶ್ನೆಯಾದರೂ ಏನೆಂದು ಕೇಳಿದಾಗ ಅಮಿತಾಭ್ ಹೇಳಿದ್ದು....


 


ಆ ವ್ಯಕ್ತಿ ನನ್ನ ಕೇಳಿದ ಸ್ವಾಮಿ ಮೇಲೆ ರಾಜ್ ಪಕ್ಕದಲ್ಲಿ ನಿಂತಿರುವ ವ್ಯಕ್ತಿ ಯಾರೆಂದು?