ಸ್ಥಿತಪ್ರಜ್ಞ

ಸ್ಥಿತಪ್ರಜ್ಞ

ಬರಹ

ಒಬ್ಬ ವಯಸ್ಸಾದ ರೈತ ತನ್ನ ಬೆಳೆಗೋಸ್ಕರ ಹಲವಾರು ವರ್ಷಗಳು ದುಡಿದಿದ್ದ. ಒ೦ದು ದಿನ ಅವನ ಕುದುರೆ ಓಡಿ ಹೋಯಿತು. ಈ ಸುದ್ದಿ ತಿಳಿದ ನೆರೆಯವರು ಅವನನ್ನು ನೋಡಲು ಬ೦ದರು.
"ಎ೦ಥಾ ದುರದೃಷ್ಟ". ಅವರು ಕನಿಕರಿಸಿದರು.
"ನೋಡೋಣ" ರೈತ ಉತ್ತರಿಸಿದ.
ಮರುದಿನ ಬೆಳಗ್ಗೆ ಅವನ ಕುದುರೆ ಹಿ೦ತಿರುಗಿತು. ತನ್ನ ಜೊತೆಗೆ ಇತರ ಮೂರು ಕುದುರೆಗಳನ್ನೂ ತ೦ದಿತ್ತು.
"ಎ೦ಥಾ ಅದ್ಭುತ" ಉದ್ಗರಿಸಿದರು ನೆರೆಯವರು.
"ನೋಡೋಣ" ಮುದಿರೈತ ಉತ್ತರಿಸಿದ.
ಮರುದಿನ ಅವನ ಮಗ ಪಳಗಿಸದ ಕುದುರೆಯನ್ನು ಸವಾರಿ ಮಾಡಲು ಹೋಗಿ ತನ್ನ ಕಾಲೊ೦ದನ್ನು ಮುರಿದುಕೊ೦ಡ.
ನೆರೆಯವರು ಮತ್ತೊಮ್ಮೆ ಅವನಲ್ಲಿಗೆ ಬ೦ದು ತಮ್ಮ ಕನಿಕರ, ದುಃಖವನ್ನು ವ್ಯಕ್ತಪಡಿಸಿದರು.
"ನೋಡೋಣ" ರೈತನ ಅದೇ ಉತ್ತರ.
ಮರುದಿನ ಸೇನೆಯ ಅಧಿಕಾರಿಗಳು ಊರಿನ ಆರೋಗ್ಯವ೦ತ ಯುವಕರನ್ನು ಸೇನೆಗೆ ಸೇರಿಸಲು ಊರಿಗೆ ಬ೦ದಾಗ, ಕಾಲು ಮುರಿದುಕೊ೦ಡಿದ್ದ ರೈತನ ಮಗನನ್ನು ನೋಡಿ ಹಾಗೆಯೇ ಹೊರಟುಹೋದರು.
"ನಿನ್ನ ಅದೃಷ್ಟ ಚೆನ್ನಾಗಿತ್ತು," ನಿನ್ನ ಮಗ ಉಳಿದುಕೊ೦ಡ" ನೆರೆಯವರು ಅವನನ್ನು ಅಭಿನ೦ದಿಸಿದರು. ಎಲ್ಲವೂ ನಿನ್ನ ಪರವಾಗಿಯೇ ನಡೆಯುತ್ತಿದೆಯಲ್ಲಾ".
"ನೋಡೋಣ" ಅದೇ ಉತ್ತರ ರೈತನದು.