ನೀರು ಹರಿಯುವುದು ಕಡಲಿನ ಕಡೆಗೆ
ರೂಪ ಅವರು ಹಾಕಿದ್ದ ಆಲದ ಮರದ ಬಿಳಲುಗಳ ಚಿತ್ರವನ್ನು ನೋಡಿದಾಗ ಏಕೋ ಈ ಸುಭಾಷಿತ ನೆನಪಾಯಿತು. ಅಥವಾ, ಇವತ್ತು ಇಲ್ಲಿ ಬೆಟ್ಟದ ಮೇಲೆ ಬೀಳುತ್ತಿರುವ ಮಂಜಿನಿಂದಲೋ? ಯಾಕೋ ಬಗೆಹರಿಯದು. ಬಿಡಿ. ಒಂದು ಒಳ್ಳೇ ಮಾತು ಹೇಳಲು ಪೀಠಿಕೆ ಬೇರೆ ಬೇಕಾ?
ಬಾನಿಂದ ಬೀಳುವ ಮಳೆಯ ನೀರೆಲ್ಲ ಕಡೆಗೆ ಹರಿವುದು ಕಡಲ ಕಡೆಗೆ
ನೀನಾವ ದೇವನಿಗೆ ಮಣಿವಾಗಲೂ ಅದು ತಲುಪುವುದು ಹರಿಯ ಕಡೆಗೆ!
ಸಂಸ್ಕೃತ ಮೂಲ:
ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
ಸರ್ವದೇವನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ||
(* ಮೂಲದ ಕೇಶವ ಅನ್ನುವ ಪದವನ್ನು ಕನ್ನಡದಲ್ಲಿ ಹರಿ ಎಂದು ಬದಲಾಯಿಸಿದ್ದೇನೆ. ಹರಿ, ಮತ್ತು ಕಡೆ ಎರಡೂ ಪದಗಳಲ್ಲಿ ಶ್ಲೇಷೆ ಮಾಡುವಾಸೆಯಿಂದಷ್ಟೆ! ಕ್ಷಮೆ ಇರಲಿ.)
-ಹಂಸಾನಂದಿ
Rating
Comments
ಉ: ನೀರು ಹರಿಯುವುದು ಕಡಲಿನ ಕಡೆಗೆ
ಉ: ನೀರು ಹರಿಯುವುದು ಕಡಲಿನ ಕಡೆಗೆ
ಉ: ನೀರು ಹರಿಯುವುದು ಕಡಲಿನ ಕಡೆಗೆ
ಉ: ನೀರು ಹರಿಯುವುದು ಕಡಲಿನ ಕಡೆಗೆ
ಉ: ನೀರು ಹರಿಯುವುದು ಕಡಲಿನ ಕಡೆಗೆ
In reply to ಉ: ನೀರು ಹರಿಯುವುದು ಕಡಲಿನ ಕಡೆಗೆ by kannadakanda
ಉ: ನೀರು ಹರಿಯುವುದು ಕಡಲಿನ ಕಡೆಗೆ