ಇಂಟರ್ನೆಟ್ ಎಕ್ಷ್ಪ್ಲೋರರ್ ಬಳಸ್ತಿದೀರಾ? ಹಾಗಿದ್ರೆ ಎಚ್ಚರಿಕೆ

ಇಂಟರ್ನೆಟ್ ಎಕ್ಷ್ಪ್ಲೋರರ್ ಬಳಸ್ತಿದೀರಾ? ಹಾಗಿದ್ರೆ ಎಚ್ಚರಿಕೆ

ಬರಹ


ಇಂಟರ್ನೆಟ್ ಬಳಸ್ಲಿಕ್ಕೆ  ಮೈಕ್ರೋಸಾಫ್ಟ್ ನ ಇಂಟರ್ನೆಟ್  ಎಕ್ಸ್ ಪ್ಲೋರರ್ ಬಳಸ್ತಿದೀರಾ? ಹಾಗಿದ್ರೆ ಎಚ್ಚರಿಕೆ!  ಈಗಲೇ ಬೇರೆ ಬ್ರೌಸರ್ ಬಳಸ್ಲಿಕ್ಕೆ ಶುರುಮಾಡಿ. ಹಾಗಂತ ಸ್ವತ: ಮೈಕ್ರೋಸಾಪ್ಟ್ ಹೇಳಿದೆ. ಯಾಕಂದ್ರೆ ಅದರಲ್ಲಿ ಹೊಸದೊಂದು ಸುರಕ್ಷತಾ ನ್ಯೂನ್ಯತೆ (Security Flaw) ಕಾಣಿಸಿಕೊಂಡಿದೆ.

ಕಳೆದ ಮಂಗಳವಾರ ಮೈಕ್ರೋಸಾಫ್ಟ್ ಪ್ಯಾಚ್ ಡೇ ದಿನ ಬಿಡುಗಡೆಯಾದ ಎಂಟು security bulletins ಮತ್ತು ಒಂದು security advisory ಕೂಡ ಓದಿ. ಇನ್ಪಾರ್ಮೇಷನ್ ವೀಕ್ ನಿಮಗೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡುತ್ತದೆ ಅದರ ಕೊಂಡಿಯನ್ನ ಈ ಲೇಖನದ ಕೊನೆಯಲ್ಲಿ ಕೊಡಲಾಗಿದೆ. 

ಇದು ಕ್ರಿಮಿನಲ್ ಗಳಿಗೆ ನಿಮ್ಮ ಕಂಪ್ಯೂಟರಿನ ಪಾಸ್ವರ್ಡ್ ಇತ್ಯಾದಿಗಳನ್ನ ಕದಿಯಲು ತುಂಬಾ ಸಹಕಾರಿಯಾಗಿದೆ. ಇದು ಇಂಟರ್ನೆಟ್ ಎಕ್ಸ್ಪ್ಲೋರರ್ ನ ಎಲ್ಲಾ ಆವೃತ್ತಿಗಳಿಗೂ ಅನ್ವಯಿಸುತ್ತದೆ.

ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ವೆಬ್ ಸೈಟ್ ಗಳನ್ನ ಈ ನ್ಯೂನ್ಯತೆ ಬಳಸಿಕೊಳ್ಳಲು ಕೊನೆಯ ವಾರದಿಂದಲೇ ತಿದ್ದಲಾಗಿದೆ ಅಂತ  ಟೆಂಡ್ ಮೈಕ್ರೋ ಕೂಟ ಹೇಳಿದೆ.

ನಿಮ್ಮ ಹಣ, ಖಾಸಗಿ ಮಾಹಿತಿಗಳ ಗೌಪ್ಯತೆ ಇತ್ಯಾದಿಗಳ ಸುರಕ್ಷತೆಗೆ ನೀವು ಚಿಂತಿಸುದೇ ಆದರೆ ಇಂದೇ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶವನ್ನ ಬಳಸ್ಲಿಕ್ಕೆ ಶುರುಮಾಡಿ.

ಇಂಟರ್ನೆಟ್ ಎಕ್ಸ್ ಪ್ಲೋರರ್ ನ ಈ ತೊಂದರೆಗೆ ತಕ್ಷಣದ ಪರಿಹಾರ FOSS ತಂತ್ರಾಂಶ. ಫೈರ್ ಫಾಕ್ಸ್ ಇದೆಯಲ್ಲ. ಇಂದೇ ಬಳಸ್ಲಿಕ್ಕೆ ಶುರುಮಾಡಿ.

ಸುದ್ದಿ ಮೂಲ : ಬಿ.ಬಿ.ಸಿ

ಇನ್ಪಾರ್ಮೇಷನ್ ವೀಕ್