ಶೃಂಗೇರಿ ಶಾರದಾ ಪೀಠದ ಗುರುಪರಂಪರೆ

ಶೃಂಗೇರಿ ಶಾರದಾ ಪೀಠದ ಗುರುಪರಂಪರೆ

ಬರಹ

http://www.sringeri.net/gallery/Acharyas/Abhinava_Vidyatirtha/abhinava_vidyatirtha_swami_05.jpg

ಚಿತ್ರ:  ಉತ್ತರ ಭಾರತ ಪ್ರವಾಸದಲ್ಲಿ ಸಾಧುಗಳೊಡನೆ ಶ್ರೀ ಅಭಿನವ ವಿದ್ಯಾತೀರ್ಥರು

ಜ್ವಾಲಾಮುಖಿ ಕನ್ನಡಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮಾಹಿತಿಯನ್ನು ಚಾಮರಾಜನಗರ ಜಿಲ್ಲೆಯ ರಾಮಸಮುದ್ರದ ಶ್ರೀ ಮತಿ ಆರ್.ಸುಮಿತ್ರಮ್ಮ ಮತ್ತು ಗಮಕ ವಿದ್ವಾನ್ ಶ್ರೀ ಆರ್.ಕೆ.ರಾಜಗೋಪಾಲ್ ಎಂಬುವರು ಮುದ್ರಿಸಿ ಹಂಚಿದ್ದ ಒಂದು ಅಪರೂಪದ ಮಾಹಿತಿಯು ಹಾಸನದ ಶ್ರೀ ಶಂಕರ ಮಠದಲ್ಲಿ ನನ್ನ ಕಣ್ಣಿಗೆ ಬಿತ್ತು. ಸಂಪದಿಗರಿಗಾಗಿ ಅದೇ ಮಾಹಿತಿಯನ್ನು ನೀಡಿರುವೆ. ಆದಿ ಶಂಕರಾಚಾರ್ಯರಿಂದ ಮೊದಲ್ಗೊಂಡು ಇಂದಿನ ಶ್ರೀ ಭಾರತೀ ತೀರ್ಥರ ವರಗೆ ಒಂದುಸಾವಿರದ ಇನ್ನೂರು ವರ್ಷಗಳಲ್ಲಿ ನಿರಂತರವಾಗಿ ೩೬ ಜನ ಪೀಠಾಧಿಪತಿಗಳ ಮಾಹಿತಿ ಸಿಕ್ಕಿರುವುದು ಒಂದು ಅಚ್ಚರಿಯೇ ಸರಿ. ಆದರೆ ಶ್ರೀ ಶಂಕರರ ಜನ್ಮವನ್ನೇ ಅವರ ಸನ್ಯಾಸ ಸ್ವೀಕರಿಸಿದ ದಿನವೆಂದು ನಮೂದಿಸಿದಂತೆ ಕಾಣುತ್ತದೆ. ಉಳಿದಂತೆ ಸನ್ಯಾಸ ಸ್ವೀಕರಿಸಿದ ವರ್ಷವಿರಬಹುದು.ಹನ್ನೊಂದನೆಯ ಗುರುಗಳಾದ ಶ್ರೀ ಭಾರತೀ ಕೃಷ್ಣ ತೀರ್ಥರು ಸುಮಾರು ೧೦೫ ವರ್ಷಗಳು ಪೀಠವನ್ನಲಂಕರಿಸಿದ್ದರೆಂದು ತಿಳಿದು ಬರುತ್ತದೆ. ಆರನೂರೈವತ್ತು ವರ್ಷಗಳಿಗೂ ಹಿಂದೆ ಅವರು ಸುಮಾರು ನೂರಿಪ್ಪತ್ತು ವರ್ಷಗಳು ಬದುಕಿದ್ದಿರಲೂ ಬಹುದು. ಶ್ರೀ ನರಸಿಂಹ ಭಾರತೀ ಹೆಸರು ಏಳು ಭಾರಿ ಪುನರಾವೃತ್ತಿಯಾಗಿದೆ. ವಂಶ ಪರಂಪರೆಯಲ್ಲಿ ಮೂರು ನಾಲ್ಕು ತಲೆಮಾರುಗಳ ಹೆಸರನ್ನು ಮಕ್ಕಳು ಮೊಮ್ಮಕ್ಕಳಿಗೆ ಇಡುವುದು ಸಾಮಾನ್ಯವಾಗಿದ್ದು ಗುರುಪರಂಪರೆಯಲ್ಲೂ ಹಿಂದಿನ ಗುರುಗಳ ಹೆಸರನ್ನೇ ಎರಡು-ಮೂರು-ಏಳು ಭಾರಿ ಕರೆದಿರಬಹುದು. ಈಗ ಪಟ್ಟಿ ನೋಡಿ.
ಪೀಠಾಧಿಪತಿಗಳು---- ಸನ್ಯಾಸ ಸ್ವೀಕಾರ--- ದೇಹ ಮುಕ್ತಿ
1ಶ್ರೀ ಶಂಕರ ಭಗವತ್ಪಾದರು: 788-- 820
2 ಶ್ರೀ ಸುರೇಶ್ವರಾಚಾರ್ಯ :813-- 834
3 ಶ್ರೆ ನಿತ್ಯ ಭೋಧ ಘನ :818---848
4 ಶ್ರೀಜ್ಞಾನ ಘನ :846---910
5 ಶ್ರೀಜ್ಞಾನೋತ್ತಮ :905---954
6 ಶ್ರೀಜ್ಞಾನ ಗಿರಿ :950---1038
7 ಶ್ರೀ ಸಿಂಹಗಿರಿ :1036---1098
8 ಶ್ರೀ ಈಶ್ವರ ತೀರ್ಥ :1097---1146
9 ಶ್ರೀ ನರಸಿಂಹ ತೀರ್ಥ :1146---1229
10 ಶ್ರೀ ವಿದ್ಯಾಶಂಕರ ತೀರ್ಥ :1228---1333
11 ಶ್ರೀ ಭಾರತೀ ಕೃಷ್ಣ ತೀರ್ಥ :1328---1380
12 ಶ್ರೀ ವಿದ್ಯಾರಣ್ಯ :1331---1386
13 ಶ್ರೀ ಚಂದ್ರಶೇಖರ ಭಾರತೀ-೧:1368---1389
14 ಶ್ರೀನರಸಿಂಹ ಭಾರತೀ-೧ :1388---1408
15 ಶ್ರೀ ಪುರುಷೋಮ ಭಾರತೀ-೧ :1406---1448
16 ಶ್ರೀ ಶಂಕರ ಭಾರತೀ :1429---1455
17 ಶ್ರೀ ಚಂದ್ರಶೇಖರ ಭಾರತೀ-೨ :1449---1464
18 ಶ್ರೀನರಸಿಂಹ ಭಾರತೀ-೨ :1464---1479
19 ಶ್ರೀ ಪುರುಷೋಮ ಭಾರತೀ-೨ :1473---1517
20 ಶ್ರೀ ರಾಮಚಂದ್ರ ಭಾರತೀ :1508---1560
21 ಶ್ರೀನರಸಿಂಹ ಭಾರತೀ-೩ :1557---1573
22 ಶ್ರೀನರಸಿಂಹ ಭಾರತೀ-೪ :1563---1576
23 ಶ್ರೀನರಸಿಂಹ ಭಾರತೀ-೫ :1576---1600
24 ಶ್ರೀ ಅಭಿನವ ನರಸಿಂಹ ಭಾರತೀ-೧ :1559---1623
25 ಶ್ರೀಸಚ್ಚಿದಾನಂದ ಭಾರತೀ-೧ :1622---1663
26 ಶ್ರೀನರಸಿಂಹ ಭಾರತೀ-೬ :1663---1706
27 ಶ್ರೀಸಚ್ಚಿದಾನಂದ ಭಾರತೀ-೨ :1706---1741
28 ಶ್ರೀ ಅಭಿನವ ಸಚ್ಚಿದಾನಂದ ಭಾರತೀ-೧ :1741--- 1767
29 ಶ್ರೀನರಸಿಂಹ ಭಾರತೀ-೭ :1767---1770
30 ಶ್ರೀಸಚ್ಚಿದಾನಂದ ಭಾರತೀ-೩ :1770----1814
31 ಶ್ರೀ ಅಭಿನವ ಸಚ್ಚಿದಾನಂದ ಭಾರತೀ-೨ :1814---1817
32 ಶ್ರೀನರಸಿಂಹ ಭಾರತೀ-೮ :1817---1879
33 ಶ್ರೀಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತೀ:1866- 1912
34 ಶ್ರೀ ಚಂದ್ರಶೇಖರ ಭಾರತೀ-೩ :1912---1954
35 ಶ್ರೀ ಅಭಿನವ ವಿದ್ಯಾ ತೀರ್ಥ :1931---1989
36 ಶ್ರೀ ಭಾರತೀ ತೀರ್ಥ: 1974 ರಲ್ಲಿ ಸನ್ಯಾಸ ಸ್ವೀಕಾರ.
ಮಾಹಿತಿ ಕೃಪೆ :ಜ್ವಾಲಾಮುಖಿ ಪತ್ರಿಕೆ

 

ಮುಂದುವರೆದಂತೆ:

ಈ ಲೇಖನವನ್ನು ಪ್ರಕಟಿಸಿದ ಮೇಲೆ ಇದೇ ಲೇಖನ ಹೋಲುವ ಮತ್ತೊಂದು ಲೇಖನ ೨೦೦೭ ರಲ್ಲಿಯೇ ಸಂಪದದಲ್ಲಿ ಪ್ರಕಟ ವಾಗಿದೆ.ಎಂಬುದು ಇದೇ ಪುಟದಲ್ಲಿ ಗೋಚರವಾಯ್ತು. ಅದರ ಲೇಖಕರು ಅನ್ಯಥಾ ಭಾವಿಸ ಬಾರದಾಗಿ ವಿನಂತಿಸುವೆ.