ಅನ್ನವೆಂದರೆ ? - ೨

ಅನ್ನವೆಂದರೆ ? - ೨

ಬರಹ

ಅನ್ನಂ ನ ಪರಿಚಕ್ಷೀತ| ತದ್ ವ್ರತಂ |
ಆಪೋ ವಾ ಅನ್ನಂ | ಜ್ಯೋತಿರನ್ನಾದಂ |
ಅಪ್ಸು ಜ್ಯೋತಿ: ಪ್ರತಿಷ್ಠಿತಮ್ | ಜ್ಯೋತಿಷ್ಯಾಪ: ಪ್ರತಿಷ್ಠಿತಾ: |
ತದೇ ತದನ್ನಮನ್ನೇ ಪ್ರತಿಷ್ಠಿತಮ್ | ಸ ಯ ಏತದನ್ನಮನ್ನೇ ಪ್ರತಿಷ್ಠಿತಮ್ ವೇದ ಪ್ರತಿಷ್ಠತಿ |

ಅನ್ನವನ್ನು ನಿರಾಕರಿಸಬೇಡ.ಇದನ್ನು ವ್ರತದಂತೆ ಪಾಲಿಸು.ಜಲವೂ ಕೂಡ ಅನ್ನವೇ.ಬೆಳಕೂ ಕೂಡ ಅನ್ನವೇ .ನೀರು ಬೆಳಕಿನಲ್ಲಿ ಪ್ರತಿಷ್ಟಿತವಾಗಿದೆ.ಅಂತೆಯೇ ಬೆಳಕು ನೀರಿನಲ್ಲಿ ಪ್ರತಿಷ್ಟಿತವಾಗಿದೆ.ಅನ್ನದಲ್ಲಿ ಶಕ್ತಿ ಪ್ರತಿಷ್ಟಿತವಾಗಿರುತ್ತದೆ

ನಮ್ಮಲ್ಲಿ ಕೆಲವರು ಊಟ ಮಾಡಿಕೊಂಡು ಹೋಗು ಅಂತಾರೆ, ತುಂಬಾ ಅವಸರ ಇದ್ದರೆ ನಾವು, 'ಬೇಡ ನಂಗೆ ಟೈಮ್ ಆಗಿದೆ' ಅಂತ ಹೇಳಿ ಹೋಗಿ ಬಿಡ್ತೀವಿ.ಅನ್ನವನ್ನು ಬೇಡ ಅನ್ನಬೇಡಿ ಅವರು ಹಾಗೆ ಹೇಳಿದ್ದಕ್ಕಾದರೂ ಸ್ವಲ್ಪ ಸಕ್ಕರೆಯನ್ನೋ,ಇಲ್ಲ ಒಂದು ತುತ್ತು ಊಟ ಮಾಡಿ ಹೋಗಿ.(ನನ್ನ ಜೀವನದಲ್ಲಿ ಆದ ಘಟನೆಗಳು ಇದನ್ನ ಪುಷ್ಟೀಕರಿಸಿದೆ.ಎಷ್ಟೋ ಸರ್ತಿ ನಾನೂ ಊಟ ಮಾಡದೆ ಹಾಗೆ ಹೋದದ್ದುಂಟು ಅವಾಗ ಸಾಕಷ್ಟು ತೊಂದರೆಗಳನ್ನ ಅನುಭವಿಸಿದ್ದೇನೆ.ಅದು ಕಾಕತಾಳೀಯನೋ ಏನೋ ಗೊತ್ತಿಲ್ಲ.ನೀವು ಇದನ್ನ ಮೂಢ ನಂಬಿಕೆ ಅಂತನಾದ್ರೂ ಅನ್ನಿ ಆದ್ರೆ ಆಗಿದ್ದು ನಿಜ).ಇಲ್ಲ ಹೊರಡಲಿಕ್ಕಿಂತ ಮುಂಚೆ
ಅವರಿಗೆ ಹೇಳಿಬಿಡಿ 'ನಾನು ಬೇಗ ಹೋಗ ಬೇಕಾಗಿದೆ ಊಟಕ್ಕೆ ನಿಲ್ಲುವುದಿಲ್ಲ' ಅಂತ.
ನೀರು ಮತ್ತು ಬೆಳಕು ಧಾನ್ಯಗಳ ಬೆಳೆಯುವಿಕೆಗೆ ಸಹಕಾರಿ ಎಂಬುದು ನಮಗೆ ತಿಳಿದೇ ಇದೆ. ನೀರು , ಬೆಳಕು ಇವುಗಳ ಶಕ್ತಿಯನ್ನು ಹೀರಿಕೊಂಡು ಬೆಳೆದ ಅನ್ನವನ್ನು ನಾವು ತಿನ್ನುತ್ತೇವೆ .ನಾವು ತಿಂದ ಅನ್ನವು ಪ್ರಾಣವನ್ನು ದೇಹದಲ್ಲಿ ಪ್ರತಿಷ್ಟಾಪಿಸುತ್ತದೆ . ಇಲ್ಲಿ ಬೆಳಕು ಎಂದರೆ ಸೂರ್ಯ . ಸೂರ್ಯನಿಲ್ಲದೆ ನೀರಿಲ್ಲ (ಆವಿಯಾಗಿ, ಮೋಡವಾಗಿ, ಮಳೆ ಬರುವ ಕ್ರಿಯೆ ) .ಇವೆರಡೂ ಇಲ್ಲದೆ ದೇಹ, ಪ್ರಾಣಗಳಿಲ್ಲ.