ಮುಖ ನೋಡಿ ವ್ಯಕ್ತಿತ್ವ ಅಳೆದೆನೇ?

ಮುಖ ನೋಡಿ ವ್ಯಕ್ತಿತ್ವ ಅಳೆದೆನೇ?

ಮೊನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಡುವಾಗ ರಾತ್ರಿ ಹತ್ತು ಘಂಟೆಯಾಗಿತು
ನಮ್ಮ ಮನೆಯಿಂದ ಇನ್ಸ್ಟಿಟ್ಯೂಟ್ ಸ್ವಲ್ಪ ದೂರ .
ಸ್ಕೂಟಿ ಸ್ಟಾರ್ಟ್ ಮಾಡಿ ಹೊರಡುತಿದ್ದಂತೆ ಸ್ವಲ್ಪ ದೂರದಲ್ಲಿ ಸ್ಕೂಟಿ ನಿಂತು ಬಿಟ್ಟಿತು
ನಂತರ ಏನು ಮಾಡಿದರೂ ಸ್ಟಾರ್ಟ್ ಆಗ್ತಾ ಇಲ್ಲ.
ಕೆಲವರು ನೋಡ್ಕೊಂಡು ಹೋಗ್ತಾ ಇದ್ದರೂನಾನೆ ಕರೀಲಿಲ್ಲ
ಒಬ್ಬ ವ್ಯಕ್ತಿ ಮುಂದೆ ಯಿಂದ ಬಂದ
ಒಳ್ಳೆ ರೌಡಿ ಇದ್ದ ಹಾಗೆ ಇದ್ದ ಉದ್ದುದ್ದ ಕೂದಲು, ದುರುಗುಟ್ಟಿಕೊಂಡು ನೋಡಿಕೊಂಡು ಹೋದ. ಕೆಂಪು ಕಣ್ಣು. ಸ್ವಲ್ಪ ಮಾಸಲೆನಿಸುವ ಬಟ್ಟೆ
ಸಣ್ಣಗೆ ಹೆದರಿಕೆ ಆಯ್ತು ನಮ್ಮ ಆಫೀಸ್ ಹುಡುಗನಿಗೆ ಫೋನಾ ಮಾಡೋಣ ಅಂತನ್ನಿಸಾತಾದರೂ ಪಾಪ ಯಾಕೆ ಅಂತ ಸುಮ್ಮನಾದೆ . ಸ್ವಲ್ಪ ಹೊತ್ತು ಕಿಕ್
ಮಾಡಿದೆ ಆದರೂ ಶುರು ಆಗಲಿಲ್ಲ.
ಅಷ್ಟರಲ್ಲಿ ಆ ವ್ಯಕ್ತಿ ಮತ್ತೆ ವಾಪಾಸ್ ಬಂದ ಒಂದೆರೆಡು ಬಾರಿ ನನ್ನ ಮುಂದೇನೆ ಓಡಾಡಿದ.
ನನಗನ್ನಿಸಿತು
ಇವತ್ತು ನಂಗೇನೋ ಕಾದಿದೆ
ಕೊರಳಲ್ಲಿ ಚಿನ್ನದ ಸರ, ಬೆನ್ನಲ್ಲಿ ಲ್ಯಾಪ್‍ಟಾಪ್, ಕೈಯ್ಯಲ್ಲಿದ್ದ ಉಂಗುರ ಭಯ ಆಗತೊಡಗಿತು. ಸ್ಕೂಟೀನ ಸ್ವಲ್ಪ ಮುಂದೆ ತಳ್ಳಿಕೊಂಡು ಹೋದರೆ ನಂಗೆ ಗೊತ್ತಿರೋರ ಮನೆ ಇದೆ ಆದರೆ ಅಲ್ಲೀವರೆಗೆ ತಳ್ಳಬೇಕಲ್ಲಾ ಎಂದುಕೊಂಡು ಹೇಗೋ ಕಷ್ತ ಪಟ್ಕೊಂಡು ತಳ್ತಾ ಇದ್ದೆ ಒಂದೊಂದ್ಸಲಕ್ಕೂ ಹಿಂದೆ ನೋಡ್ಕೊಂಡೂ ಎಲ್ಲಾದರೂ ಹಿಂದೆ ಯಿಂದ ಆಟ್ಯಾಕ್ ಮಾಡಿದರೆ ಅನ್ನೋ ಭಯ ಸ್ವಲ್ಪ ದೂರ ತಳ್ತಾ ಇದ್ನೇನೂ ಆಗಲೇ
ಆತ ನನ್ನ ಮುಂದೆ ಬಂದು ನಿಂತ್ಕೊಂಡ ."ಮೇಡಮ್ ನೀವು ರೂಪ ಮೇಡಮ್ ಅಲ್ವಾ" ಅಂದ. ಸ್ವಲ್ಪ ಸಮಾಧಾನವಾಯ್ತು. ಕುಡಿದಿದ್ದನೇನೋ ಅನ್ನಿಸ್ತಿತ್ತು.
ಆದರೂ ಯಾಕೆ ಅವನ ಹತ್ರ ಅಂದ್ಕೊಂಡು ಹೌದು ಅಂದೆ
"ನಾನು ಮೇಡಮ್ ರಾಜೇಶ್ ಬಿಟಿಎಮ್ ಲೇಔಟ್‌ನಲ್ಲಿ ನಿಮ್ಮ ಹತ್ರ ಕ್ಲಾಸ್‌ಗೆ ಬರ್ತಾ ಇದ್ನಲ್ಲವಾ? ಆಗ್ಲೇ ಕೇಳೋಣ ಅನ್ಕೊಂಡೆ ನೀವೇ ಅಲ್ವಾ ಹೌದಾ ಅಂತಾ ನೋಡ್ತಾ ಇದ್ದೆ"
ನಾನು ಮಾತುಗಳಿಗೆ ಹುಡುಕಾಡಿದೆ.
"ರಾಜೇಶ್ ಹೂ ಹೂ ನೆನಪಿಗೆ ಬಂತು"ಯಾವ ರಾಜೇಶಾನೂ ನೆನಪಿಗೆ ಬರಲಿಲ್ಲ ಸುಮ್ಮನೆ ಹೇಳಿದೆ
""ಸರೀರಿ ಮೇಡಮ್ ಸ್ಟಾರ್ಟ್ ಮಾಡಿಕೊಡ್ತೀನಿ " ಎಂದು ಸ್ಕೂಟಿ ತೆಗೆದುಕೊಂಡು ಬಲವಾಗಿ ಕಿಕ್ ಮಾಡಿ ಸ್ಟಾರ್ಟ್ ಮಾಡಿಕೊಟ್ಟ
ಮೇಡಮ್ ರಾತ್ರಿಯಾಗಿದೆ ಇಷ್ಟು ಹೊತ್ನಲ್ಲಿ ಒಬ್ಬೊಬ್ಬರೇ ಓಡಾಡ್ತಾ ಇದಿರಲ್ಲ ಮೇಡಮ್ . ಆದ್ರೂ ಹುಷಾರು ಮೇಡಮ್, ಹೇಳಿದ
"ಥ್ಯಾಂಕ್ಸ್ ಹೇಳಿದೆ ಇನ್ಸಿಟೂಟ್‍ಗೆ ಬಾ ಎಂದು ಹೇಳಿದೆ
ಮನೆಗೆ ಹೋಗುವಾಗ ನಾನ್ಯಾಕೆ ಅಷ್ಟೊಂದು ಕೀಳಾಗಿ ಯೋಚಿಸಿದೆ, ಮನುಷ್ಯ ಮನುಷ್ಯರ ಬಗ್ಗೆ ನಂಬಿಕೆ ಕಳೆದುಕೊಳ್ತಾ ಇದ್ದರೆ ಮುಂದೆ ಹೇಗೆ
ಆಗಲೆ ಜ್ನಾನದೇವ್ ಸಾರ್ ಬರೆದ ಲೇಖನದ ನೆನಪು ಬಂತು . ಅಂತಹ ಎಷ್ಟೋ ಲೇಖನಗಳನ್ನು ಓದಿದರೂ ನನ್ನ ಸ್ವಭಾವ ಚೇಂಜ್ ಆಗಲ್ಲ ಅಂತ ಅನ್ನಿಸಿ ಬೇಜಾರು ಆಯ್ತು

Rating
No votes yet

Comments