ಭಗವಂತನ ಪ್ರಿಯ ಭಕ್ತನ ಗುಣಗಳು

ಭಗವಂತನ ಪ್ರಿಯ ಭಕ್ತನ ಗುಣಗಳು

ಬರಹ

ಪ್ರೀತಿ ಮತ್ತು ಭಕ್ತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ .ಭಗವಂತನ ಮೇಲಿನ ಪ್ರೀತಿ ರಹಿತ ಭಕ್ತಿ , ಭಕ್ತಿ ರಹಿತ ಪ್ರೀತಿ ನಿಷ್ಪ್ರಯೋಜಕ . ಭಗವದ್ಗೀತೆಯ ಭಕ್ತಿಯೋಗದಲ್ಲಿ ಅರ್ಜುನನು ಶ್ರೀ ಕೃಷ್ಣನನ್ನು 'ಯಾರು ಉತ್ತಮ ಜ್ಞಾನಿ , ನಿನ್ನನ್ನು ಅರಾಧಿಸುವವನೋ ? ಅಥವಾ ಬ್ರಹ್ಮನನ್ನು ಅರಾಧಿಸುವವನೋ ?' ಎಂದು ಪ್ರಶ್ನಿಸುತ್ತಾನೆ .ಕೃಷ್ಣನಿಗೆ ಇಬ್ಬರೂ ಪ್ರಿಯರೇ.ಪರಮಾತ್ಮನನ್ನು ಏಕಾಗ್ರತೆಯಿಂದ ನಿರಂತರವಾಗಿ ಧ್ಯಾನಿಸುವವನು ಉತ್ತಮನು . ಹಾಗೆಯೇ ಇಂದ್ರಿಯ ನಿಗ್ರಹದಿಂದ , ನಮ್ಮ ಮನಸ್ಸಿಗೂ ನಿಲುಕದ ಸದಾ ಏಕೀಭಾವದಿಂದಿರುವ ನಿರಾಕಾರ ,ನಿರ್ಗುಣ ,ಅಶಾಶ್ವತವಲ್ಲದ ,ನಾಶಹೊಂದದ ಸಚ್ಚಿದಾನಂದ ಬ್ರಹ್ಮನನ್ನು ಅಥವಾ ಶೂನ್ಯನನ್ನು ಅಥವಾ ಪೂರ್ಣನನ್ನು ಅರಾಧಿಸುವವನು ಪರಮಾತ್ಮನನ್ನು ಪಡೆದುಕೊಳ್ಳುತ್ತಾನೆ ಅಥವಾ ಅವನೇ ಆಗುತ್ತಾನೆ .**

**********ದೇಹವನ್ನು ಪ್ರೀತಿಸುವವರು ಬ್ರಹ್ಮ ಜ್ಞಾನವನ್ನು ಹೊಂದುವುದು ಕಷ್ಟ ಹಾಗೆಂದ ಮಾತ್ರಕ್ಕೆ ಹೊಂದುವುದಕ್ಕಾಗುವುದಿಲ್ಲ ಎಂದಲ್ಲ ಮಾರ್ಗ ಪ್ರಾಯಸದಾಯಕವಾಗಿರುತ್ತದೆ ಅಂಥವರಿಗೆ ನನ್ನದು ಎಂಬ ಅಹಂ ಇರುತ್ತದೆ.ಲೌಕಿಕವನ್ನು ಬಿಟ್ಟು ಮೇಲೇರುವುದು ಕಠಿನವಾಗುತ್ತದೆ .ಮನಸ್ಸನ್ನಿ ಕೇಂದ್ರೀಕರಿಸುವುದು ಮತ್ತು ಪರಮಾತ್ಮನನ್ನು ತನ್ನಂತೆ ನೋಡುವುದು ಅಸಾದ್ಯವಾಗುತ್ತದೆ .ಒಂದೆರಡು ನಿಮಿಷ ಧ್ಯಾನಕ್ಕೆಂದು ನಿರ್ಜನ ಪ್ರದೇಶದಲ್ಲಿ ಕುಳಿತಾಗ ಮನಸ್ಸು 'ಯಾವುದಾದರು ಪ್ರಾಣಿ ಹತ್ತಿರ ಬಂದಿತೇನೋ ' ಎನಿಸಿ ಧ್ಯಾನದಿಂದ ವಿಮುಖರಾಗುತ್ತೇವೆ ಹಾಗೆಯೇ ಜನನಿಬಿಡ ಪ್ರದೇಶದಲ್ಲೇ ಸಾಧಿಸುತ್ತೇನೆ ಎಂದು ಕುಳಿತವನಿಗೆ ಹೊರಗಿನ ಶಬ್ದಗಳಿಗೆ ಕಿವಿಯಾಗಿಬಿಡುತ್ತಾನೆ . ನಿಜವಾದ ಧ್ಯಾನಿಯು ಅಥವಾ ಬ್ರಹ್ಮನನ್ನು ಪಡೆಯಬೇಕೆಂಬ ಹಂಬಲವುಳ್ಳವನು ಎಲ್ಲೇ ಕುಳಿತರೂ ತನ್ನನ್ನು ಮರೆತು ಅಲೌಕಿಕ ಅನುಭವವನ್ನು ಗಳಿಸುತ್ತಾನೆ .**************

***********ಮುಂದೆ ಶ್ರೀ ಕೃಷ್ಣನು ತನ್ನ ಭಕ್ತರು ಅದರಲ್ಲೂ ತನಗೆ ಯಾರು, ಎಂಥವರು ಪ್ರಿಯರಾಗುತ್ತಾನೆ ಎಂದು ಹೇಳುತ್ತಾನೆ . ತಾನು ಮಾಡಿದ ಎಲ್ಲಾ ಕರ್ಮಗಳನ್ನೂ ಕೃಷ್ನಾರ್ಪಿತ ಎನ್ನುತ್ತಾನೆಯೋ ಮತ್ತು ಸದಾ ಕೃಷ್ಣಾ ಪರಾಯಣವನ್ನು ಮಾಡುವ ಭಕ್ತನು ಪ್ರಿಯನಾಗುತ್ತಾನೆ .ಇಲ್ಲಿ ಪರಾಯಣ ಎಂದರೆ ಉತ್ತಮ ದಾರಿ ಎಂದರ್ಥ ಉತ್ತಮ ಮಾರ್ಗದಲ್ಲಿ ನಡೆಯುವ ಉತ್ತಮ ಚಿಂತನೆಯನ್ನು ಮಾಡುವ ಭಕ್ತನು ಭಗವಂತನಿಗೆ ಪ್ರಿಯನಾಗುತ್ತಾನೆ . ಭಗವದ್ಸಾಕ್ಷಾತ್ಕಾರಕ್ಕೆ ತಪಸ್ಸು ಅಗತ್ಯ . ತಪಸ್ಸು ಎಂದರೆ ಅದ್ಯಯನ ಮತ್ತು ಚಿಂತನೆ ಇದನ್ನು ಅಭ್ಯಾಸ ಎಂತಲೂ ಹೇಳುತ್ತಾರೆ .ಈ ಅಭ್ಯಾಸ ಯೋಗದ ಮುಉಲಕ ನಾವು ಭಗವಂತನ ಕೃಪೆಗೆ ಪಾತ್ರರಾಗಬಹುದು ಮತ್ತು ಅವನಿಗೆ ಪ್ರಿಯರಾಗಬಹುದು .ಒಂದು ವೇಳೆ ಅಭ್ಯಾಸವೂ (ಅಧ್ಯಯನ ಚಿಂತನೆ)ಕಷ್ಟವೆನಿಸಿದರೆ ನಮ್ಮ ಕರ್ಮಗಳನ್ನು (ಕೆಲಸ) ಕೃಷ್ನಾರ್ಪಿತ ಮಾಡಿದರೆ ಆಗಲೂ ಸಹ ನಾವು ಆ ಸಚ್ಸಿದಾನಂದನಿಗೆ ಆತ್ಮೀಯರಾಗಬಹುದು .ಕೃಷ್ನಾರ್ಪಿತವೆಂದರೆ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವಿಕೆ .ಮಾಡಿದ್ದಾಯಿತು ಮುಂದಿನದು ಕೃಷ್ಣಾ ಚಿತ್ತ ಎಂದುಕೊಂಡರೆ ಅದು ಭಗವದರ್ಪಿತವಾದಂತೆ *******
******
ಇನ್ನೂ ಇದೆ