ಪತ್ರಿಕಾ ಧರ್ಮ

ಪತ್ರಿಕಾ ಧರ್ಮ

"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗಳ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."
— ಕುವೆಂಪು

ಮೇಲಿನ ಸಾಲುಗಳು ಸಂಪದ ಪೋರ್ಟಲ್ ನ ಸುಭಾಷಿತಗಳನ್ನು ತೋರಿಸುವ ಕಡೆ ಸಿಕ್ಕಿತು. ಯಾವ ಪತ್ರಿಕೆಯ ಬಗ್ಗೆ ಇರಬೇಕು ಕುವೆಂಪು ಈ ರೀತಿ ಅಸಮಾಧಾನದಿಂದ ಗೊಣಗುಟ್ಟಿದ್ದು? ನನ್ನ ಸಂದೇಹ ಮಣಿಪಾಲದಿಂದ ಪ್ರಕಾಶಿತವಾಗುವ ಪತ್ರಿಕೆಯೆಡೆಗೆ ಹೋಗುತ್ತಿದೆ. ಈ ಪತ್ರಿಕೆಯ ಒಳ ಭಾಗಗಳಲ್ಲಿ ತುಂಬಿರುವುದು ಕುವೆಂಪು ಅವರು ಹೇಳಿದ ವಿಷಯಗಳೇ. ಧಾರ್ಮಿಕತೆ ಇರಬೇಕು, ಆದರೆ ಅದು ಸರ್ವಸ್ವ ಆಗಬಾರದು. ಜನ ಪತ್ರಿಕೆ ಓದುವುದು ನಿತ್ಯ ನಡೆಯುವ ವಿದ್ಯಮಾನಗಳು, ಚರ್ಚೆಗಳು, ವಾಚಕರ ಪ್ರತಿಕ್ರಿಯೆಗಳನ್ನು ಓದಲು. ಸಂಪಾದಕನ ತೆವಲನ್ನಲ್ಲ. ಪತ್ರಿಕೆಗಳು ಜವಾಬ್ದಾರಿ ಅರಿತು ನಡೆದುಕೊಂಡರೆ ಸಮಾಜವನ್ನು ಸುಧಾರಿಸಲು ಸಾಧ್ಯ. ತಮ್ಮ ರಾಜಕೀಯ ನಿಲುವುಗಳನ್ನು ಮತ್ತು ವೈಯಕ್ತಿಕ ಆಶಯಗಳನ್ನು ಜನರ ಮೇಲೆ ಹೇರುವುದು ಪತ್ರಿಕಾ ಧರ್ಮಕ್ಕೆ ಹೇಳಿಸಿದ್ದಲ್ಲ.

Rating
No votes yet

Comments