ನನ್ನ ಅನುಭವ (ಪುನರ್ಜನ್ಮ)............

ನನ್ನ ಅನುಭವ (ಪುನರ್ಜನ್ಮ)............

ಚಿತ್ರ
 
 
 
 
ಪ್ರತಿಯೊಬ್ಬರ ಜೀವನದಲ್ಲಿ ಮರೆಲಾಗದ ಎಸ್ಟೊಂದು ಘಟನೆಗಳು ನಡೆದಿರುತ್ತವೆ, ಅದನ್ನು ನಾವು ಮರೆಯಲು ಸಾಧ್ಯವೇ ಇಲ್ಲ , ಎಲ್ಲರ ಹಾಗೆ ನನ್ನ ಜೀವನದಲ್ಲೂ ಒಂದು ಘಟನೆ ನಡೆದಿತ್ತು ಅದನ್ನೇ ನಾನೀಗ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ, ಇಲ್ಲಿ ಮುಖ್ಯವಾಗಿ ಮೂರು ಪಾತ್ರಗಳು ಬಹು ಮುಖ್ಯ ಅದು ನಾನು, ನಮ್ಮಪ್ಪ, ಮತ್ತು 'ಅನಾಮಿಕ 'ಹೆಂಗಸು.


ನಾನು ಸರಿಸುಮಾರು ೧೦ ವರ್ಷದವನಿದ್ದಾಗ, ನಮ್ಮ ತಂದೆಯವರೊಡನೆ, ನಮ್ಮ ಊರಿನ 'ಊರ ಬಾವಿ' ಎನ್ನುವ ತುಂಬಾ ಆಳವಾದ ಬಾವಿಗೆ ಬಟ್ಟೆಯನ್ನು ತೊಳೆಯಲು ಹೋಗಿದ್ದೆ. ಅದೋ ತುಂಬಾ ವಿಶಾಲವಾದ ಬಾವಿಯಾಗಿದ್ದು, ತುಂಬಾ ಆಳವಾಗಿತ್ತು. ಮೇಲೆ ಬಟ್ಟೆ ತೊಳೆಯಲು ಅಲ್ಲಿ ಚಕ್ರ ಇರುವ ಒಂದು ನೀರು ಸೇದುವ ವ್ಯವಸ್ಥೆಯು ಇತ್ತು. ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನವಾದ್ದರಿಂದ ಅಲ್ಲಿ ವಿಪರೀತ ಜನಸಂದಣಿ ಇತ್ತು. ಹೀಗೈ ನಮ್ಮ ತಂದೆ ಪಾವಟಿಗೆ ಮೇಲೆಯೇ ಕುಳಿತು ಬಟ್ಟೆ ತೊಳೆದರಾಯಿತು ಅಂದುಕೊಂಡು ಅಲ್ಲಿಗೆ ಇಳಿದರು, ನಾನು ಅವರ ಹಿಂದೆಯೇ ಅಲ್ಲಿ ಕುಳಿತು ಒಂದು ಟವೆಲ್ ಕೈಯಲ್ಲಿ ಹಿಡಿದುಕೊಂಡು  ಆಟ ಆಡುತ್ತಿದ್ದೆ... ನೀರಲ್ಲಿ  ನಾನು ಆಡುತ್ತಿದ್ದ ಆಟ ಏನು ಗೊತ್ತೇ?
 ಟವೆಲ್ ಅನ್ನು ಪಾವಟಿಗೆ ಕೆಳಗಿರುವ ನೀರಿಗೆ ಹಾಕುವುದು, ಮತ್ತೆ ಮೇಲಕ್ಕೆತ್ತಿ ಅದರಿಂದ ಹನಿಯುವ ನೀರನ್ನು ಕಾಲ ಮೇಲೆ ಹಾಕಿಕೊಳ್ಳುವುದು. ಹೀಗೆ ಮಾಡುತ್ತಿರುವಾಗ ನಮ್ಮ ಅಪ್ಪ ಅವರ ಕೆಲಸದಲ್ಲಿ ಬ್ಯುಸಿ ಆಗಿದ್ದರಿಂದ ನನ್ನೆಡೆ ಗಮನ ಹರಿಸಿರಲಿಲ್ಲ,.



ನಾನು ಹೀಗೆ ಟವೆಲ್ ನೀರಿಗೆ ಹಾಕುವುದು ,ಟವೆಲ್ ಹಿಂಡುವುದು ಮಾಡುತ್ತಾ, ಮತ್ತೊಮ್ಮೆ ನೀರಿಗೆ ಹಾಕಿದೆ , ಆದ್ರೆ ಆ ಟವೆಲ್ ನನ್ನ ಕೈನಿಂದ ಜಾರಿ ನೀರಿಗೆ ಬಿತ್ತು, ಹೀಗಾಗಿ ನಾನು ಅದನು ಹಿಡಿಯಲು ಕೈ ಚಾಚಿ ಅದರ ಜೊತೆ ನಾನು ನೀರಿಗೆ ಬಿದ್ದೆ. ನಮ್ಮ ತಂದೆ ಆಗ ಬಟ್ಟೆ ತೊಳೆಯಲು ಜೋರಾಗಿ ಶಬ್ದ ಮಾಡುತ್ತಾ ಬಟ್ಟೆಯನ್ನು ಬಂಡೆಗೆ ಹೊಡೆಯುತ್ತಿದ್ದರಿಂದ , ನಾನು ನೀರಿಗೆ ಬಿದ್ದಿರುವುದು ಅವರಿಗೂ ಗೊತ್ತಿರಲಿಲ್ಲ, ಆದ್ರೆ 'ಆ ದೇವರು' ಎಲ್ಲವನು ನೋದುತಿರುತ್ತಾನೆ ಎನ್ನುವುದು ನಿಜ ಮಾಡಲೋ ಎಂಬಂತೆ, ನನ್ನ 'ಆ ಟವೆಲ್ ಜೊತೆಗಿನ ಮೂರ್ಖ ಆಟ' ವನ್ನು ಗಮನಿಸುತ್ತಾ ಬಾವಿ ಮೇಲುಗಡೆ ಬಟ್ಟೆ ತೊಳೆಯುತ್ತಿದ್ದ ಹೆಣ್ಣು ಮಗಳೊಬ್ಬಳು ದಿಗ್ಗನೆದ್ದು ನಮ್ಮ ಅಪ್ಪನನ್ನು ಕರೆದು ನಿಮ್ಮ ಮಗ ನೀರಿಗೆ ಬಿದ್ದ ಎಂದಳು.


ಒಡನೆಯೇ ನಮ್ಮಪ್ಪ ನೀರಿಗೆ ನೆಗೆದು ಹುಡುಕಾಡಲು ತೊಡಗಿದರು, ಅವರಿಗೆ ಸಹಾಯ ಮಾಡಲು ಇನ್ನಿತರ ಜನ ಸಹಾ ನೀರಿಗೆ ನೆಗೆದು ನನ್ನು 'ಆ ಆಳವಾದ ಬಾವಿಯಲ್ಲಿ' ಹುಡುಕಾಡಲು ತೊಡಗಿದರು. ಇದೆಲ್ಲ ನಡೆಯುತ್ತಿರುವಾಗ ನಾನು ಬಾವಿಯೊಳಗೆ ನೀರಿನಲ್ಲಿ ಏನು ಮಾಡುತ್ತಿದ್ದೆ? ನಾನು ಬಿದ್ದ ಟವೆಲ್ ಹಿಡಿಯಲು ನೀರಿಗೆ ಬಿದ್ದು ಸ್ವಲ್ಪ ದೂರ ಅದರ ಜೊತೆಗೆ ಹೋಗಿ, ಕೊನೆಗೆ ಅಲ್ಲೊಂದು ಪಾವಟಿಗೆ ಇತ್ತು ಅದರ ಮೇಲೆ ಲ್ಯಾಂಡ್ ಆದೆ. ಕೈಲಿ ಟವೆಲ್ ಮಾತ್ರ 'ಭದ್ರವಾಗಿ ಹಿಡಿದಿದ್ದೆ', ನಾನು ಕುಳಿತ ಆ ಪಾವಟಿಗೆ ಬಾವಿಯ ಮೊದಲ ಪಾವಟಿಗೆ ಕೆಳಗಡೆ ಸುಮಾರು ೫ ಮೀಟರ್ನಷ್ಟು ಆಳದಲ್ಲಿತ್ತು.(ನಾನು ಬೇರೆಲ್ಲ ಬಾವಿಯಲ್ಲಿ ನೋಡಿದ ಹಾಗೆ ಎಲ್ಲಿಯೂ ಕೂಡ ನಾನು ಬಿದ್ದ ಬಾವಿ ತರಹ ಅಸ್ಟು ಕೆಳಗಡೆ ಇನ್ನೊದು ಪಾವಟಿಗೆ ಕೆತ್ತಿರುವುದು ಕಂಡಿಲ್ಲ). ಅಲ್ಲಿ ಕುಳಿತ ನಾನು ಸುತ್ತ-ಮುತ್ತ ಕಣ್ಣಾಡಿಸಲು ಅಲ್ಲಿ ನೀರಿನಲ್ಲಿ ನನ್ನ ಸುತ್ತ-ಮುತ್ತ ದೊಣ್ಣ- ಸಣ್ಣ ಮೀನುಗಳು, ಏಡಿಗಳು, ನೀರು ಹುಳು, ಹಾವುಗಳು ಸುತ್ತಾಡುವುದು ಕಂಡು ಮೈಯಲ್ಲಿ ನಡುಕವೇ ಉಂಟಾಯ್ತು. ನೀರಿನೊಳಗೆ ಈ ತರಹದ ಲೋಕ ಒಂದು ಇರಬಹುದು ಅಂತ ನಾನು ಆ ವಯಸ್ಸಿನಲ್ಲಿ ಯೋಚಿಸಿಯೂ ಇರಲಿಲ್ಲ.





ಹೀಗೆ ನಾನು ಭಯದಿಂದ ನಡುಗುತ್ತ ಕುಳಿತಿರ್ವಾಗ ನಮ್ಮ ತಂದೆಗೆ ನನ್ನ ಕೈನಲ್ಲಿರುವ ಟವೆಲ್ ಮೊದಲು ಕಂಡಿದೆ, ಆಗ ನನ್ನ ಸಮೀಪ ಬಂದು ನನ್ನನ್ನು ಎತ್ತಿಕೊಂಡು ಮೇಲಕ್ಕೆ ಬರುತ್ತಿರುವಾಗ, ಮೊದಲೇ ಭಯಗೊಂಡಿದ್ದ ನಾನು ಎಲ್ಲಿ ನಮ್ಮ ಅಪ್ಪನ ಕೈನಿಂದ ಮತ್ತೆ ಜಾರಿ ಬಾವಿ ತಳ ಸೇರುವೆನೋ ಅಂತ ಭಯ ಪಟ್ಟು ನಮ್ಮ ಅಪ್ಪನ ಕುತ್ತಿಗೆ ಸುತ್ತ ನನ್ನ ಎರಡು ಕೈ ಹಾಕಿ ನನ್ನ ಶಕ್ತಿ ಇರುವಸ್ತು ಒತ್ತಡ ಹಾಕಿ ಬಳಸಿ ಹಿಡಿದುಬಿಟ್ಟೆ.

ಮೊದಲೇ ಆಮ್ಲಜನಕದ ಕೊರತೆ ನನಗೂ ಮತ್ತು ನಮ್ಮ ಅಪ್ಪನಿಗೂ ಶುರುವಾಗಿತ್ತು , ನಾನು ಈ ತರಹ ನಮ್ಮ ಅಪ್ಪನನ್ನು ಬಳಸಿ ಹಿಡಿದಿರಲು , ನಮ್ಮಪ್ಪನಿಗೆ ಪ್ರಾಣವೇ ಹೋದಂತೆ ಆಗಿಬಿಟ್ಟಿದೆ.(ಆಮ್ಲಜನಕದ ಮತ್ತು ನೀರಿನ, ಪ್ರಾಣದ ಬೆಲೆ ನನಗೇ ತಿಳಿದಿದ್ದು ಆಗಲೇ) ಅಲ್ಲಿ ನೀರಿನಲ್ಲಿ ನಮ್ಮಪ್ಪ ನನಗೇ ಕೈ ಅನ್ನು ಕುತ್ತಿಗೆ ಮೇಲಿಂದ ತೆಗಿ ಅಂತ ಹೇಳುತಿದ್ದಾರೆ, ಅದು ನನಗೇ ಗೊತ್ತಾಗುತ್ತಿದೆ ಸಹಾ (ನೀರಲ್ಲ್ಲಿ ಅದು ಕೇಳಿಸಲು ಸಾಧ್ಯವಿಲ್ಲ). ಆದರೂ ನಾನೂ ಎಲ್ಲಿ ನಾನು ಮತ್ತೆ ಬಾವಿ ತಳ ಸೇರುವೆನೋ ಅಂದುಕೊಂಡು ನನ್ನ ಕೈ ಮಾತ್ರ ತೆಗಿಯಲಿಲ್ಲ. ಹಾಗೋ ಹೀಗೂ ನಮ್ಮಪ್ಪ ನನ್ನನ್ನು ಎತ್ತಿಕೊಂಡು ಮೇಲೆ ಬರಲು, ಅಲ್ಲಿ ಆಗಲೇ ಸೇರಿದ್ದ ಜನರೆಲ್ಲ ಕೈ ಚಾಚಿ ನನ್ನ ಎತ್ತಿಕೊಂಡರು. ಇದೆಲ್ಲ ನಡೆದು ನಾನು ನೀರೊಳು ಇದ್ದ ಸಮಯ ಅಂದಾಜು ೫ ರಿಂದ ೧೦ ನಿಮಿಷ. ಅಸ್ತೋತ್ತಿಗಾಗಲೇ ನಾನು ತಕ್ಕ ಮಟ್ಟಿಗೆ ನೀರನ್ನು ಕುಡಿಡುಬಿಟ್ಟಿದ್ದೆ  ಹೀಗಾಗಿ ಜನ ನನ್ನು ಬೋರಲು ಮಲಗಿಸಿ ಅಂಗಾತ ಮಲಗಿಸಿ ಹೊಟ್ಟೆ ಅದುಮಲು ಶುರು ಮಾಡಿದರು, ಆಗ ಹೊಟ್ಟೆ ಸೇರಿದ್ದ 'ಊರ ಬಾವಿ' ನೀರು ಹೊರ ಬಂತು. ಆಗ ಅಲ್ಲಿದ್ದವರೆಲ್ಲ ನಮ್ಮಪ್ಪನಿಗೆ ಬಯ್ದದ್ದೆ, ಬಯ್ದದ್ದು, ಇಂತ ಚಿಕ್ಕ ಮಗುವನ್ನು ಬಾವಿಗೆ ಏಕೆ ಕರೆದುಕೊಂಡು ಬಂದಿರಿ? ಆದರೂ ಅವನನ್ನು(ನನ್ನನ್ನು) ಗಮನಿಸದೆ ಬಟ್ಟೆ ತೊಳೆಯುತ್ತಿದ್ದೀರಲ್ಲ ಇತ್ಯಾದಿ ಇತ್ತ್ಯಾದಿ. ಕೊನೆಗೆ ನಮ್ಮಪ್ಪ ನನ್ನು ಬಟ್ಟೆಯನ್ನು ಎತ್ತಿಕೊಂಡು ಮನೆಗೆ ಬಂದರು.

ಆಗಲೇ ನಮ್ಮ ಅಮ್ಮನಿಗೆ ಅಕ್ಕ-ಪಕ್ಕದ ಮನೆಯವರಿಗೂ ವಿಷಯ ಗೊತ್ತಾಗಿ  ಜೋರಾಗಿ ಅಳುತ್ತಲಿದ್ದರು , ಆದರೂ ನಾನು ಕ್ಷೇಮವಾಗಿ ಮನೆಗೆ ವಾಪಾಸು ಬಂದುದುದರಿಂದ , ಅಸ್ಟೋತ್ತು   ದುಖಮಯವಾಗಿದ್ದ ಸನ್ನಿವೇಶ ಖುಷಿಯಾಗಿ ಮಾರ್ಪಟ್ಟು, ಎಲ್ಲರೂ ನನ್ನು ಕ್ಷೇಮ ವಿಚಾರಿಸುವವರೇ. ಆಗ ನಮ ತಂದೆ -ತಾಯಿ ಅಲ್ಲಿ ಸೇರಿದ್ದ ಎಲ್ಲರ ಸಲಹೆಯಂತೆ ನಮ್ಮ ಊರಿನ ಜಂಗಮರೊಬ್ಬರ ಸಲಹೆ ಕೇಳಿದರು, ಆಗ ಅವರು 'ನಿಮ್ಮ ಮಗನಿಗೆ ನೀರಲ್ಲಿ ಇವತ್ತು ಆಪತ್ತು ಇತ್ತು, ಆದರೆ ದೈವ ಬಲ ಚೆನ್ನಾಗಿದ್ದರಿಂದ ಬದುಕಿಬಂದಿದ್ದಾನೆ, ಆದರೂ ಅದು(ನನ್ನ ಗ್ರಹ ಗತಿ) ಚೆನ್ನಾಗಿಲ್ಲವಾದ್ದರಿಂದ ಮತ್ತೆ ನೀರಿಂದ ಅಪಾಯವಿರುವುದರಿಂದ, ನನ್ನನ್ನು ಬೇರೆ ಯಾವುದಾದರು ಊರಿಗೆ ಕಳಿಸಿ ಮತ್ತು ಯಾವುದೇ ಕಾರಣಕ್ಕೂ ಬಾವಿಗಳ ಹತ್ತಿರ ಸುಳಿಯದಿರದಂತೆ  ನೋಡಿಕೊಳ್ಳುವಂತೆ  ಪೋಷಕರಿಗೆ  ಹೇಳಿದರು  ಮತ್ತು ನನ್ನ ಬಟ್ಟೆಗಳನ್ನು ಬಿಚ್ಚಿ ನಾನು ಬಿದ್ದ ಆ 'ಊರ ಬಾವಿಗೆ' ಎಸೆಯಲು ಹೇಳಿದರು. ಅವರು ಹೇಳಿದಂತೆ ಮಾಡಿದ ನಮ್ಮ ತಂದೆ ನನ್ನನ್ನು ನಮ್ಮ ತಾತನ  ಊರಿಗೆ  ಕಳಿಸಿದರು. ಹೀಗೆ ನಾನು ಸರಿ ಸುಮಾರು ೧೯ ವರ್ಷದವನು ಆಗುವವರೆಗೆ  ಆ 'ಊರ ಬಾವಿಗೆ ಹೋಗಲು ಆಗಲಿಲ್ಲ.



ಕೊನೆಗೆ ನನ್ನ ಗ್ರಹ ಗತಿ ಈಗ ಚೆನ್ನಾಗಿದೆ ಮತ್ತು ನನ್ನ ಜನ್ಮ ಸ್ಥಳಕ್ಕೆ  ಮರಳಿ ಹೋಗಬಹುದು ಎಂದು ಗೊತ್ತಾಗಿ ಅಲ್ಲಿಗೆ ಹೊರಟೆ. ಆಗೆಲ್ಲ ಅಲ್ಲಿ ಇನ್ನು  ಅಸ್ಟೊಂದು ಸಾಮಾಜಿಕ ಬೆಳವಣಿಗೆ ಆಗಿರದಿದ್ದರಿಂದ ಇನ್ನು ಬಯಲಿನ ಪ್ರದೇಶಗಳಲ್ಲೇ ನಮ್ಮ ಶೌಚ ಕರ್ಮಕ್ಕೆ ಹೋಗಬೇಕಿತ್ತು. ಹಾಗೆ ಅದಕ್ಕೆ ಹೋಗಲು ನಾವು ಬಳಸಬೇಕಿದ್ದ ದಾರಿ ಸಹಾ ಅದೇ 'ಊರ ಬಾವಿ' ಪಕ್ಕದ ರಸ್ತೆ. ಹೀಗಾಗಿ ಅಲ್ಲಿವರೆಗೆ ನಮ್ಮ ತಂದೆ, ನಂತರ ನನ್ನ ಸ್ನೇಹಿತರೂ ಬರುತ್ತಿದ್ದರು. ಹೀಗೆ ಮತ್ತೆ ಸರಿ ಸುಮಾರು ಮೂರು ವರ್ಷ ಕಳೆದು ಇನ್ನು ನಾನು ಒಬ್ಬನೇ ಹೋಗಬಹುದು ಎಂದೆನಿಸಿದಾಗ, ನಾನು ಒಬ್ನೇ ಹೋಗಲು ನಮ್ಮಪ್ಪ ಸಮ್ಮತಿಸಿದರು. ಹೀಗೆ ಮತ್ತೊಂದು ವರ್ಷ ಕಳೆಯಲು ನಮ್ಮ ತಂದೆ ನನಗೇ ಈಜು ಕಲೆಸಲು ಬಾವಿಗಳನ್ನು ಹುಡುಕಿ ಕೊನೆಗೆ ಸೆಲೆಕ್ಟ್ ಮಾಡಿದ್ದು, ಅದೇ 'ಊರ ಬಾವಿ' ಆದರೆ ನಾನೂ ಖಂಡಿತವಾಗಿ ಅಲ್ಲಿಮಾತ್ರ ಬರಲ್ಲ ಎಂದರೂ ಕೇಳದೆ ,ನನ್ನನು ಕರೆದುಕೊಂಡು(ಜೊತೆಗೆ ನನ್ನ ದೊಡ್ಡಪ್ಪ ಚಿಕಪ್ಪ ನವರ ಮಕ್ಕಳು ಸಹಾ) ಈಜು ಕಲೆಸಲು ಹೊರಟೇಬಿಟ್ಟರು. ನಾನು ಬೇರೆ ವಿಧಿ ಇಲ್ದೇ ಅದೇ ಬಾವಿಗೆ ಹೋಗಿ ನಿಂತೇ, ಅದನ್ನು ನೀರನ್ನು ನೋಡಿದ ಕೂಡಲೇ ನನ್ನ ಹಿಂದಿನ ಘಟನೆ ನೆನಪಿಗೆ ಬಂದು ಮತ್ತೆ ಕೈ ಕಾಲು ನಡುಕ ಶುರುವಾಯ್ತು, ಆಗ ನಮ್ಮಪ್ಪ, ಚಿಕ್ಕಪ್ಪ್ ದೊಡ್ಡಪ್ಪ ಮಕ್ಕಳೆಲ್ಲ, ಹೆದರಬೇಡ ಇದರಲ್ಲೇ ನಾನು ನಮ್ಮ ಮನೆಯವರೆಲ್ಲ ಈಜು ಕಲೆತದ್ದು, ಇಲ್ಲಿ ನಿನಗೆ ಯಾವುದೇ ಅಪಾಯವಿಲ್ಲ ನಾವಿದ್ದೇವೆ ಎಂದರು

.

ನನ್ನ ಬೆನ್ನ ಹಿಂದೆ ಒಂದು  ಎಂದೋ  ಒಣಗಿ ಹೋಗಿದ್ದ ಪಡುವಲಕಾಯಿ ತರಹದ್ದು ಕಟ್ಟಿ ನೀರಿಗೆ ಬಿಟ್ಟರು, ಸುತ್ತ-ಮುತ್ತಲೆಲ್ಲ ಅಪ್ಪ, ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು, ಹೀಗಾಗಿ ಮೊದಲಿಗೆ ಭ್ಯ ಪಟ್ಟರೂ ನಂತರ ನಾನು ಅವರೊಂದಿಗೆ ಈಜು ಕಳೆಯಲು ಅಲ್ಲಿಗೆ ಹೋಗಿ ಕೊನೆಗೊಮ್ಮೆ ಸ್ವತಂತ್ರವಾಗಿ ನಾನೇ ಈಜು ಹೊಡೆಯುವಸ್ತು  ಬಾವಿಯ ತಳದವರೆಗೆ  ಹೋಗಿ ಬರುವಸ್ತು ಶಕ್ತನಾದ ಮೇಲೆ , ನಾನು ಯಾಕೆ ಈ ಬಾವಿಯ ತಳ ನೋಡಬಾರದು ಎಂದೆನಿಸಿ , ನಮ್ಮ ಸಹೋದರರಿಗೆ ಹೇಳಲು, ಹುಚ್ಚ ಅದು ಆಳವಾದ ಬಾವಿ ಇದರಲ್ಲೇ ಬಿದ್ದು, ಈಜು ಕಲೆತು ಈಗ ಅದರ ಆಳ ನೋಡುವ ಆಸೆಯೇ ಎಂದು ಬಯ್ದರು. ಆದರೆ ನಾನು ಮಾತ್ರ ಅವರ ಮಾತು ಕೇಳದೆ ನೀರಿಗೆ ದುಮುಕಿಯೇ ಬಿಟ್ಟೆ. ಕಕ್ಕಾಬಿಕಿಯಾದ ಅವರು ಸಹಾ ನನ್ನೊಂದಿಗೆ ದುಮುಕಿದರು, ನಾವೆಲ್ಲಾ ತಳ ಹುಡುಕಲು ಈಜುತ್ತಾ ಈಜುತ್ತಾ ಎಸ್ಟೊಂದು ಹೊಳಗೆ ಹೋಗಿದ್ದಸ್ಟ್ ಬಂತು ಆದ್ರೆ ತಳ ಮಾತ್ರ ಸಿಗಲಿಲ್ಲ, ಅಸ್ತೊತ್ತಿಗೆ ನಮಗೆಲ್ಲ ಉಸಿರಾಟದ ತೊಂದರೆ ಶುರುವಾಗಿ, ಕಣ್ಣ್ ಸನ್ನೆಯಲ್ಲೇ ಮೇಲೆ ಹೋಗೋಣ ಎಂದು ಹೇಳಿ ಮೇಲೆ ಸಾಗಿ ಬಂದೆವು.


ಆಮೇಲೆ ಎಸ್ಟೊಂದು ಸಾರಿ ಅಲ್ಲಿಗೆ ಹೋದಾಗಲೆಲ್ಲ ಆ ಬಾವಿಯ ತಳ ನೋಡಬೇಕೆನ್ನುವ ನನ್ನ ಆಸೆ ಈಡೇರಲೇ ಇಲ್ಲ. ಒಂದು ಬಿರು ಬೇಸಗೆಯ ದಿನ ಹುಡುಗರೆಲ್ಲ ಅಲ್ಲಿ ಈಜಾಡ್ತಿರಲು , ಬಾವಿ ಮೇಲೆ  ಒಂದು ಕಡೆ ನಿಂತು  ಈಜು  ಹೊಡೆಯುತ್ತಿದ್ದವರನ್ನು ನೋಡುತ್ತಿದ್ದ  ಹುಡುಗನೊಬ್ಬನನ್ನು , ಬಾವಿಗೆ ದುಮುಕಿ ಈಜು ಹೊಡೆಯಲು ಹೋದ ಇನೊಬ್ಬ ಹುಡುಗ ತಳ್ಳಿ ಬಿಟ್ಟು ಅವನು, ಇವನು ಇಬ್ಬರೂ ಬಾವಿಗೆ  ಬಿದ್ದಿದ್ದಾರೆ.. ಮೇಲೆ ನಿಂತು ನೋಡುತ್ತಿದ್ದ ಹುಡುಗನಿಗೆ ಈಜು ಬರಲ್ಲ, ಅವನನ್ನು ತಳ್ಳಿದವನು, ಅವನನ್ನು  ಕಾಪಾಡದೆ, ಭಯಪಟ್ಟು ಮತ್ತೆ ಭಾವಿ ಮೇಲೆ ಬಂದು ಮನೆ ಕಡೆ ಓಡಿ ಹೋಗಿದ್ದಾನೆ. ಇದನ್ನೆಲ್ಲಾ ನೋಡಿದ ಹುಡುಗರು ಯಾರಿಗೂ ಅವನನ್ನು ರಕ್ಷಿಸಲು ಧೈರ್ಯ ಸಾಲದೇ ಅಕ್ಕ ಪಕ್ಕದ ಮನೆಯವರನ್ನು ಕೂಗಿ ಕರೆದಾಗ, ನೀರಿಗೆ ಬಿದ್ದ ಹುಡುಗ ಆಗಲೇ ಬಾವಿ ತಳ ಸೇರಿ ನೀರು ಕುಡಿದು ಪ್ರಾಣ   ಬಿಟ್ಟಿದ್ದ. :((



ಆಗ ಅಗ್ನಿಶಾಮಕ ದವರು ಬಂದು ಇದು ತುಂಬಾ ಆಳವಾದ ಬಾವಿಯಾದರಿಂದ ಇದರಲ್ಲಿನ ನೀರನ್ನು ಆಚೆಗೆ ಎಸೆದು ಹುಡುಗನ ಬಾಡಿ ತರಬೇಕು ಎಂದು ಹೇಳಿ, ೧೦ ಪಂಪ್ ಸೆಟ್ ತರಿಸಿ ಮೂರು ಹಗಲು ಮೂರು ರಾತ್ರಿ ಬಿಟ್ಟು ಬಿಡದಂತೆ ಕುಳಿತಾಗ, ಏಳನೆಯ ದಿನಕ್ಕೆ ಹುಡುಗನ ಬಾಡಿ ಮತ್ತು ಬಾವಿ ತಳ ಎರಡು ಆಳವಾದ ಪ್ರದೇಶದಲ್ಲಿ ಗೋಚರಿಸಿದವು. ಶವ ತಂದು ಬಾವಿ ಮೇಲಿಟ್ಟಾಗ, ಹುಡುಗನ ತಂದೆ ತಾಯಿ ದುಖ ನಾನಂತೂ ಯಾವತ್ತು ಮರೆಯಲು ಸಾಧ್ಯವಿಲ್ಲ. ಸ್ವ್ಳಪವೇ ವರ್ಷಗಳ ಹಿಂದೆ ನಾನು ಅದೇ ಬಾವಿ ತಳ ಸೇರುವವನಿದ್ದೆ ಆದರೆ ಒಬ್ಬ ತಾಯಿ ನಾನು ಬಿದ್ದದ್ದು ನೋಡಿ ನಮ್ಮಪ್ಪನಿಗೆ ಹೇಳಿ ನನ್ನ ಪ್ರಾಣ ಉಳಿಸಿದಳು. ಅದುವರೆಗೆ ಆ ಬಾವಿ ಆಳ ಆಳ ಎಂದವ್ರಿಗಾರಿಗೂ ಅದು ಇಷ್ಟು ಆಳವಿರಬಹುದು ಎಂದೆನಿಸಿರಲ್ಲ . ಕೊನೆಗೆ ಊರಿನವರ ಸಲ್ಲಹೆ ಮೇರೆಗೆ ಅದರ ಸುತ-ಮುತ್ತ ಒಬ್ಬ ಮನುಷ್ಯನ ಎತ್ತರದಸ್ತು ತಡೆ ಗೋಡೆ ನಿರ್ಮಿಸಿದರು.

ನ0ತರವೂ ಅಲ್ಲಿ ಸುಮಾರು  ಜನ ಪ್ರಾಣ ಕಳೆದುಕೊಂಡರು, ಕೆಲವರು 'ಆತ್ಮಹತ್ಯೆ' ಮಾಡಿಕೊಂಡರೆ ಇನ್ನು ಕೆಲವರು ಬೇರೆ ಯಾರೋ ತಳ್ಳಿದ್ದಕೆ ಬಿದ್ದು ತೀರಿಹೋದರು. ಈಗಲೂ ಆಗಾಗ ನಾನು ಒರಿಗೆ ಹೋದಾಗ ಆ ಬಾವಿ ಕಡೆ ಹೋಗುತ್ತೇನೆ, ಅಲ್ಲಿ ಇಲ್ಲಿ ನಾನು ಬರೆದ ಎಲ್ಲ ಘಟನೆಗಳು ಮತ್ತೆ ಕಣ್ಣ್ ಮುಂದೆ ಬರುತವೆ, ಆಗಲೆಲ್ಲ ನಾನು ಅಂದುಕೊಳ್ಳುತೇನೆ, ಒಹ್! ನಾನು ಇಲ್ಲಿ 'ಪುನರ್ಜನ್ಮ' ಪಡೆದಿದ್ದೇನೆ. ಈ ಘಟನೆ ನಂತರ ನಮ್ಮ ತಂದೆ ಬಗೆಗಿನ ನನ್ನ ಪ್ರೀತಿ ದುಪ್ಪಟ್ಟು, ಮೂರು ನೂರು ಪಟ್ಟು ಹೆಚ್ಚಾಗಿದೆ.
 
 
=========================================================================
 
 
 

ಚಿತ್ರಮೂಲ
 

Rating
No votes yet

Comments