ಬದುಕು: ವಯೋಮಾನಕ್ಕೆ ತಕ್ಕ ಹಾಗೆ ಬದಲಾಗುವ ವಿವರಣೆಗಳು

ಬದುಕು: ವಯೋಮಾನಕ್ಕೆ ತಕ್ಕ ಹಾಗೆ ಬದಲಾಗುವ ವಿವರಣೆಗಳು

ಚಿಕ್ಕವಳಿದ್ದಾಗ
ಕಣ್ಣಿಗೆ ಕಂಡದ್ದೆಲ್ಲಾ ಸಿಕ್ಕರೆ ಅದೇ ಜೀವನ
ಎಂಟನೇ ತರಗತಿಯಲ್ಲಿ
ಮೊದಲು ಸ್ಕೂಲಿಗೆ ಹೋಗಿ ಎಸ್.ಎಸ್.ಎಲ್.ಸಿ ಮುಗಿಸಿದರೆ ಅದುವೇ ಜೀವನ
ಎಸ್.ಎಸ್.ಎಲ್.ಸಿ ಮುಗಿದ ಮೇಲೆ ಪಿಯುಸಿ ಮುಗಿಸಿದರೆ ಬದುಕು ನಡೆಯುತ್ತದೆ
ಪಿ.ಯು.ಸಿಯನಂತರ
ಇಂಜಿನಿಯರಿಂಗೇ ಜೀವನ
ವಿದ್ಯಾಭ್ಯಾಸದ ನಂತರ
ಕೆಲಸ ಸಿಕ್ಕು ಹೊಟ್ಟೆ ಬಟ್ಟೆಗೆ ಆದರೆ ಅದುವೇ ಬದುಕು
ಕೆಲಸ ಸಿಕ್ಕ ಮೇಲೆ
ಸ್ವಂತ ಮನೆ, ಮದುವೆ, ಮಕ್ಕಳು,ಕಾರು ಸಾಕು ಅದುವೇ ಜೀವನ
ಮದುವೆ,ಮಕ್ಕಳು,ಕಾರು, ಮನೆ ಎಲ್ಲಾವು ಆದಮೇಲೆ
ಬದುಕಿನಲ್ಲಿ ಹತ್ತು ಜನ ಸೈ ಎನ್ನುವಂತೆ ನಡೆಯುವುದಾದರೆ ಅದೇ ಜೀವನ
ಸೈ ಎನಿಸಿಕೊಂಡ ಮೇಲೆ
ಬದುಕಿನಲ್ಲಿ ಹತ್ತು ಜನಕ್ಕೆ ಮಾದರಿಯಾಗಿ ನಡೆಯುವುದಾದರೆ ಅದೇ ಜೀವನ
ಈಗ
ಬದುಕಿನ ಅರ್ಥ ತಿಳಿಯುವುದೇ ಜೀವನ ಅನ್ನಿಸುತ್ತಾ ಇದೆ

ಅದಕ್ಕಾಗಿಯೇ ನಮ್ಮ ಜೀವನದ ಗುರಿ ಎಂದೂ ಒಂದೆಡೆ ನಿಲ್ಲುವುದೇ ಇಲ್ಲ . ನಾವದನ್ನು ಬೆನ್ನಟ್ಟುತ್ತಿದ್ದಂತೆ ಅದೂ
ಮುಂದೆ ಓಡುತ್ತಿರ್ರುತ್ತದೆ.

Rating
No votes yet

Comments