ನಾನು ಮಾಡಿದ್ದು ತಪ್ಪಾಗಿತ್ತಾ?

ನಾನು ಮಾಡಿದ್ದು ತಪ್ಪಾಗಿತ್ತಾ?

ನೆನ್ನೆ ಆಕೆ ಬಂದಿದ್ದಳು.ಸರಿಯಾಗಿ ಎರೆಡು ವರ್ಷದ ನಂತರ ಆ ಕಹಿ ನೆನಪು ಮನದಿಂದ ಮಾಸುತ್ತಿದ್ದಂತೆ ಹಸಿ ಮಾಡಲು.
"ಏನ್ ಮೇಡಮ್ ನಾವಿನ್ನೂ ಎಪ್ಪ ಬದುಕೋದು. ನನ್ಮಗ ಇದ್ರಾದ್ರೂ ನಲ್ಲ ಇರ್ತಿತ್ತು . ನಮ್ಮನ್ನಾದರ್"ಊ ನೋಡ್ಕೋತಿದ್ದ
ಈಗ ಕಾಸ್ ಇಲ್ಲೆ ಎನ್ನ ಪಣ್ರುದು" ತಮಿಳ್ ಮಿಶ್ರಿತ ಕನ್ನಡ ಅವಳದು
ಅವಳ ಮಗನ ಹೆಸರು ಕೇಳುತ್ತಿದ್ದಂತೆ ಪಾಪ ಪ್ರಜ್ನೆ ಮತ್ತೆ ನನ್ನೊಳಗೆ ಕಾಡತೊಡಗಿತು.ಅವಳಿಗೆ ಎರೆಡು ಸಾವಿರ ಕೊಟ್ಟು ಕಳಿಸಿದೆ
ಅದು ಆಗಿದ್ದು ಹೀಗೆ.
ಅವಳ ಮಗ ಪಳನಿ ಒಬ್ಬ ಹಣ್ಣು ಮಾರೋನು. ಒಮ್ಮೆ ಹಣ್ಣು ತಗೋಳೋಕೆ ಅಂತ ಗಾಡಿ ಹತ್ರ ನಿಂತಿದ್ದ ಅವನ್ನ ಮಾತಾಡಿಸಿದೆ
ಅವನು ಹೊಸೂರಿಂದ ಬಂದವನು . ಹಂಗೆ ಮಾತಾಡ್ತಾ ಕೆಲವು ವಿಷಯ್ಗಳು ತಿಳಿದವು
ಅವನಿಗೆ ಓದೋಕೆ ತುಂಬಾ ಆಸೆ ಇತ್ತು . ಪಿಯುಸಿವರೆಗೆ ಓದಿ ಫಸ್ಟ್ ಕ್ಲಾಸ್ ತೆಗೆದುಕೊಂಡಿದ್ದ. ಆದರೆ ಮನೆಲಿ ಅವನ ಅಪ್ಪ
ಮುಂದೆ ಓದೋದೇನೂ ಬೇಡ ಅಂತ ಹೇಳಿದ್ದರು ಆದ್ದರಿಂದ ಅವನು ಗಾಡಿಯಲ್ಲಿ ಹಣ್ಣು ಮಾರೋ ಕೆಲಸ ಮಾಡ್ತಿದ್ದ.
ಅವನಿಗೆ ಈ ಕೆಲ್ಸ ಇಷ್ಟ ಇರಲಿಲ್ಲ . ನೋಡೋಕೆ ಚುರುಕು ಅಂತ ಅನ್ನಿಸಿತು. ಜೊತೆಗೆಅನುಕಂಪವೂ ಉಂಟಾಯ್ತು
ನಮ್ಮಲ್ಲಿ ಬಾ ಬಂದು ಕಂಪ್ಯೂಟರ್ ಹಾಗು ಇಂಗ್ಲೀಷ್ ಫ್ರೀ ಆಗಿ ಕಲಿತುಕೋ ಎಂದು ಹೇಳಿದ್ದೆ . ನಂತರ ಅವನ್ ಅಪ್ಪ ಬಂದು ಹಾರಾಡಿದ
ನನ್ನಮಗನಿಗೆ ತಲೆ ಕೆಡಿಸಿದ್ದೀರಾ ಎಂದೆಲ್ಲಾ ಅಂದ ಕೊನೆಗೂ ಅವನ ಮನ ಒಲಿಸಿ ಪಳನಿ ನಮ್ಮಲ್ಲಿಗೆ ಬರಲಾರಂಭಿಸಿದ
ಹಾಗೆ ಮೂರು ತಿಂಗಳಲ್ಲಿ ಕಂಪ್ಯೂಟರ್ ಬೇಸಿಕ್ಸ್ ಹಾಗು ತಕ್ಕ ಮಟ್ಟಿಗೆ ಇಂಗ್ಲೀಷ್ ಕಲಿತ. ಪರೀಕ್ಷೆಯನ್ನು ತೆಗೆದುಕೊಂಡು
ಚೆನ್ನಾಗಿ ಸ್ಕೋರ್ ಮಾಡಿದ.
ನಂತರ ಅವನಿಗೆ ಒಂದು ಒಳ್ಳೇ ಕೆಲಸ ಕೊಡಿಸಲು ಯೋಚಿಸಿದ ನಾನು ನನಗೆ ಪರಿಚಯವಿದ್ದ ಕೋರಮಂಗಲದ
ಕಂಪೆನಿಯಲ್ಲಿ ಇಂಟರ್ವ್ಯೂ ಅಟೆಂಡ್ ಮಾಡಲು ಹೇಳಿದೆ. ಮನೆಯಲ್ಲಿ ಅಪ್ಪ ಒಪ್ಪುತ್ತಾ ಇಲ್ಲ್ಲ ಎಂದ. ಆದರೂ ಹೋಗಲು ಹೇಳಿದೆ
ನಂತರ ಅವನಿಗೆ ಕೆಲ್ಸ ಸಿಕ್ಕಿತು ಎಂದೂ ತಿಳಿಯಿತು.
ಅದಾದ ನಂತರ ಯಾವುದೇ ವಿಷಯ ಗೊತ್ತಾಗಲಿಲ್ಲ. ನಾನೂಬೇರೆ ಕೆಲ್ಸದಲ್ಲಿ ಬ್ಯುಸಿ ಇದ್ದೆ
ಅದಾಗಿ ಸುಮಾರು ಹದಿನೈದು ದಿನಗಳಾದವೇನೋ . ಒಮ್ಮೆ ಅವನ ಅಪ್ಪ ಅಮ್ಮ ಮನೆ ಮುಂದೆ ಬಂದು ಗಲಾಟೆ ಮಾಡಲಾರಂಭಿಸಿದರು
ಅವರ ಮಗ ರೋಡ್ ಆಕ್ಸಿಡೆಂಟ್‍ನಲ್ಲಿ ತೀರಿಕೊಂಡಿದ್ದನಂತೆ.
ನನಗೂ ದಿಗ್ಭ್ರಮೆಯಾಯ್ತು. ಆದರೆ ಅದಕ್ಕಿಂತ ಹೆಚ್ಚು ಬೇಜಾರಾಗಿದ್ದು ಆ ಹುಡುಗ ಸತ್ತಿದ್ದು ನನ್ನಿಂದ ಎಂದು ಡೈರೆಕ್ಟ್ ಆಗಿ ಹೇಳಿದ್ದು
ಸುಮಾರು ಹೊತ್ತಿನ ತನಕ ಅವರಿಬ್ಬರು ಮನೆಯಲ್ಲಿಕುಳಿತು ನನ್ನನ್ನ ಚುಚ್ಚಿ ಚುಚಿಇ ಮಾತಾಡುತ್ತಿದ್ದರು. ಅವನನ್ನು ಮುಂದೆ ಓದಲು ತಲೆ ಕೆಡಿಸಿ ಅವನ ಸಾವಿಗೆ ನಾನೆ ಕಾರಣವಾದೆ ಎಂದು ಅತ್ತರು
ಕೊನೆಗೆ ನೋಡಲಾರದೆ ನಮ್ಮನೆಯವರು ಹದಿನೈದು ಸಾವಿರ ಕೊಟ್ಟರು. ಆ ತಾಯಿ ಹೋಗುವಾಗ ನನಗೆ ಶಾಪ ಹಾಕಿ
ಹೋದಳು
ಇದು ನನಗೆ ಬೇಕಿತ್ತಾ ಎಂದು ನನನ್ನು ನಾನೆ ಪ್ರಶ್ನಿಸಿಕೊಂಡೆ . ಎಲ್ಲರೂ ಬೈದರು
ಅತೀ ಒಳ್ಳೇತನ ಅತೀ ಕೆಟ್ಟದ್ದ್ದಂತೆ
ಆ ನೆನಪಿನ ನೆರಳಿನಿಂದ ಹೊರಬರುತ್ತಿದ್ದಂತೆ ಮತ್ತೆ ಅದು ನನ್ನತ್ತ ಚಾಚಿಕೊಂಡಿತಲ್ಲ
ಆಗಾಗ ನನಗೆ ಅನ್ನಿಸುತ್ತೆ ನಾನು ಮಾಡಿದ್ದು ತಪ್ಪಾ?
ಆಗೆಲ್ಲಾ ಒಂಥರ ಅಂತರ್ಮುಖಿ ಆಗುತ್ತೇನೆ

Rating
No votes yet

Comments