"ಅಂದು ಅವಲಕ್ಷಣ ಅನ್ನಿಸಿಕೊಳ್ಳೋದು" ಅಥವ " ಆಡಿ ಅದ್ವಾನ(ನಿ) ಆಗುವುದು"

Submitted by Rasikara Rajya on Fri, 04/17/2009 - 11:28

ಅದ್ವಾನಿ ಮತ್ತು ಮನಮೋಹನ್ ಸಿಂಗ ನಡುವೆ ನಡೆದ ವಾಕ್ ಚಕಮಕಿ ಚುನಾವಣೆಗೆ ಬೇಕಾದ ಮೆರಗು ನೀಡಿದೆ. ಅದ್ವಾನಿ ಪ್ರಧಾನ ಮಂತ್ರಿಗಳಾನ್ನು ’ನಿಕಮ್ಮ’ ಎಂದು ಕರೆದಾಗ ನನಗೆ ಅಯ್ಯೊ ಪಾಪ ಆ ಮೃದು ಭಾಷಿ, ರಾಜಕಾರಣಿ ಅಲ್ಲದಿದ್ದರೂ ಐದು ವರುಷ ಸರ್ಕಾರ ನಡೆಸಿ ಭಾರತವನ್ನು ಪ್ರಗತಿಯತ್ತ ತಿರುಗಿಸುವುದರಲ್ಲಿ ಒಂದು ಬಲವಾದ ಕೈ ನೀಡಿದ್ದ ವ್ಯಕ್ತಿಗೆ ಹೀಗೆ ಹಿಯ್ಯಾಳಿಸುವುದೆ? ಎಂದು ಬೇಜಾರಾಯಿತು. ಆದರೆ ಸಿಂಗ ನೀಡಿದ ಭಾರಿ ತಿರುಗೇಟು ಕಂಡು "ಪರವಾಗಿಲ್ಲವೆ, ಇವರೂ ಸಕತ್ತಾಗಿ ಪೊಲಿಟಿಕಲ್ ಡೈಲಾಗ್ ಬಿಡ್ತಾರೆ!!" ಎನಿಸಿ ನನ್ನಲ್ಲಿ ಒಂದು ರೀತಿಯ ಮೆಚ್ಚುಗೆ ಉಂಟಾಗದೆ ಇರಲಿಲ್ಲ. ಅದೂ ಲೆಫ್ಟ್ ರೈಟ್ ಪಂಚು. ಮೊದಲು "ಪುಂಡರು ಮಸೀದಿ ಕೆಡುವುತ್ತಿದಾಗ ನಾನು ಮೂಲೆಯಲ್ಲಿ ಕಣ್ಣೀರು ಸುರಿಸುತ್ತಿರಲಿಲ್ಲ" ಎಂದರು. ಅದರ ಒತ್ತೊಟ್ಟಿಗೆ ಇನ್ನೋದು ಗುದ್ದು "ಇವರು ಗೃಹ ಮಂತ್ರಿಯಾಗಿದ್ದಾಗಲೆ ಅಲ್ಲವೆ ಕಂದಾಹಾರ್ ನಡೆದಿದ್ದು. ಈ ಉಕ್ಕಿನ ನಾಯಕ ಅಂದು ಕರಗಿ ಹೋಗಿದ್ದು ನೆನಪಿಲ್ಲವೆ" ಎಂದು ಅದ್ವಾನಿಜಿ ಬಗ್ಗೆ ಸಿಂಗ್ ಹೇಳಿದರು. ಇದೂ ಸಹ ಕ್ರೂರವಾದ ಮಾತುಗಳೆ. ಪಾಪ ಅದ್ವಾನಿ ಇವರಿಗಿಂತ ಹಿರಿಯರು. ಅವರಿಗೆ ಇನ್ನೆಷ್ಟು ಬೇಜಾರಾಗಿರಬೇಡ. ಆದರೂ ಮ.ಮೋ. ಸಿಂಗ ಇಲ್ಲಿ ಅಂಡರ್ ಡಾಗ್. ಅದ್ವಾನಿಯಾದರೋ ನಾಲ್ಕೈದು ದಶಕಗಳಿಂದ ರಾಜಕೀಯ ಕಣದಲ್ಲಿ ಹೊಡೆದು ಬಡೆದು ಮಾಡಿ ಪಳಗಿದವರು. ಅದ್ವಾನಿ ನಮ್ಮ ದೇಶದ ರಾಜಕಾರಣಿಗಳ ಆಟಗಾರ. ಸಿಂಗ್ ಆದರೋ ಹೊಲಸು ರಾಜಜೀಯದಲ್ಲಿ ಹುಟ್ಟಿ ಬರದೇ, ಸಮಾಜದಲ್ಲಿ ಗೌರವಿಸಲ್ಪಟ್ಟ ಸಂಭಾವಿತ ಆದರ್ಶಪ್ರಾಯ ಪ್ರೊಫೆಶನಲ್. ನನಗೆ ಸಿಂಗ್ ಮೇಲೆ ಸ್ವಲ್ಪ ಸಾಫ್ಟ್ ಕಾರ್ನರ್. ಆದ್ದರಿಂದ ಈಗ ನಡೆಯುತ್ತಿರುವ ವಾಗ್ಯುದ್ದದಲ್ಲಿ ನಾನು ಆಶಿಸುವುದು ’ಸಿಂಗ್ ಕಮ್ಮಿ ಏಟು ತಿನ್ನಲಿ’ ಮತ್ತು ’ಇನ್ನೂ ಹೆಚ್ಚು ಹರಿತವಾದ ವಾಕ್ಬಾಣಗಳನ್ನು ಅದ್ವಾನಿಜಿ ಕಡೆಗೆ ಬುಡ್ಲಿ, ತಾನೂ ಅವಷ್ಯವಾದಗ ಕೆಟ್ಟವನಾಗಬಲ್ಲೆ ಎಂಬುದನ್ನು ತೋರಿಸಲಿ’ ಅಂತ.

ಇಂಗ್ಲೀಶ್ ಗಾದೆ ಇದೆ. "Let your words be sweet and soft. You never know when you have to eat them yourself". ಆದ್ರೆ ಈ ಗಾದೆ ನಂಬಿಕೊಂಡ್ರೆ ಈ ಪ್ರಪಂಚ ಅನ್ನೊ ಸಮ್ಮುದ್ರದಲ್ಲಿ ತಿಮ್ಮಿಂಗಲಗಳಿಗೆ ಆಹಾರವಾಗಿ ಹೋಗ್ತೀವಿ. ಸರ್ವೈವ್ ಆಗೋದಕ್ಕೆ ಆಗಾಗ ಕಟುವಾಗಿ ವರ್ತಿಸಬೇಕಾಗುತ್ತದೆ.

ಆದ್ರಿಂದ ಸಿಂಗ್ ನೀವು ನುಗ್ಗಿ ಸಾ. ನಮ್ಮೆಸ್ರಲ್ಲಿ ಇನ್ನೊಂದು ಬಾಣ ಬುಡಿ.

ಬ್ಲಾಗ್ ವರ್ಗಗಳು

Comments