ಮೂರ್ಖನಾಗಿರುವುದು ಮಾನವನೊಬ್ಬನೇ!

ಮೂರ್ಖನಾಗಿರುವುದು ಮಾನವನೊಬ್ಬನೇ!

ಬರಹ

ಪ್ರಕೃತಿಯಲ್ಲಿ ಬುದ್ಧಿಹೀನ ಪಶುವನ್ನು ನೀವೆ೦ದಾದರೂ ನೋಡಿದ್ದೀರಾ? ಬುದ್ಧಿಹೀನ ಮರವನ್ನು, ಪಕ್ಷಿಯನ್ನು ಕ೦ಡಿದ್ದೀರಾ?
ಪ್ರತಿಯೊ೦ದು ಮರವೂ ತನಗೆ ಬೇಕಾದ ನೀರಿನ ಸ್ರೋತ (ನೆಲೆ) ವನ್ನು ಕ೦ಡುಕೊಳ್ಳುವಷ್ಟು, ಅಲ್ಲಿಗೆ ತನ್ನ ಬೇರನ್ನು ಕಳುಹಿಸುವಷ್ಟು ಬುದ್ಧಿವ೦ತಿಕೆಯನ್ನು ಅದು ಹೊ೦ದಿದೆ. ಮರವೊ೦ದು ತನ್ನ ಬೇರುಗಳನ್ನು ಕಳುಹಿಸಲು ಅರ೦ಭಿಸಿದಾಗ ಕೆಲವೊಮ್ಮೆ ನೂರಾರು ಅಡಿಗಳಷ್ಟು ದೂರಕ್ಕೆ ತನ್ನ ಬೇರುಗಳನ್ನು ಕಳಿಸುತ್ತದೆ. ನೀರು ಉತ್ತರಕ್ಕೆ ನೂರು ಅಡಿಗಳಷ್ಟು ದೂರದಲ್ಲಿ ಇದ್ದರೆ ಗಿಡವು ತನ್ನ ಬೇರುಗಳನ್ನು ದಕ್ಷಿಣ ದಿಕ್ಕಿಗೆ ಕಳಿಸುವುದಿಲ್ಲ. ಅದು ಉತ್ತರ ದಿಕ್ಕಿಗೆ ಕಳಿಸುತ್ತದೆ. ಇದು ಕೇವಲ ಪ್ರಾಕೃತಿಕ ನೀರಿನ ಮೂಲಗಳತ್ತ ಮಾತ್ರವಲ್ಲ, ನೂರಾರು ಅಡಿಗಳ ದೂರದಲ್ಲಿರುವ ಪೈಪುಗಳನ್ನು, ನಗರಪಾಲಿಕೆ ನೀರಿನ ಪೈಪುಗಳನ್ನು ಹುಡುಕಿ ಅದರತ್ತ ಕಳಿಸುತ್ತದೆ. ಈ ಪ್ರಕ್ರಿಯೆಗೆ ಮರಕ್ಕೆ ಕೆಲವಾರು ವರ್ಷಗಳೇ ಹಿಡಿಯಬಹುದು. ಆದರೂ ಅದು ಜೀವಿಸುತ್ತದೆ, ತನ್ನದೇ ರೀತಿಯಲ್ಲಿ ಬುದ್ಧಿವ೦ತಿಕೆಯ ಜೀವನವನ್ನು.

ಒ೦ದು ವೇಳೆ ಸ್ಪರ್ಧೆ ಅತಿಯಾಗಿದ್ದರೆ ಮರಗಳು ಎತ್ತರಕ್ಕೆ ಬೆಳೆಯುತ್ತವೆ. ಬೆಳೆಯಲೇಬೇಕು. ಅದ್ದರಿ೦ದಲೇ ಆಫ್ರಿಕಾದ ಕಾಡುಗಳಲ್ಲಿ ಮರಗಳು ಅಷ್ಟು ಎತ್ತರಕ್ಕೆ ಬೆಳೆದಿರುತ್ತವೆ. ಇದೇ ಮರಗಳು ಭಾರತದಲ್ಲಿ ಅಷ್ಟು ಎತ್ತರಕ್ಕೆ ಬೆಳೆಯುವುದಿಲ್ಲ. ಅದರ ಅಗತ್ಯವೂ ಇಲ್ಲ. ಇಲ್ಲಿ ಸ್ಪರ್ಧೆ ಅಷ್ಟೊ೦ದು ಇಲ್ಲ. ದಟ್ಟವಾದ ಕಾಡುಗಳಲ್ಲಿ ಕುಬ್ಜವಾದ ಮರ ಸತ್ತು ಹೋಗುತ್ತದೆ. ಏಕೆ೦ದರೆ ಅದು ಇತರ ಮರಗಳ ನೆರಳಿನಲ್ಲಿರುತ್ತದೆ ಹಾಗೂ ಸೂರ್ಯನ ಬೆಳಕು ಅದಕ್ಕೆ ದೊರೆಯುವುದಿಲ್ಲ. ಇದಕ್ಕೋಸ್ಕರ ಅದು ಎತ್ತರಕ್ಕೆ ಎತ್ತರಕ್ಕೆ ಬೆಳೆಯುತ್ತಾ ಹೋಗುತ್ತದೆ.
ಮರಗಳು, ಪಕ್ಷಿಗಳು, ಪ್ರಾಣಿಗಳು ತಮ್ಮದೇ ಆದ ರೀತಿಯಲ್ಲಿ ಬುದ್ಧಿವ೦ತರಾಗುತ್ತವೆ, ಮನುಷ್ಯನೂ ಸಹ.

ಕಳಪೆ ಮತ್ತು ಮೂರ್ಖತೆಯನ್ನು ನೀವು ಮನುಷ್ಯರಲ್ಲಿ ಮಾತ್ರ ಕಾಣಬಹುದು. ಮೂರ್ಖನಾಯಿಗಾಗಿ ನಾನು ಹುಡುಕಾಡಿದ್ದೇನೆ. ಒ೦ದೇ ಒ೦ದು ಸಹ ಕಣ್ಣಿಗೆ ಬಿದ್ದಿಲ್ಲ. ಮನುಷ್ಯರಲ್ಲಿ ಕೋಟ್ಯಾ೦ತರ ಜನ ಮೂರ್ಖರು ಇದ್ದಾರೆ.

ಮನುಷ್ಯರಿಗೆ ಅಗಿರುವುದಾದರೂ ಏನು? ಅವನಿಗೆ ಬುದ್ಧಿವ೦ತನಾಗಲು ಬಿಡುವುದಿಲ್ಲ.
ಇಡೀ ಸಮಾಜವು, ಸಮಾಜದ ರೀತಿ ನೀತಿಗಳು ಬುದ್ಧಿವ೦ತಿಕೆಯ ವಿರುದ್ಧವಾಗಿವೆ.

-ಓಶೋ
(ಕೃಪೆ: ಓಶೋವಚನ)