ನನ್ನದಲ್ಲದ ಕೋಪ , ನನ್ನ ಬೆನ್ನೇರಿದಾಗ!

ನನ್ನದಲ್ಲದ ಕೋಪ , ನನ್ನ ಬೆನ್ನೇರಿದಾಗ!

ಸಮಯ ೨.೩೦ ಆಗಿತ್ತು ,ಸ್ವಲ್ಪ ಹೆಚ್ಚುವರಿ ಕೆಲ್ಸವಿದ್ದ ಕಾರಣ ಆ ದಿನ (೧೭/೦೫/೦೯)ರವಿವಾರವಾದರು ಆಫೀಸ್ ಗೆ ಬಂದಿದ್ದೆ .ಸಾಕು ಇವತ್ತಿಗೆ ಎಂದಿದ್ದರು ಇದು ಇದ್ದಿದ್ದೇ ಎಂದು ರೂಂ ಕಡೆ ಹೊರಡಲನುವಾದೆ .ಹೊರಗಡೆ ಕಪ್ಪು ಕಾರ್ಮೋಡ ಆಕಾಶದೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿತ್ತು .ಅದಾಗಲೇ ರೂಪುಗೊಂಡಿದ್ದ ಮಳೆಯ ಹನಿಗಳು ಭೂಮಿಗೆ ಚುಂಬಿಸಲು ಹಾತೊರಯುತಿದ್ದವು.ಮೋಡದೊಳಗಿನ ಗುಡುಗಿನಂತೆ ನಮ್ಮ ಬಿ ಎಂ ಟಿ ಸಿ ಬಸ್ಸುಗಳು ಬರ್ರೋ ಎಂದು ಹಾದುಹೋಗುತಿದ್ದವು .
ಕಳೆದ ಒಂದು ಮುಕ್ಕಾಲು ವರ್ಷದಿಂದ ನನಗು ಈ ಬಿ ಎಂ ಟಿ ಸಿ ಬಸ್ಸುಗಳಿಗೂ ಒಂದು ರೀತಿಯ ಅವೀನಾಭಾವ ಸಂಬಂಧ ಬಂದುಬಿಟ್ಟಿದೆ . ಎಲ್ಲಿ ಕಂಡರಲ್ಲಿ ಅಲ್ಲಿ ಹತ್ತುವುದು ,ಅದಕ್ಕೆ ತಿಳಿಸದೇ ಹಾರುವುದು ಹೀಗೆ ನಾನು ಮಾಡಿದರೆ ,ಅದು ಅಸ್ಟೆ ಕೆಲವೊಂದು ಸಲ ಘಂಟೆ ಗಟ್ಟಲೆ ಬರದೆ , ಕೆಲವೊಮ್ಮೆ ಎದಿರುಬಂದರು ಗುರುತಿಸದೆ ತಪ್ಪಿಸಿಕೊಂಡು ಓಡಿದೆ.
ಮೊನ್ನೆಯೂ ಹಾಗೆ ,ಕಾಮಕ್ಯದ ಕಡೆ ಹೊರಟಿದ್ದ ನನ್ನ ಸ್ನೇಹಿತನನ್ನ ಏರಿ ಕೂತೆ .ನಿಮಗೆ ಗೊತ್ತಿರಬಹುದು ನಗರದ ಬಿ ಎಂ ಟಿ ಸಿ ಬಸ್ ಗಳಲ್ಲಿ ಹಿರಿಯನಾಗರಿಕರಿಗೆ ಅಂತ ೨ ಆಸನಗಳನ್ನೂ ಮೀಸಲಿಟ್ಟಿರುತ್ತಾರೆ.ರವಿವಾರವಾದ್ದರಿಂದ ಅಸ್ಟೇನು ಜನಸಂದಣಿ ಇಲ್ಲದ ಕಾರಣ ಬಸ್ ಬಿಕೋ ಅನ್ನುತಿತ್ತು .ನಾನು ಬಸ್ ಏರಿದವನೇ ಹೋಗಿ ಕೂತಿದ್ದು ಆ ಮೀಸಲಾಗಿಟ್ಟಿದ್ದ ಆಸನದಲ್ಲೇ ,ಪಕ್ಕದೊಲ್ಲಬ್ಬರು ಕೂತಿದ್ದರು .ಒಂದು ೫ ನಿಮಿಷದ ದಾರಿ ಅಸ್ಟೆ .ಮುಂದಿನ ನಿಲ್ದಾಣದಲ್ಲಿ ವಯಸ್ಸಾದ ದಂಪತಿಗಳು ನಾನಿದ್ದ ಬಸ್ಸೇಗೆ ಹತ್ತಿದರು .ಹೆಂಡತಿ ಮುಂದೆ ಹೋಗಿ ಕುಳಿತರು ,ಗಂಡ ಮಾತ್ರ ಅಲ್ಲೇ ನಿಂತಿದ್ದರು . ಹಿಂದಿಂದ ಯಾರೋ ತಿವಿದಂತಾಯಿತು ತಿರುಗಿ ನೋಡಿದೆ ,ವಯಸ್ಸಾದ ಒಬ್ಬ ವ್ಯಕ್ತಿ ಗಡಸು ಧ್ವನಿಯಲ್ಲಿ "ರೀ ಕಣ್ಣ ಕಾಣಲ್ಲನ್ರಿ ಸೀಟು ಬಿಟ್ ಕೊಡಿ ಅವರಿಗೆ ಅಂದ್ರು ",ಯಾವಾಗ್ಲೂ ನಕ್ಕು ಸುಮ್ಮನಾಗುವ ನಾನು ಅಂದೇಕೋ ಒಮ್ಮೆಲೇ ಕೋಪಿಸಿಕೊಂಡೆ .ನನ್ನ ಉತ್ತರ ಹೀಗಿತ್ತು :
"ಅಲ್ಲರಿ ನಿಮಗೆ ಕಾಣತ್ತೋ ,ಹಿಂದುಗಡೆ ಅಸ್ಟು ಸೀಟು ಖಾಲಿ ಇದೆ ಅವರಿಗೆ ಬೇಕಾದ್ರೆ ಕುತ್ಕೊತಾರೆ ನಿಮಗೇನ್ರಿ ತುರಿಕೆ .ಅಷ್ಟಕ್ಕೂ ನೀವೇಕೆ ಅಲ್ಲಿ ಕುತಿದಿರ ,ಇಲ್ಲೇ ಕುತ್ಕೊಬಹುದಿತ್ತಲ್ಲ .ಬನ್ಬಿಟ್ರು ನನಗೆ ಹೇಳ್ಲಿಕ್ಕೆ ".
ಅಷ್ಟರಲ್ಲಿ ಕಂಡಕ್ಟರ್ ಮಧ್ಯ ಪ್ರವೇಶಿಸಿ ಇಬ್ಬರನ್ನು ಸುಮ್ಮನಿರುವಂತೆ ಸೂಚಿಸಿದ.ಅವರು ಯಾರಿಗೆ ಸೀಟು ಬಿಡಬೇಕೆಂದು ಹೇಳಿದ್ದರೋ ಆ ವ್ಯಕ್ತಿ ಅವನಿಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಹಿಂದೆ ಹೋಗಿ ಕೂತಿದ್ದ . ಇದ್ದವರಿಗೆ ಪುಕ್ಸಟೆ ಮನರಂಜನೆ .

ಇನ್ನೊಂದು ನಿನ್ನೆಯದು .ಯಾವುದೊ ಕೆಲಸಕ್ಕೆಂದು ಹೊರಗೆ ಹೊರಡುತಿದ್ದೆ.ಘಂಟೆ ೫.೦೦ ಆಗಿದ್ದರು ,ಆಗಲೇ ಕತ್ತಲೆ ಆದಂತೆ ಭಾಸವಾಗುತಿತ್ತು .ಒಂದು ಪ್ರಿಂಟ್ ಔಟ್ ಬೇಕೆಂದು ಅಲ್ಲೇ ಪಕ್ಕದಲಿದ್ದ xerox ಶಾಪ್ ಗೆ ಹೋದೆ .ನನಗೆ ಬೇಕಾಗಿದ್ದು ಒಂದೇ ಶೀಟ್ .ಅದು ಮಿಸ್ ಆಗಿ ೩ ಬಂತು .೨ ಅಲ್ಲೇ ಇತ್ತು ಒಂದು ಅಂತ ಹೇಳಿ ಎಷ್ಟೈತು ಅಂದೇ .ಒಟ್ಟು ೩ ಅಲ್ವಾ ಅಂದೇ .ಇಲ್ಲ ಒಂದೇ ಅಂದೇ . ಮತ್ತೆ ಅವೆರಡು ಅಂದ .ನನಗೆ ಬೇಡ ಅಂದೇ .ಅದಕ್ಕೆ ನಾನ್ ಏನ್ ಮಾಡ್ಲಿ ಎಂದ .ಮಾತಿಗೆ ಮಾತು ಬೆಳೆದು ಏನೇನೋ ಬಾಯಿಗೆ ಬಂದವು .
ಅವ ಹೇಳಿದಷ್ಟು ಹಣ ಕೊಟ್ಟು ತಿರುಗಿ ಬಂದೆ , ಹೂ ಹೂ ಕೆಲಸ ಮಾಡಲು ಮನಸ್ಸೇ ಆಗಲಿಲ್ಲ .ಥೂ ಸುಮ್ಮನೆ ಜಗಳ ಆಡಿದೆನಲ್ಲ ಅನಿಸ್ತು .ಹಿಂದೆ ಮುಂದೆ ನೋಡಲಿಲ್ಲ ಸೀದಾ ಅವನ ಬಳಿ ಹೋಗಿ sorry ಅಂತ ಹೇಳಿ ಬಂದ್ಬಿಟ್ಟೆ .ಮನಸ್ಸಿಗೆ ಏನೋ ನಿರಾಳ .
ಆದರೂ ಇತ್ತೀಚಿಗೆ ಕೋಪ ನನ್ ಅನ್ನೇ ಹುಡುಕಿಕೊಂಡು ಬರ್ತಿದೆ ಅನ್ಸುತ್ತೆ .ಆದರೆ ೨ ಘಟನೆಗಳ ನಂತರ ಮಳೆಯಲ್ಲಿ ಫುಲ್ ನೆನೆದಿದ್ದಿನಿ ,ಮುಂಗಾರುಮಳೆ ಪೂಜ ಗಾಂಧೀ ತರ. ಹಿ ಹೀ :D :D

Rating
No votes yet

Comments