ಜೋಡಿ ಗುಲಾಬಿಗಳು!

ಜೋಡಿ ಗುಲಾಬಿಗಳು!

ಬರಹ

ಆರಾಮವಾಗಿ ಸೀಟಿನಲ್ಲಿ ಕುಳಿತಿದ್ದು ’ಸ್ವಲ್ಪ ಒತ್ತಿಕೊಳ್ಳಿ’ ಎಂದು ಅಡ್ಜಸ್ಟ್ ಮಾಡಿಕೊಳ್ಳುವಂತೆ ... ಛತ್ರಿ ಹಿಡಿದು ಹೋಗುವಾಗ ಮತ್ತೊಬ್ಬರು ಬಂದು ತೂರಿಕೊಳ್ಳುವಂತೆ ... ನಮ್ಮ ಮನೆಯ ಗುಲಾಬಿ ಗಿಡದಲ್ಲೂ ಇಷ್ಟು ರಷ್ ಇದೆ ಅಂತ ಗೊತ್ತಿರಲಿಲ್ಲ ...

ಈ ಜೋಡಿ ಹೂಗಳು ಮುಂಚೇನೇ ಬೆಳೆದಿದ್ದರೆ ಕುಮಾರಣ್ಣ-ಯಡಿಯೂರಪ್ಪ ಮುಖಮಂತ್ರಿಯ ಸ್ಥಾನವನ್ನು ಹಂಚಿಕೊಡಿದ್ದಾಗ ಇಬ್ಬರಿಗೂ ಸೇರಿ ಕೊಡಬಹುದಿತ್ತು

’ನಮ್ಮೂರ ಮಂದಾರ ಹೂವೆ’ ಯಂತಹ ತ್ರಿಕೋನ ಪ್ರೇಮದ ಚಲನಚಿತ್ರ ಬಂದ ಸಮಯದಲ್ಲಿ ಈ ಗುಲಾಬಿ ಮೂಡಿದ್ದರೆ, ರಮೇಶ್-ಶಿವರಾಜಕುಮಾರ್ ಇಬ್ಬರೂ ಸೇರಿ ಪ್ರೇಮಳಿಗೆ ಒಂದೇ ಹೂವು ಕೊಡಬಹುದಿತ್ತು.

ಕಳೆದ ವ್ಯಾಲಂಟೈನ್ ದಿನದಂದು ಈ ಜೋಡಿ ಮೂಡಿದ್ದರೆ, ನಮ್ಮ ತಿರುಪತಿ ತಿಮ್ಮಪ್ಪ ತನ್ನಿಬ್ಬರ ಪತ್ನಿಯರಿಗೆ ಕೊಟ್ಟು ಇಬ್ಬರನ್ನೂ ಸಮನಾಗಿ ಪ್ರೀತಿಸುತ್ತೇನೆ ಎಂದು ಸಾರಬಹುದಿತ್ತು

’ಏಕ್ ಫೂಲ್ ದೋ ಮಾಲಿ’ ಚಿತ್ರದ ನಿರ್ಮಾಪಕ/ನಿರ್ದೇಶಕ ದೇವೇಂದ್ರ ಗೋಯಲ್ ಇದ್ದಿದ್ದಲ್ಲಿ ಈಗ ’ದೋ ಫೂಲ್ ಏಕ್ ಮಾಲಿ’ ಚಿತ್ರದಲ್ಲಿ ನಾನು ಹೀರೋ ಆಗಬಹುದಿತ್ತು.. ಛೇ! ಚಾನ್ಸ್ ಮಿಸ್ ಆಯ್ತು !!

ಇದನ್ನು ಪಡೆಯಲು ಸೂಕ್ತ ವ್ಯಕ್ತಿಗಳು ಅಂದರೆ ಅಂಬಾನಿ ಸಹೋದರರು. ಯಾಕೆ ಅಂದಿರಾ? ಅವರಿಬ್ಬರೂ ಈ ಹೂಗಳ ಹಾಗೇ ಈಗ ವಿರುದ್ದ ದಿಕ್ಕಿನಲ್ಲಿ ಮುಖ ಮಾಡಿ ನಿಂತಿದ್ದಾರೆ.

ನನ್ನಂತೆಯೇ ನಿಮಗೂ ಚಾನ್ಸ್ ಮಿಸ್ಸ್ ಆದ ವಿಷಯಗಳು ತಲೆಗೆ ಹೊಳೆದರೆ ಅಥವಾ ಅಂಬಾನಿ ಸಹೋದರರಿಗಿಂತಾ ಸೂಕ್ತ ವ್ಯಕ್ತಿಗಳು ಈ
ಹೂಗಳನ್ನು ಪಡೆಯಲು ಅರ್ಹರಾಗಿದ್ದರೆ, ಬರೆದು ತಿಳಿಸಿ

ಚಿತ್ರ: ನಾನೇ ಸೆರೆಹಿಡಿದಿದ್ದು