ನಿಮಗೂ ಹೀಗೆ ಆಗಿದೆಯ ?

ನಿಮಗೂ ಹೀಗೆ ಆಗಿದೆಯ ?

                                   ಮನುಷ್ಯನ ಮನಸೇ ಹೀಗೆ , ಒಂದು ಕ್ಷಣದಲ್ಲಿ ಏನೆಲ್ಲಾ ಯೋಚಿಸಿ ಬಿಡುತ್ತದೆಯೆಂದರೆ ,ಬೆಳಕಿನ ವೇಗಕ್ಕಿಂತ ಇದರ ಚಿಂತನಾ ವೇಗವೇ ಹೆಚ್ಚೇನೂ ಅನ್ನಿಸಿಬಿಡುತ್ತದೆ .ಇರುವುದೊಂದೇ ಆದರೆ ಯೋಚನೆ ಸಾವಿರ .ಎದ್ದ ತಕ್ಷಣ ಗಡಿಯಾರ ನೋಡಿದಿರಿ ಅಂದುಕೊಳ್ಳಿ ,ಸಮಯ ನೋಡಿದ ತಕ್ಷಣ ಶುರುವಾಗಿ ಬಿಡುತ್ತವೆ ನಿಮ್ಮಾ ಯೋಚನೆಗಳು ಸ್ನಾನ ಬೇಗ ಮಾಡು ,ಇರೋದು ಅರ್ಧ ಘಂಟೆ ಮಾತ್ರ , ತಿಂಡಿ ಇಲ್ಲೇ ತಿನ್ನಲೋ ಅಥವಾ ಆಫೀಸ್ ಅಲ್ಲೇ ಎನ್ನದ್ರು ಮುಕ್ಕಲೋ , ಬಸ್ ಟೈಮ್ ಆಯಿತು ,ಆ ಬಸ್ ಸಿಕ್ಕಿಲ್ಲ ಅಂದ್ರೆ ಆಟೋದಲ್ಲಿ ಹೋಗ್ಲೋ ,ಬೇಡ ಬೇಡ ಸುಮ್ನೆ ದಂಡ ,ಇವತ್ತೇನು ಕೆಲಸ ಕಾದಿದೆಯೋ ,ಸಂಜೆ ಬೇಗ ಬಂದ್ರೆ ಫಿಲಂ ಗೆ ಹೋಗ ಬಹುದಿತ್ತೇನೋ ....................................ಹೀಗೆ ಹತ್ತು ಹಲವು ಯೋಚನೆಗಳು ಕೇವಲ ಕ್ಷಣದೊಳಗೆ .

                                 ಹೀಗೆ ಕೆಲವು ಸಲ ನೂರಾರು ಯೋಚನೆಗಳು ಮನಸ್ಸಿನಲ್ಲಿ ಹೊಕ್ಕಾಗ ಅದು ಕೆಲವೊಮ್ಮೆ ಜಾಮ್ ಆಗುವುದುಂಟು .ಹೇಗಂದ್ರೆ ಮಾಡ ಹೊರಟಿರುವ ಕೆಲಸವೇ ಮರೆತು ಹೋಗುವುದು ಅಥವಾ ಏನೋ ಮಾಡಲು ಹೋಗಿ ಇನ್ನೇನೋ ಮಾಡಿರುವುದು ಅಥವಾ ಆ ಕ್ಷಣ ದಲ್ಲಿ ಎಲ್ಲವೂ ಮರೆತು ಹೋಗಿ ಒಂದು ಕ್ಷಣ ಮನಸಿನ ಕೆಲಸವೇ ನಿಂತುಹೋಗಿಬಿಡುವುದು ಹೀಗೆ ಕೆಲವರಿಗೆ ಇನ್ನು ವಿಚಿತ್ರ ರೀತಿಯ ಅನುಭವಗಳು ಆಗಿರಲೂಬಹುದು. ಇದನ್ನ ಆಂಗ್ಲ ಭಾಷೆಯಲ್ಲಿ "absence mind " ಅನ್ನುತ್ತಾರೆ . ಇದೆ ರೀತಿಯ ಒಂದು ಅನುಭವ ನಿನ್ನೆ ನನಗಾಯಿತು ಅದನ್ನ ನಿಮ್ಮೊಂದಿಗೆ ಹಂಚಿ ಕೊಳ್ಳುತ್ತಿದ್ದೇನೆ .

                                                  "ಆಗಲೇ ರಾತ್ರಿ ೧೦.೦೦ ಆಗಿತ್ತು , ಇನ್ನು ಆಫೀಸ್ ಅಲ್ಲೇ ಇದ್ದೆ .ಯಾಕೋ ಸ್ವಲ್ಪ ಸುಸ್ತು ಅನ್ನಿಸಿತು ಸಾಕು ಇವತ್ತಿಗೆ ಅನ್ನಿಸಿ ಹೊರಬಂದೆ .ಮನಸಿನ ತುಂಬಾ ಯೋಚನೆಗಳು ಕೆಲಸದ್ದು , ರೆಸ್ಟ್ ತೆಗೆದುಕೊಳ್ಳಬೇಕು,ಬೆಳಿಗ್ಗೆ ಬೇಗ ಏಳಬೇಕು ,ಊಟ ಏನ್ ಮಾಡೋದು , ಪಿಜಿ ಅಲ್ಲಿ ಇರುತ್ತೋ ಇಲ್ವೋ ,ಮನೆಗೆ ಫೋನ್ ಮಾಡಬೇಕಿತ್ತು , ಭಾನುವಾರದ ಪ್ರೊಗ್ರಾಮ್ ಬೇರೆ ಕ್ಯಾನ್ಸಲ್ ಆಯಿತಲ್ಲ ಅನ್ನೋ ಬೇಜಾರ ,ಬಸ್ ಸಿಕ್ಕತ್ತೋ ಇಲ್ವೋ ಈ ಟೈಮ್ ಅಲ್ಲಿ , ಆಟೋ ಆದ್ರೆ ಒಂದುವರೆ ಕೊಡ್ಬೇಕು , ಹೀಗೆ ಹತ್ತು ಹಲವು ಯೋಚನೆ ಮಾಡುತ್ತಲೇ ಕಾಲುಗಳು ನಿಧಾನವಾಗಿ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದವು .ವಜ್ರ ಬಸ್ ಬಂತು ಯೋಚನಾ ಮುಗ್ದನಾಗೆ ಒಳ ಹೋದೆ .ಖಾಲಿನೇ ಇತ್ತು , ಕಂಡಕ್ಟರ್ ಎಲ್ಲಿಗೆ ಅಂದ 'ಗಣೇಶ್ ಭವನ್ ' ಕೊಡಿ ಎಂದೇ ,ಒಮ್ಮೆ ಮುಖ ನೋಡಿ ಮತ್ತೆ ಎಲ್ಲಿಗೆ ಅಂದ , ನಾನು ಸ್ವಲ್ಪ ಜೋರಾಗೆ 'ಗಣೇಶ್ ಕೊಡಯ್ಯ ಅಂದೇ ' , ಈಗ ಅವನಿಗೆ ಸ್ವಲ್ಪ ಕೋಪ ಬಂತು ಅನ್ಸುತ್ತೆ 'ರೀ ಇದೆ ಗಣೇಶ್ ಭವನ್ , ಮೈ ಮೇಲೆ ಎಚ್ಚರ ಇಟ್ಕೊಂಡು ಬಸ್ ಹತ್ತಿ ಅಂದ ' :D .ತಕ್ಷಣ ಯಾವುದೊ ಲೋಕದಲ್ಲಿದ್ದವನು ದಡಕ್ ಎಂದು ಭೂಮಿ ಮೇಲೆ ಬಿದ್ದ ಹಾಗೈತು .ಸುತ್ತ ಮುತ್ತ ನೋಡಿಕೊಂಡೆ ,ಸಧ್ಯ ಯಾರು ಇರಲಿಲ್ಲ .ನನ್ನನ್ನು ನಾನೇ ಹಳಿದುಕೊಂಡು 'ಬ್ಯಾಂಕ್ ಕಾಲೋನಿ ' ಕೊಡಿ ಎಂದೇ , ಆಮೇಲೆ ಒಳಗೊಳಗೇ ನನ್ನ ಮೂರ್ಖತನಕ್ಕೆ ನಾನೇ ನಗುತ್ತ ಪಿಜಿ ತಲುಪಿದೆ ".

                          ಇದು ಕೇವಲ ಭಾವುಕರಿಗೆ ಮಾತ್ರ ಆಗುತ್ತದೆಯೋ ಅಥವಾ ಎಲ್ಲರಿಗೂ ಸರ್ವೇ ಸಾಮನ್ಯವೋ ನಾನರಿಯೆ , ಆದರೆ ಕೆಲವೊಂದು ಸಲ ಇದು ದೊಡ್ಡ ಪ್ರಮಾದಗಳಿಗೂ ಎಡೆಮಾಡಿಕೊಡುತ್ತದೆ ಅಂದ್ರೆ ತಪ್ಪಾಗಲಾರದು .ಮನಸ್ಸಿನ ಹಿಡಿತ ಇಲ್ಲಿ ಬಹಳ ಮುಖ್ಯವಾಗುತ್ತೆ , ಅದೆಷ್ಟೋ ಯೋಚನೆಗಳಿದ್ದರು ವರ್ತಮಾನದ ಆಗುಹೋಗುಗಳಿಗೆ ಲಗುಬಗೆಯಲ್ಲಿ ಸ್ಪಂದಿಸಿದರೆ ಮಾತ್ರ ಈ 'absence mind ' ಅನ್ನು ದೂರ ಇಡಬಹುದು ಅನ್ಸುತ್ತೆ .

                                        ನೀವೇನಂತೀರಾ ?

Rating
No votes yet

Comments