ಸವಾರೀನೋ ಪಯಣವೋ

ಸವಾರೀನೋ ಪಯಣವೋ

ನನ್ನ ಪಯಣ ತುಮಕೂರು ತಲುಪಿತ್ತು ಅಂತ ಹೇಳಿದ್ನಲ್ಲಾ. ಅದೇ ಹೆಣದ ವಿಚಾರ ಹೇಳ್ತಿದ್ದೆ. ಗುರುತೇ ಸಿಗದಂತಾಗಿತ್ತು. ಆದರೆ ಅದು ನಾಯಿ ಹೆಣ. ಅದನ್ನು ನೋಡುತ್ತಲೇ ಮನಸ್ಸು ರಾಕೆಟ್ ವೇಗದಲ್ಲಿ ಓಡಿತ್ತು. ಜೀವನದ ಬಗ್ಗೆ ಹಾಗೇ ಚಿಂತನೆ ನಡೆಸಿತ್ತು. ಎಲ್ಲರ ಬದುಕಿನ ಪಯಣ ಹುಟ್ಟಿನಿಂದ ಸಾವಿನ ಕಡೆಗಲ್ಲವೇ ? ಎಲ್ಲೆಲ್ಲೆ ಯಾರು ಹೇಗೆ ಸಾಯ್ತಾರೋ ಗೊತ್ತಿರಲ್ಲ.
ಬರೇ ಏಕಾತನೆ... ಅದೇ ಲಾರಿಗಳು ಒಮ್ಮೆ ಹಿಂದಕ್ಕೆ ಮಗದೊಮ್ಮೆ ಮುಂದಕ್ಕೆ ಹೀಗೆ ನಡೆದಿತ್ತು ನನ್ನ ಮಿಂಚಿನ ಓಟ. ಬೈಕ್‌ನಲ್ಲಿ ನಾನು ಹೋಗೋ ಸ್ಪೀಡ್ ನೋಡಿದ್ರೆ ಜೀವನದಲ್ಲೂ ನಂದು ಇಷ್ಟೇ ಸ್ಪೀಡೇನೋ ಅಂತ ಅನ್ನಿಸುತ್ತಿತ್ತು. ಮನಸ್ಸಿನ ಲಹರಿ ಹಿಂದಕ್ಕೆ ಓಡಿತು.
ಪದವಿ ಓದುತ್ತಿದ್ದ ಕಾಲವದು. ಆ ಕಾಲೇಜು ಹೊಸದು. ನಮ್ಮದು ಎರಡನೇ ಬ್ಯಾಚು. ಕ್ಲಾಸಲ್ಲಿ ಇದ್ದಿದ್ದು ೧೫ ಹುಡುಗರು. ಮೂವತ್ತೈದು ಹುಡುಗಿಯರು. ಮೊದಲ ದಿನ ಕಾಲೇಜಿಗೆ ಹೋದಾಗ ಮೊದಲು ಎಂಟ್ರಿ ಕೊಟ್ಟಿದ್ದು ನೇರ ಸೆಕಂಡ್ ಇಯರ್‌ಗೆ. ಅವರೆಲ್ಲರೂ ಪಾಪ ಎದ್ದು ನಿಂತು ಗೌರವ ಸೂಚಿಸಿದ್ರು. ಅಲ್ಲಿ ಹೋಗಿ ಇದು ಫಸ್ಟ್ ಇಯರಾ ಅಂದಾಗಲೇ ಹಿರಿಯರಿಗೆ ಜ್ಞಾನೋದಯವಾಗಿದ್ದು ! :)
ಹಾಗೆ ಫಸ್ಟ್ ಇಯರ್ ಕ್ಲಾಸಿಗೆ ಬಂದಾಯ್ತು. ಎಲ್ಲರೂ ಹೊಸಬರಲ್ವೇ ! ಪರಿಚಯ ಮಾಡಿದ್ದಾಯ್ತು. ಹಾಗೆ ಮೊದಲ ವರ್ಷದ ಕಾಲೇಜ್ ಡೇ ಬಂದಾಯ್ತು. ಮೊದಲೇ ಹೇಳಿದಂಗೆ ಇರೋ ಹದಿನೈದು ಹುಡಗರಲ್ಲಿ ಬಹುತೇಕ ಎಲ್ಲರೂ ಲವ್ವಲ್ಲಿ ಬಿದ್ದಿದ್ರು. ಬಹುತೇಕ ಎಲ್ಲ ಹುಡುಗೀರು ರಾಖಿ ದಿನ ರಾಖಿ ಕಟ್ಟಿದ ಕಾರಣ ಬೇರೇನೂ ಮಾತೇ ಇರಲಿಲ್ವಲ್ಲಾ ! ಆದರೂ ಏನಾದ್ರೂ ಮಾಡಬೇಕು. ಅಂತ ಸಾಕಷ್ಟು ಕಸರತ್ತು ಮಾಡಿದ್ದೂ ಆಗಿದೆ. ಪದವಿ ಮುಗಿದು ಐದು ವರ್ಷ ಆದ್ರೂ ಇನ್ನೂ ಯಾರು ಸಿಕ್ಕಿಲ್ವಲ್ಲಾ ಛೇ ! ಆಗ ನನ್ನ ಹತ್ರ ಬೈಕ್ ಇರಲಿಲ್ಲ. ಬೇರೆ ಯಾರ್‍ದಾದ್ರೂ ಎತ್‌ಕೊಂಡ್ ಬರೋಣ ಅಂದ್ರೆ ಬೈಕ್ ಬಿಡಿ ಸೈಕಲ್ ತುಳಿಯೋಕು ಬರ್‍ತಿರಲಿಲ್ಲ ಬಿಡಿ. ಇದೇ ಕಾರಣವೂ ಇರಬಹುದು ಅಂತ ಅಂದ್ಕೊಂಡೆ. ಲಹರಿ ಎಲ್ಲೋ ಹೋಗ್ತಿದೆಯಲ್ಲಾ ಅಂತ ತಲೆ ಕೊಡವಿದೆ.
ಹೀಗೆ ವೈರಾಗ್ಯದ ಕಡೆಗೆ ಚಿಂತನೆ ನಡೆಸುತ್ತಿದ್ದೆ ನೋಡಿ. ಆಗಲೇ ಞಒಮ ಅಂತ ಒಂದು ಬೈಕ್ ಮುಂದಕ್ಕೋಡಿತು. ಅದರಲ್ಲಿ ಸವಾರಿ ಮಾಡ್ತಿದ್ದುದು ಒಂದು ಜೋಡಿ. ಒಂದು ಕ್ಷಣ... ನನ್ನ ಹಿಂದೆ ಯಾರಾದರೂ ಇದ್ದಿದ್ದರೆ ಅಂತ ಕಲ್ಪಿಸಿಕೊಂಡೆ !
ಇರಬೇಕಾದವರು ಯಾರು ? ಅದೇ ಇನ್ನೂ ನಿರ್ಧಾರವಾಗಿಲ್ವೇ ! ಕಣ್ಮುಂದೆ ಹೋಗೋ ಹುಡುಗಿಯರು ! ಟೀವೀಲಿ ಕಾಣೋ ಹುಡುಗಿಯರು ! ಹೀಗೆ ಯಾರು ಅಂತಾನೇ ಗೊತ್ತಾಗ್ತಾ ಇಲ್ಲ. ಊರಲ್ಲಿ ಯಾರೂ ಸಿಕ್ಕಿಲ್ಲ ಅಂತ. ಉಡುಪಿಗೆ ಬಂದಿದ್ದಾಯ್ತು. ಅಲ್ಲೇ ಪದವಿ ಕೂಡಾ ಆಯ್ತು. ಶ್ರೀಕೃಷ್ಣನ ಸನ್ನಿಧಿಯಲ್ಲಿ ಗೋಪಿಕೆಯರು ಸಿಕ್ಕಾರು ಎಂಬ ನಿರೀಕ್ಷೆ ಇತ್ತು. ಅದೂ ಸುಳ್ಳಾಯ್ತು. ಹಾಗೆ ಬೆಂಗಳೂರಿಗೂ ಭೇಟಿ ಕೊಟೆ. ಲಲನೆಯರು ಸಿಕ್ಕಾರು ಅಂದ್ರೆ ಅಲ್ಲಿ ಸಿಕ್ಕಿದ್ದು ಪಿಜಿ ಡಿಪ್ಲೋಮ ಪದವಿ. ಅದೂ ಮುಗಿಸಿ ಮತ್ತೆ ಉಡುಪಿಗೆ ಬಂದಿದ್ದಾಯ್ತು. ಅದೂ ಪ್ರಯೋಜನಕ್ಕೆ ಬಂದಿಲ್ಲ. ಹೋದ ದಾರಿಗೆ ಸುಂಕ ಇಲ್ಲ ಅಂತ ಉಡುಪಿಯಿಂದ ಕಾಲ್ಕಿತ್ತು ಚಿತ್ರದುರ್ಗಕ್ಕೆ ಬಂದಾಗಿದೆ. ಅಲ್ಲೂ ಮೂರು ವರ್ಷ ನೋಡಿದ್ದಾಯ್ತು. ಮೊದಲೇ ನೀರಿಲ್ಲದ ಊರು ಅನ್ನೋ ಹೆಸರು. ಅಲ್ಲೂ ಯಾರೂ ಸಿಕ್ಕಿಲ್ಲ.
ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು ಎಷ್ಟೊಂದು ಮನೆ ಇಲ್ಲಿ ಎಲ್ಲಿ ನನ್ ಮನೆ ಅಂತ ಚಿನ್ನಾರಿ ಮುತ್ತ ಫಿಲಂ ಹಾಡು ನೆನಪಾದಾಗ ಚಿತ್ರದುರ್ಗ ಸಮೀಪಿಸಿತ್ತು. ಶಿರಾ, ಹಿರಿಯೂರು ಹಿಂದೆ ಸರಿದಿದ್ದೇ ಗೊತ್ತಾಗಿಲ್ಲ. ಸಮಯ ನೋಡಿದಾಗ ಸಂಜೆ ೪.೫೦. ಮನೆ ಮುಂದೆ ನಿಂತಾಗ ೫ ಗಂಟೆ.
ಎನಿ ಹೌ ಈಗ ಬೆಂಗಳೂರಲ್ಲೇ ಇದ್ದೇನೆ. ಸಂಪದಕ್ಕೂ ಸದಸ್ಯನಾಗಿದ್ದೇನೆ. ನನ್ನವಳು ಯಾರು ಅಂತ ಪತ್ತೆ ಹಚ್ಚೋಕೆ ನೀವೆಲ್ಲ ನನ್ ಜೊತೆ ಇರ್‍ತೀರಲ್ವಾ ! :) :)
-ಮುಗಿಯಿತು.

Rating
No votes yet

Comments