ಲೋಕಸಭೆಗೆ ಆಯ್ಕೆ ಆದ ಕರ್ನಾಟಕದ ಸಂಸದರು ದೆಹಲಿಯಲ್ಲಿ ಕನ್ನಡ ನಾಡು ನುಡಿಯ ಗಟ್ಟಿದನಿಯಾಗಲಿ

Submitted by kannadavesathya on Thu, 06/04/2009 - 11:29

ಮೊನ್ನೆ ತಾನೇ ಪತ್ರಿಕೆಗಳಲ್ಲಿ ಕರ್ನಾಟಕದಿಂದ ಆಯ್ಕೆ ಆದ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವುದನ್ನ ನೋಡಿ ತುಂಬಾ ಖುಷಿ ಪಟ್ಟೆ. ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಜೆ ಎಚ್ ಪಟೇಲ್ ಅವರು ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಹೊಸ ಸಂಗತಿಗೆ ನಾಂದಿ ಹಾಡಿದ್ದರು. ಇದನ್ನ ಮುಂದುವರೆಸಿರುವ ನಮ್ಮ ರಾಜ್ಯ ಸಂಸದರು ಎಲ್ಲ ಕನ್ನಡಿಗರ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಇದೇ ಸಮಯದಲ್ಲಿ ರಾಜ್ಯದಿಂದ ಚುನಾಯಿತರಾಗಿರುವ ಎಲ್ಲ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತ್ತು. ಇದಕ್ಕೆ ದನಿಗೂಡಿಸಿದ್ದು ಕನ್ನಡ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷರಾದ ಶ್ರೀ ಮುಖ್ಯ ಮಂತ್ರಿ ಚಂದ್ರು ಅವರು. ಕೆಳಗೆ ಕೊಟ್ಟಿರುವ ಕೊಂಡಿಯಲ್ಲಿ ಸಂಸದರು ಮುಂದೆ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಮತ್ತು ನಾಡಿನ ಬಗ್ಗೆ ಅವರಿಗೆ ಇರಬೇಕಾದ ದೂರಗಾಮಿ ಚಿಂತನೆಯ ಬಗ್ಗೆ ಶ್ರೀ ನಾರಾಯಣ ಗೌಡರು ತಮ್ಮ ಲೇಖನದಲ್ಲಿ ಹೇಳಿದ್ದಾರೆ.

===========================================================================================
ಅಕ್ಕರೆಯ ಕನ್ನಡಿಗ,

ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಗಳು ಕೊನೆಯಾಗಿದ್ದು ಕೇಂದ್ರದಲ್ಲಿ
ಹೊಸ ಸರ್ಕಾರ ರಚನೆಯಾಗಿದೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ
ಸಂಸದರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತ, ಮುಂದಿನ ದಿನಗಳಲ್ಲಿ ಸಂಸತ್ತಿನ
ಎಲ್ಲಾ ಕಲಾಪಗಳಲ್ಲಿ ಎಲ್ಲಾ ಸಂಸದರೂ ಭಾಗವಹಿಸುವಂತಾಗಲಿ. ನಾಡುನುಡಿಯ
ಪ್ರಶ್ನೆ ಬಂದಾಗಲೆಲ್ಲಾ ಕರ್ನಾಟಕದ ಪರವಾದ ಗಟ್ಟಿದನಿ ಎತ್ತಲಿ. ನಮ್ಮ ನಾಡಿಗೆ
ನಿರಂತರವಾಗಿ ಕೇಂದ್ರ ಸರ್ಕಾರ ತೋರಿಸುತ್ತಾ ಬಂದಿರುವ ಮಲತಾಯಿ
ಧೋರಣೆಗಳಿಗೆ ಕೊನೆ ಹಾಡಲು ಕಾರಣರಾಗಲಿ ಎಂದು ಅಧ್ಯಕ್ಷರು ಕರೆ ನೀಡಿದ್ದಾರೆ.

ಅಧ್ಯಕ್ಷರ ಕರೆಯನ್ನು ಇಲ್ಲಿ ಓದಿ.

http://www.karnatakarakshanavedike.org/modes/view/17/adhyakshara_nudi.h…

Comments