ಬೆಂಗಳೂರು ಮಳೆ ಮತ್ತು ಆಟೋ ಸವಾರಿ

ಬೆಂಗಳೂರು ಮಳೆ ಮತ್ತು ಆಟೋ ಸವಾರಿ

ಬೆಂಗಳೂರಿಗೆ ಮುಂಗಾರು ಕಾಲಿಟ್ಟಿದೆ. ಮುಂಗಾರು ಕಾಲೂರುವುದೇ ತಡ ಅದೆಷ್ಟೋ ಸಾವು ನೋವುಗಳು ಸಂಭವಿಸಿಯೂ ಆಯ್ತು. ಮಳೆ ಬಂದಾಗ ಯಾತ್ರೆ ಎಷ್ಟು ಕಷ್ಟಕರ ಎಂಬುದನ್ನು ಅನುಭವಿಸುತ್ತಾ ಇದ್ದೇನೆ. ಸೋರುವ ಬಿಎಂಟಿಸಿ ಬಸ್ ಒಂದೆಡೆಯಾದರೆ ರಸ್ತೆಯಲ್ಲಿ ತುಂಬಿ ಹರಿಯುತ್ತಿರುವ ನೀರು ಬೇರೆ. ಏನು ಹೇಳಿದರೂ ಇದು ಮಹಾನಗರವಲ್ಲವೇ? ಆದುದರಿಂದ ರಸ್ತೆಯಲ್ಲೇ ನೀರು ಹರಿಯುವುದು ಸಾಮಾನ್ಯ ಅನ್ನಬಹುದು.

ಮಳೆ 'ಧೋ' ಎಂದು ಸುರಿದರೆ ಸಾಕು ನಮ್ಮ ಆಟೋ ಚಾಲಕರಿಗೆ ಸುಗ್ಗಿಕಾಲ. ನಾವೇನೋ ಮಳೆಯಿಂದ ರಕ್ಷಣೆ ಪಡೆಯಲು ಆಟೋವನ್ನು ಆಶ್ರಯಿಸುತ್ತೇವೆ, ಅವರು ಕೇಳಿದಷ್ಟು ಹಣ ನೀಡಿ ನಮ್ಮ ಯಾತ್ರೆ ಮುಂದುವರಿಸುತ್ತೇವೆ. ಆದರೆ ಅದು ಸುಖವಾಗಿರಬೇಕಲ್ವಾ? ಮಳೆ ಆರಂಭವಾಗಿದ್ದರೂ ಇಲ್ಲಿನ ಆಟೋಗಳಿಗೆ ಟಾರ್ಪೋಲಿನ್ ಇಲ್ಲ. ರಸ್ತೆಯೇ ನೀರಿನಲ್ಲಿ ಮುಳುಗಿರುವಾಗ ಆ ಕಡೆ ಈ ಕಡೆಯಿಂದ ಇನ್ನೊಂದು ವಾಹನ ಚಿಮುಕಿಸುವ ನೀರು ಪ್ರಯಾಣಿಕರನ್ನು ಒದ್ದೆ ಮಾಡಿದರೂ ಪರ್ವಾಗಿಲ್ಲ ಎನ್ನುವ ಆಟೋ ಚಾಲಕರಿವರು.

ಮಡ್್ಗಾರ್ಡ್ ಇಲ್ಲದ ಅದೆಷ್ಟೋ ಆಟೋಗಳನ್ನು ನಾನಿಲ್ಲಿ ಕಂಡಿದ್ದೇನೆ. ಮೀಟರ್ ಹಾಕಲು ಒಲ್ಲದ ಆಟೋ ಡ್ರೈವರ್್ಗಳು ಕೆಲವೊಮ್ಮೆ ಮೀಟರ್ ಹಾಕಿದರೂ ಮೀಟರಂತೂ ಆಟೋಗಿಂತ ಫಾಸ್ಟ್ ಆಗಿ ಓಡುತ್ತಿರುತ್ತದೆ. ಕೆಲವೊಮ್ಮೆ ಆಟೋ ಸಿಕ್ಕದೆ ಪರದಾಡಿ ಆಮೇಲೆ ಆಟೋ ಡ್ರೈವರ್್ಗಳು ಹೇಳಿದ ಹಣಕ್ಕೆ ಒಪ್ಪಿಕೊಂಡು ಮನೆ ಸೇರಿದ್ದೂ ಇದೆ.

ಮೊನ್ನೆ ಇದೇ ತರಹ ಜೋರಾಗಿ ಮಳೆಬಂದಿತ್ತು. ನಾನು ನನ್ನ ಫ್ರೆಂಡ್ ಆಟೋಗಾಗಿ ಕಾಯುತ್ತಿದ್ದೆವು. ಯಾವುದೇ ಆಟೋ ನಾವು ಹೇಳುವ ಬೆಲೆಗೆ ಬರಲೊಪ್ಪಲಿಲ್ಲ. ಅಂತೂ ಇಂತೂ ಮೀಟರ್ ಹಾಕ್ತೇನೆ ಎಂದು ಆಟೋದವ ಒಪ್ಪಿದಾಗ ಅದು ಹತ್ತಿ ಕುಳಿತೆವು. ನೋಡುತ್ತಿದ್ದಂತೆಯೇ ಮೀಟರ್ ಫಾಸ್ಟ್ ಆಗಿ ಓಡುತ್ತಿತ್ತು. ನಮ್ಮ ಮನೆ ತಲುಪಿದ ಕೂಡಲೇ ಇದ್ಯಾಕೆ ಮೀಟರ್ ಈ ತರ ಫಾಸ್ಟ್ ಆಗಿ ಓಡ್ತಾ ಇದೆ. ಇದರಲ್ಲಿಯೂ ನೀವು ಮೋಸ ಮಾಡ್ತಾ ಇದ್ದೀರಾ ಎಂದು ಕೇಳಿಯೇ ಬಿಟ್ಟೆ. ಅವ ಒಮ್ಮೆ ನನ್ನನ್ನು ಮೇಲಿಂದ ಕೆಳಕ್ಕೆ ನೋಡಿ ನಾವು 'ಕರ್ನಾಟಕದ'ವರು ಈ ರೀತಿ ಮೋಸ ಮಾಡುವುದಿಲ್ಲ. ನಿಮಗೇನು ಗೊತ್ತು ಮೀಟರ್ ಕಥೆ ಎಂದು ಹೇಳಿದ. (ನಾವು ಮಲಯಾಳಂಲ್ಲಿ ಮಾತನಾಡುತ್ತಿರುವುದನ್ನು ಕೇಳಿ ಅವನಿಗೆ ನಾವು ಅನ್ಯರಾಜ್ಯದವರು ಅಂತಾ ಗೊತ್ತಾಗಿತ್ತು. ಅದಕ್ಕಾಗಿಯೇ ಈ ಡೈಲಾಗ್ ಹೊಡೆದಿದ್ದ.) ನಾನು ಕೇಳಿದ್ದು ಅಧಿಕಪ್ರಸಂಗವಾಯಿತೇನೋ ಅಂತ ನನಗೆ ಅನಿಸುತ್ತಿತ್ತು. ಆಮೇಲೆ ಅವನ ಜೊತೆ ಚರ್ಚೆಗಿಳಿಯಲು ನನಗಿಷ್ಟವಿರಲಿಲ್ಲ.

ಈ ಆಟೋ ಪ್ರಯಾಣದ ಕಷ್ಟ ನನ್ನಂತೆ ಹಲವರಿಗೂ ಆಗಿರಬಹುದು. ಕೆಲವೊಮ್ಮೆ "ಏ ಆಟೋ ....ಇಂತಾ ಸ್ಥಳಕ್ಕೆ ಬರ್ತೀರೇನೋ" ಎಂದು ಕೇಳಿದರೆ ಸಾಕು. ಆಟೋದವನ ರೇಟ್ ಕೇಳಿದರೆ ನಾವೇನೋ ಅವನಿಂದ ಆಟೋ ಖರೀದಿಗೆ ನಾವು ಬಂದಿದ್ದೇವೆಯೇನೋ ಎಂದು ಅನಿಸಿಬಿಡುತ್ತದೆ. ಅಷ್ಟೊಂದು ದುಬಾರಿ ಹಣ ಕೇಳುತ್ತಿದ್ದರೂ, ಟಾರ್ಪೋಲಿನ್ ಇಲ್ಲದೆ ಸೋರುವ ಈ ಆಟೋದಲ್ಲಿ ಒದ್ದೆಯಾಗಿ ಮನೆ ಸೇರಬೇಕಾದ ಗತಿ ನಮ್ಮದು. ನಮ್ಮೂರಲ್ಲಾದರೆ ಆಟೋದ condition ಚೆಕ್ ಮಾಡಿ Ok. checked ಅಂತಾ ಚೀಟಿ ಅಂಟಿಸ್ತಾರೆ. ಆದ್ರೆ ಕರ್ನಾಟಕದಲ್ಲಿ ಅಂತಾ ವ್ಯವಸ್ಥೆ ಇಲ್ವಾ? ನಮ್ಮ ಮನೆಯಲ್ಲಿರುವ ಆಟೋವನ್ನು ಫುಲ್ ಕಂಡಿಷನ್ ಮಾಡಿಸಿ Ok checkedಅಂತಾ ಚೀಟಿ ಅಂಟಿಸಿ ಅಣ್ಣ ಬಾಡಿಗೆಗಿರಿಸುವುದನ್ನು ನಾನು ನೋಡಿದ್ದೇನೆ. ಮಳೆ ಬಂದಾಗ ಟಾರ್ಪೋಲಿನ್ ಒಂದಿಷ್ಟು ಹರಿದಿದ್ದರೂ ಫೈನ್ ಹಾಕ್ತಾರೆ ಅಂತಾ ಅಣ್ಣ ಹೇಳಿದ್ದು ಕೇಳಿದ್ದೇನೆ. ಇಂತಿರುವಾಗ ಬೆಂಗಳೂರಲ್ಲಿ ಓಡಾಡುವ ಆಟೋಗಳಿಗೆ ಯಾವುದೇ ರೀತಿಯ ನಿಯಮಗಳು ಅನ್ವಯಿಸುವುದಿಲ್ಲವೇ?

Rating
No votes yet

Comments