ಜೆರ್ಮನ್ ಕವಿಯ ಮುನ್ನುಡಿ

ಜೆರ್ಮನ್ ಕವಿಯ ಮುನ್ನುಡಿ

ಬರಹ

ಆತನೊಬ್ಬ ಪ್ರಸಿದ್ಧ ಜೆರ್ಮನ್ ಸಾಹಿತಿ.
ಆರಂಭದವಲಭ ಸಿಗದೆ ಹೋಗಿದ್ದ ಜೀವನ ಸಾರಥಿ.
ಆತನ ಅಪ್ರತಮ ಹಾಸ್ಯದುಗಮ ಸಂಪತ್ತು,
ಮಾತುಮಾತಿಗೆ ಮಾತಿನ ಸರಕಸ್ಸು ಆತನ ಪುರಾವತ್ತು!

"ಹೈನ್‍ಸ್ ಎರ್ಹಾರ್ಡ್" ನಾಮ ಧರಿಸಿ
ಸಕಲ ಲಲಿತ ಕಲಾರಂಗಗಳಲಿ ಕುಶಲತೆ ಮೆರೆಸಿ
ಪಾಲ್ಗೊಂಡ ಕಲಾಮಂಟಪದೆಲ್ಲೆಡೆ ಕೊಂಡಾಟವೆದ್ದು
ಪ್ರೇಕ್ಷಕರೆಲ್ಲ ನಕ್ಕು ನಲಿದಾಡುತಿದ್ದರು ಬಿದ್ದುಬಿದ್ದು.
ಅವನ ಸಾಹಿತ್ಯ ವಿವಿಧ ರೂಪಧಾರಿ ತರಾವರಿ
ಕವಿತೆ ಕವನ ಚುಟುಕ ಹಾಸ್ಯಾಸ್ಪದ ಹಾರತುರಿ
ನಿಂತಲ್ಲೆ ನಿರ್ಮಿಸಿ ಚುರುಕುಮಾತುಗಳ ನೆಹ್ದು ಪ್ರಾಸದ್ಹುರಿ
ಎಂತೆಲ್ಲ ಕಣ್ಣಿಗೆ ಕಾಣದ್ದು ಕಣ್ಮುಂದೆ ತಂದು ನಿಜ ತೋರಿ
ನಾಲ್ಕೈದು ಸಾಲಿನಲಿ ಹಾಡುಲು ಪ್ರಾಸದ ಚಿರಕುಳಿ
ಕೇಳಿದಾಗ ತಟಕ್ಕನೆ ಉದ್ಭವಿಸಿ ನಗೆಯ ಓಕುಳಿ.

ಪ್ರಕೃತಿಯಲಿ ಪ್ರಾಣಿಲೋಕದಲಿ ಗುಪ್ತಮುಸುಕಿನಲಿ ಬಚ್ಚಿದ ರಹಸ್ಯ
ಗಮನಾರ್ಹ ತೆಗೆದು ಆಶುಭಾಷಣ ಕಂಠಪಾಟದಲಿ ವಾಚಿಸಿ ಹಾಸ್ಯ
ಚಾಲಕ್ಕಿನಲಿ ಮಾತುಗಳ ಬಿಡಿಸಿ ಕೂಡಿಸಿ ಆಡುತ ಮಾತಾಡಿ
ಮಾತಾಡುವ ರೀತಿಯಲಿ ವಿವಿಧಾರ್ಥ ತೊಡಿಸಿ ಮಾತಿನ ಮೋಡಿ
ಕೇಳಿದಾಗ ನಗೆಕಟ್ಟೆ ಹೊಡೆದು ಚಿಮ್ಮುವುದು ನಗೆಬುಗ್ಗೆ
ಕೇಳಿದರೆಷ್ಟು ಸಾಲದು ಹಾಸ್ಯದಸಿವು ನಿಲ್ಲಿಸುವ ಬಗೆ
ಆಲ್ಲೆಲ್ಲರಿಗೂ ಅತ್ಯಾಸೆ ನಾಚಿಕೆ ಇಲ್ಲದೆ ಇನ್ನು ಕೇಳಲು
ಗೆಲ್ಲಲು ಹಾಸ್ಯ ಸಂತಸ ಮನದಾರೋಗ್ಯ ಹೃದಯದ್ಹೊನಲು.
ಅಂತಾಗಿತ್ತವನ ವಿಶೇಷ ಚಾತುರ್ಯ ಕಲೆಯ ಹೊನ್ನ್ಹಾಲು.

ಕಾಣದ ಗುಟ್ಟು ಕಾಣಿಸಿಕೊಟ್ಟು
ಹಾಸ್ಯವೀಕ್ಷಣ ಗುಟ್ಟು ಬಿಡಿಸಿಬಿಟ್ಟು
ಪೋಣಿಸಿ ಮಾತುಗಳ ಹಾರಗಳಲಿ ಚಂದಸ್ಸು ಮತ್ತಿಷ್ಟು
ಇನಿಸಲು ಸೊಗಸು ಸೌಂದರ್ಯದ ರಸರುಚಿಗುಟ್ಟು
ನುಡಿಗಳ ನಡುವೆ ಅವಿತಿರುವ ಗುಪ್ತ ನಿಘಂಟು
ಬಿಡಿಸಿ ಶಬ್ಧಸೈಲಿಯಲಿ ವಿವಿಧಾರ್ಥ ಹೊರತೆಟ್ಟು
ನಲಿದಾಡಿಸಿದ್ದನು ನಾಡಿನೆಲ್ಲಾ ಜನಾಂಗ ಹಾಸ್ಯದಲಿ ಒಗ್ಗಟ್ಟು!

ನಾಟಕ ಚಲಚಿತ್ರ ಚಿಕ್ಕಪುಟ್ಟ ಮಂಟಪ ಪ್ರದರ್ಶನಗಳಲಿ
ಚುಟುಕ ನುಡಿಪಟಾಕಿಗಳು ಸ್ಪೋಟಿಸಿ ಘಟಿಸಿ ಪ್ರಕಾಶದಲಿ
ಎಂತೆಲ್ಲ ಜನರ ಮನಹೊಕ್ಕಿ ಹೃದಯ ದೀವಿಗೆ ಹತ್ತಿಸಿ
ಚಲಿಸಿ ನರನಾಡಿಗಳ ಸರಸರ ಸಾವಿರ ಸರಾವಳಿ ಸುತ್ತಿಸಿ
ಸೆರೆಹಿಡಿದು ಎಲ್ಲಾ ಹೃದ್ಯಗಳಲಿ ಚೆಲ್ಲಿ ಸವಿಮದ್ದು ಪ್ರಸರಿಸಿ
ಹಾಸ್ಯಋಷಿಯಾಗಿದ್ದ ನಾಡಿನಲಿ ಅಕ್ಕಪಕ್ಕ ನಾಡುನಾಡುಗಳಲಿ ಆವರಿಸಿ
ವಾಕ್ಯವೈಶಾಲಿಯಾಗಿದ್ದ ಮಾಡುತ ಮಾತಿನಗೇಲಿ ಸಭಾಂಗಣದಲಿ
ಮನಸೋತು ಗೆದ್ದವರು ಪ್ರೇಕ್ಷಕರು ಪ್ರಸನ್ನವಿನೋದ ಸೇವನೆಯಲಿ.

ಪ್ರಾಣಿಯೊಂದಿಲ್ಲ ನಗುನಗುತ ಮುಕತೋರಲು
ಕಿರುಚು ಬೊಗಳು ಗುಟುರು ಮಿಯ್ಯಾವ್ ಮಾಡುವಾಗ ಹಗಲೂ.
ನಕ್ಕುನಗುವುದು ಮನುಜರಿಗೆ ಮಾತ್ರ ಸಂಧಿಸಿದ ಸಂಪತ್ತು.
ಆದ್ದರಿಂದ(ವರು) ಸೇರರು ಈ ಲೊಕದ ಸಂಸತ್ತು!
- ಹೈ. ಎ.

*

ಒಂದಾನೊಂದು ಬಯಲಲಿ ಒಂದು ಮೊಲ ಮೆಯ್ಯುತಿತ್ತು
ಅದಕ್ಕೊಂದು ಕಪ್ಪುಮಚ್ಚೆ ಮೂಗಿನಮೇಲಂಟಿತ್ತು
ಇನ್ನೊಂದು ಮೊಲ ಹೇಳಿತು: "ಪ್ರಿಯ ಸ್ನೇಹಿತ ಸುಮಿತ್ರ
ನಿನ್ನ ಮೂಗಿನಮೇಲೆ ಕರಿಯ ಮಚ್ಚೆ ಹಾಕಿದ್ದು ವಿಚಿತ್ರ
ಶಿಕಾರಿಗಾರನಿಗೆ ಗುರಿಯಾಗುವುದು ತುಪಾಕಿ ಹಾರಿಸೆ ತಪ್ಪದೆ
ಆಗ ನಿನ್ನ ಗುಂಡಿಗೆ ಸೇರಿ ಗುಂಡು ಬೀಳುವೆ ನೆಲಕ್ಕೆ ದಪ್ಪೆಂದು
ನಿನ್ನ ಮಚ್ಚೆ ಬಿಳುಪು ಮಾಡಿದರೆ ನಿನಗಾಗುವುದು ಹರ್ಷ
ಆಗ ಬಾಳುವೆ ಜೀವನ ಸಂಪೂರ್ಣ - ೧೫ ವರ್ಷ!
*

ಹಾಸ್ಯ ಸ್ಪುಟಕ
ಆಕಸ್ಮಿಕ ಆಗಸದಿಂದ
"ಮತ್ತೊಂದು ಪುಸ್ತಕ"

ಶಿರನಾಮವದು ಹೈ. ಎರ್ಹಾರ್ಡ್ ಅವರ ನವ ನವೀನ ಪುಸ್ತಕ ಪ್ರಕಟನೆಯ.
ಅದಕೆ ಮುಡಿಸಿದ್ದ ಕಿಲಾಡಿ ಮುನ್ನುಡಿ
ಪ್ರಯತ್ನವಿದು ತೋರಿಸಲದರ ಕನ್ನಡಿ
ಕನ್ನಡಿಗರಿಗಾಗಿ ಕನ್ನಡ ಭಾಷೆ ತೊಡಿಸಿದ ದುಡಿ.

ಮುನ್ನುಡಿ
(ಹೈ. ಎರ್ಹಾರ್ಡ್)

ತೃಣಸೂಚಿ ಅಥವ ಉಪಯೋಗ ಸೂತ್ರಗಳು
ಪೂರ್ಣಗೋಚಿ ಪುಸ್ತಕ ಬಳಸಲು ಮಾತ್ರೆಗಳು
ಸಾಧಾರಣ ಪದ್ಧತಿ ಮೀರಿ ಪ್ರಯೋಗಿಸಲು ಸೂಚನೆಗಳು
(ಬರಿಯ ವಾಚನೆಗಲ್ಲ, ಸಾಧನವಾಗಿ ಉಪಯೋಗಿಸಲು ವಿವೇಚನೆಗಳು)

ಅದಾವುದೋ ಅಗೋಚರ ಕಾರ‍ಣಗಳಿಂದಾಗಿರಲಿ - ಈ ಪುಸ್ತಕ ನಿಮ್ಮ ಕೈಸೇರಿದ್ದಾಗ -
ಅದು ಬಹುಶಹ ದಾರಿತೋರದಂತೆ ಅನಿರ್ದಾರತೆಯಲ್ಲಿ ಚಿಂತೆ ಪಡುತ್ತಿದ್ದರೆ:
" ಈ ಪುಸ್ತಕ ಇಟ್ಟುಕೊಂಡು ಏನು ಮಾಡಲಿ"? ಎನುತ;
ಅದಕ್ಕೆ ಮಾರ್ಗದರ್ಶಿಯಾಗಿ ಈ ಕೆಳ ಸಾಲುಇಗಳಲ್ಲಿ ಕೆಲವು ನಿರ್ದೇಶಕ ಸಲಹೆಗಳನ್ನು ನಿಮ್ಮಗಮಕ್ಕೆ ತರಲೆ?

ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಾಳಿರುವಂತ ಹಿರಿಯರು ಈ ಪುಸ್ತಕ ಮಕ್ಕಳಕೈಗೆ ಕೊಟ್ಟುಬಿಡಿ.
ಅವರು (ಮಕ್ಕಳು) ಪುಸ್ತಕದೊಳು ಬಿಳಿಯ ಸ್ಥಳಗಳನ್ನೆಲ್ಲಾ ಮನುಷ್ಯನ ಚಿತ್ರಗಳನ್ನು ಗೀಚಾಡುವ ಚತುರತೆಯನ್ನು ಪ್ರಯೋಗಿಸಲು ಉಪಯೋಗಿಸಬಹುದು.
ಆಥವ ಬರೆದ ಚಿತ್ರಗಳನ್ನು ಕತ್ತರಿಸಿ ಗಡ್ಡಮೀಸೆಗಳನ್ನು ಅಂಟಿಸಬಹುದು.
ಬಲುಪುಟ್ಟ ಬಾಲಕಬಾಲಕಿಯರು - ರುಚಿಕರವಾದ ಸಿಹಿತಿಂಡಿ ತಿನಸು ಎತ್ತರಸ್ಥಾನದಲ್ಲಿ ಎತ್ತಿಟ್ಟಿರುವಾಗ, ಮೆಟ್ಟಿ ಮುಟ್ಟ್ಹಿಡಿದು ಕೆಳಕ್ಕಿಳಿಸಲು ಒಂದಿಂಚು ಸಾಕಾಗದೆ ಇರುವಾಗ -
ಪುಸ್ತಕವನ್ನು ನೆಲದಮೇಲಿಟ್ಟು ಅದರಮೇಲ್ನಿಂತು ಮೇಲಿರುವ ಡಬ್ಬಿ ಅಥವ ಪಾತ್ರೆಯನ್ನು ಕೆಳಕ್ಕಿಳೀಸಲು ಉಪಯೋಗಿಸಬಹುದು
ಮನೆಯಲ್ಲಿ ಬೆಂಚು ಮೇಜು ಕುರ್ಚಿಗಳ ಕಾಲೊಂದು ತುಂಡಾಗಿ ಅಲ್ಲಾಡಿ ಮೇಲಿಟ್ಟಿರುವ ಲೋಟ ಬಟ್ಟಲು ಅಥವ ಇನ್ನಾವ ವಸ್ತುಗಳು ಉರುಳುವ ದುರ್ಘಟನೆಗಳನ್ನು ತಪ್ಪಿಸಲು ಯಾ ಪರಿಹರಿಸಲು ಪೀಠೋಪಕರಣಗಳ ತುಂಡು ಕಾಲಡಿ ಪುಸ್ತಕವಿಟ್ಟು ಸಮಮಟ್ಟ ತರಿಸಿ ಅಲ್ಲಾಡುವುದನ್ನು ನಿವಾರ‍ಿಸಬಹುದು.
ಅದಲ್ಲದೆ ಆಗಾಗ ಹಾವಳಿ ಮಾಡುವ ಕ್ರಿಮಿಕೀಟ ನೊಣ ಸೊಳ್ಳೆಗಳನ್ನು ಬಡಿದು ಮಡಿಸಲು ಉಪಯುಕ್ತವಾಗುವುದು.
ಅವರಿವರು ಹಿರಿಯರಿಗಂತೂ ಅನಿವಾರ್ಯವಾಗಿ ಉಪಕಾರಕ ಆಯುಧವಾಗಬಹುದು - ಬಾಣದಂತೆ ಗುರಿಯಿಟ್ಟು ಬೀಸಿ ಬಿಸಾಡಿ ಗೋಡೆಯಮೇಲೆ ಕುಂತಿರುವ ಕ್ರಿಮಿಕೀಟಗಳ ತುಂಟಾಟ ನಿವಾರಣೆಗೆ ಆಯುಧವಾಗಿ ಬಳಸಲು ಅನುಕೂಲವಾಗುವುದು.
ಈ ಕೆಲವೇ ಉದಾಹರಣೆಗಳಿಂದ ಕಾಣುವುದು: ಎಷ್ಟು ಉಪಯುಕ್ತವಾಗಿ - ಕೇವಲ ಕೆಲವು ರೂಪಯಿಗಳಿಗಳ (ಪುಸ್ತಕದ ಅಚ್ಚುಮಾಡಿಸಲು ಹಣಖರ್ಚು ತೆಗೆದುಕೊಳ್ಳಲುವ ಬೆಲೆ) ಹಣವಿನಿಯೋಗ ವಿವಿಧರೀತಿಯಲ್ಲಿ ಪ್ರಯೊಜನಕಾರಕವಾಗುವುದು ಖಂಡಿತ. ನಾನಾರೀತಿಯ ಪ್ರಯೋಜನಗಳಿಗೆ ಪ್ರಯೋಗಗಳಿಗೆ ಸಹಾಯಕ ಸಾಧನವಾಗುವುದು - ಈ ಪುಸ್ತಕ.
ಮನೆಯ ಸ್ತ್ರೀಯರಿಗಂತೂ ಅದರ ಉಪಯೋಗ ಮತ್ತು ಪ್ರಯೋಜನವಂತೂ ಅಪಾರವಾದದ್ದು - ಮನೆಯಜಮಾನನಿಗೆ ಮನೆಯ ಉಪಕರಣಗಳ ಕುಂದು ಕೊರತೆಗಳನ್ನು ನೇರ್ಪಡಿಸಿ ದುರಸ್ತಿ ಪಡಿಸಲು ನಿರುತ್ಸಾಹ ನಿಸ್ಸಹಾಕ ಅಥವ ಆಲಸ್ಸು ಆಗಿರುವಾಗ ಮನೆಹೆಂಗಸರು ಸ್ವತಹ ಪರಿಹಾರ ಪಡೆಯಲು ಅತ್ಯುತ್ತಮವಾಗಿ ಉಪಯೋಗಕ್ಕೆ ಬರುವುದು ಈ ಪುಸ್ತಕ.
- ವಿಜಯಶೀಲ