ನಗುತಿರುವ ಚಂದಿರ

Submitted by bhavanilokesh mandya on Mon, 06/08/2009 - 12:37

ಈಗೀಗಂತೂ ವಾತಾವರಣ ತುಂಬಾ ಚೆನ್ನಾಗಿದೆ. ಆಹ್ಲಾದಕರವಾಗಿದೆ. ಒಂದು ಕಡೆ ಮೋಡ , ಮಳೆ, ಮುಂಗಾರಿನ ಗದ್ದಲ, ರಾತ್ರಿಯಾಯ್ತೆಂದರೆ ಅದೇ ಮೋಡಗಳ ನಡುವೆ ಆಗೊಮ್ಮೆ ಈಗೊಮ್ಮೆ ತನ್ನ ಇರವನ್ನು ತೋರುವ ಚಂದಾದ ಚಂದ್ರಾಮ.... ಕವಿತೆ ಹುಟ್ಟದಿದ್ದೀತೆ ? ಹಾಗೇ ಸುಮ್ಮನೆ ಬರೆದ ಸಾಲುಗಳಿವು ನಿಮಗಾಗಿ ...

ನಗುತಿರುವ ಚಂದಿರನು
ಹಾಲ್ಗಡಲನುಕ್ಕಿಸಿ
ಹರಿಸಿ ಬೆಳಕಿನ ಹೊನಲ
ಇಡಿ ಬಾನ ತುಂಬೆಲ್ಲ

ನಗುತಿರುವ ಚಂದಿರನು
ತನ್ನೊಡಲ ಒಳಗೆಮ್ಮ ಮೀಯಿಸಿ
ಒಲವ ಧಾರೆಯ ಮನಕೆ ಹಾಯಿಸಿ

ನಗುತಿರುವ ಚಂದಿರ
ಶಾಂತಿದೂತನ ಹಾಗೆ ಕಾಣಿಸಿ
ಬಸವ ಬುದ್ಧರ ಮನದೆ ನೆನಪಿಸಿ

ನಗುತಿರುವ ಚಂದಿರ
ಅಳುವ ಕೂಸಿಗು ಕಣ್ಣ ಮಿಟುಕಿಸಿ
ಪೋರ ಚಿಣ್ಣರಿಗೆಲ್ಲ ಎಟುಕಿಸಿ

ನಗುತಿರುವ ಚಂದಿರ
ಒಲವ ಜೋಡಿಗು ಮನವ ಅರಳಿಸಿ
ಹಳೆಯ ಕನಸುಗಳನ್ನೆ ಮರಳಿಸಿ

ನಗುತಿರುವ ಚಂದಿರನು ಹಾಲ್ಗಡಲನುಕ್ಕಿಸಿ
ಹರಿಸಿ ಬೆಳಕಿನ ಹೊನಲ
ಇಡಿ ಬಾನ ತುಂಬೆಲ್ಲ :)

ಬ್ಲಾಗ್ ವರ್ಗಗಳು

Comments