ವಿಧವಾ ವಿವಾಹ

ವಿಧವಾ ವಿವಾಹ

Comments

ಬರಹ

ಹಿಂದೆ ಬಾಲ್ಯ ವಿವಾಹ ಪದ್ಧತಿ ಇದ್ದ ಕಾಲದಲ್ಲಿ ಇನ್ನೂ ದೈಹಿಕ ಹಾಗು ಮಾನಸಿಕವಾಗಿ ಬೆಳೆದಿರದ ಪುಟ್ಟ ಹುಡುಗಿಯರಿಗೆ ತನ್ನ ಮದುವೆ ಯಾಕಾಯಿತು? ಹೇಗಾಯಿತು? ಒಂದೂ ತಿಳಿಯುತ್ತಿರಲಿಲ್ಲ. ಅಂತಹ ಪುಟ್ಟ ಬಾಲೆಯರಿಗೆ ತನ್ನ ಅಣ್ಣನೋ ಅಥವಾ ಅಪ್ಪನ ವಯಸ್ಸಿನವನನ್ನೋ ಮದುವೆಯಾದಾಗ ಯಾವ ಭಾವನೆಗಳೂ ಇರ್ತಾ ಇರಲಿಲ್ಲ. ಮುಖ್ಯವಾಗಿ ಮದುವೆ ಎಂದರೇನು? ಅಂತನೇ ಗೊತ್ತಿರದ ಮುಗ್ಧ ಮನಸಿನ ಮಕ್ಕಳವರು. ಅಂತಹವರ ಬಾಳಿನಲ್ಲಿ ಬರ ಸಿಡಿಲಿನಂತೆ ಬರುತ್ತಿದ್ದ ಕೆಟ್ಟ ಸುದ್ದಿ ಎಂದರೆ ಅವಳ ಗಂಡನೆನಿಸಿಕೊಂಡವನ ಮರಣ......ಕಾರಣಗಳೇನೇ ಇರಬಹುದು, ಆದ್ರೆ ಆಕೆಗೆ ತದನಂತರ ಸಿಗುತ್ತಿದ್ದ ಪಟ್ಟ ವಿಧವೆ.ಅಂತಹ ಮುಗ್ಧ,ಪುಟ್ಟ ಬಾಲಕಿಯ ಬಾಳು ಹಾಳಾಗಬಾರದೆಂದು ಸಮಾಜ ಸುಧಾರಕರು ವಿಧವಾ ವಿವಾಹವೆಂಬ ಸುಧಾರಣೆಯನ್ನ ಜಾರಿಗೆ ತಂದರು.
ಇದೆಲ್ಲಾ ಫ್ಲಾಶ್ ಬ್ಯಾಕ್.......
ಇತ್ತೀಚಿನ ದಿನಗಳಲ್ಲಿ ಒಂದು ಹೆಣ್ಣು ಬೆಳೆದು ದೊಡ್ಡವಳಾಗಿ,ವಿದ್ಯಾವಂತಳಾಗಿ,ಬುದ್ಧಿವಂತಳಾಗಿ,ಮದುವೆಯಾಗಿ, ಮಕ್ಕಳಾದ ಮೇಲೆ ಕೇವಲ ಸಮಾಜವನ್ನ ಎದುರಿಸೋ ಸಲುವಾಗಿ ಮದುವೆ ಮಾಡಿಕೊಳ್ಳೋದು ಎಷ್ಟರಮಟ್ಟಿಗೆ ಸರಿ?

ಏಕೆಂದರೆ ಇತ್ತೀಚೆಗಷ್ಟೆ ನಂಗೆ ಗೊತ್ತಿರುವವರೊಬ್ಬರ ಮದುವೆ ಆಯ್ತು...ಆಕೆಯನ್ನ ಮದುವೆಯಾದವನೇನು ನವ ವರನಲ್ಲ.... ಅವನಿಗೂ ಮದುವೆಯಾಗಿ ಒಬ್ಬ ಮಗನಿದ್ದಾನೆ....(.ಆತನ ಮೊದಲ ಹೆಂಡತಿಯೊಂದಿಗೆ ಈತನ ವಿವಾಹ ವಿಚ್ಛೇದನ ಆಗಿದೆ.) ಈಕೆಗೂ ಒಬ್ಬಳು ಮಗಳು... ಮದುವೆ ಸರಳವಾಗಿ ದೇವಸ್ಥಾನವೊಂದರಲ್ಲಿ ಯಾವ ತೊಂದರೆ ತಾಪತ್ರಯವೂ ಇಲ್ಲದಂತೆ ನಡೆಯಿತು....
ಮದುವೆಯ ನಂತರದ ದಿನಳಲ್ಲಿ ಗೊಂದಲ.... ಕಾರಣ ಆಕೆಯ ಮಗಳು... ಅವಳೇನು ಪುಟ್ಟ ಹುಡುಗಿಯಲ್ಲ.... 8ನೇ ತರಗತಿಗೆ ಹೋಗುವವಳು...ಅಮ್ಮ ಮಾಡಿದ್ದು ಸರಿಯೆ ತಪ್ಪೆ ಅಂತ ತೀರ್ಮಾನ ಮಾಡುವಂಥ ವಯಸ್ಸಲ್ಲ...ಏನೋ ಏಕಾಂಗಿತನ... ಅಮ್ಮನಿಗೆ ಇಷ್ಟು ದಿನ ನಾನಿದ್ದೆ... ಈಗ ನನ್ನ ಜೊತೆಗೆ ಅಮ್ಮನಿಲ್ಲವೆಂಬ ಅನಾಥ ಪ್ರಜ್ಞೆ....ಚುರುಕಾಗಿದ್ದ ಹುಡುಗಿ ಮಂಕಾಗಿ ಹೋಗಿದ್ದಳು. ಆ ಹುಡುಗಿಯನ್ನ ನೋಡಿ, ಮಾತಾಡಿಸಿದ ಮೇಲೆ ನನಗನ್ನಿಸಿದ್ದು-"ಇಂತಹ ವಿಧವಾ ವಿವಾಹ ಬೇಕೆ?"
ಸ್ನೇಹಿತರೆ, ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗಾಗಿ ನಾನು ಕಾಯ್ತಾ ಇದ್ದೀನಿ....
ಇಂತಿ ನಿಮ್ಮ ತೇಜಸ್ವಿನಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet