ಚೂಟಿ-ಚುಟುಕು

ಚೂಟಿ-ಚುಟುಕು

ಬರಹ

ಹುಬ್ಳಿ-ಧಾರವಾಡದ ಕಡೆಯ ಕನ್ನಡ ಭಾಷೆಯ ಸವಿಯನ್ನ ಉಂಡವರಿಗೇ ಗೊತ್ತು.
ಆ ಭಾಷೆಯಲ್ಲಿನ ಸೊಗಡಿನ ಚೆಂದವಂತೂ ಕೇಳಿಯೇ ಸವಿಯಬೇಕು.
ನನ್ನ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಾ ಕಂಡ ಉತ್ತರ ಕರ್ನಾಟಕದ ಒಡನಾಡಿಗಳು ಬಹಳಷ್ಟು ಮಂದಿ.
ನನಗಾಗ ಹೊಸದೇ ಎನ್ನುವಂತಿದ್ದ ಅವರಾಡುವ ಭಾಷೆಯನ್ನ ಅರಗಿಸಿಕೊಳ್ಳೋದು ತುಸು ಕಷ್ಟವೇ ಎನಿಸುತ್ತಿತ್ತು.
ಅವರು ನಮ್ಮ ಭಾಷೆಯ, ನಾವು ಅವರ ಭಾಷೆಯ ಧಾಟಿಯನ್ನು ಮೂದಲಿಸುತ್ತಲೇ ಸಿಹಿಯಾಗಿ ಜಗಳವಾಡಿದ್ದನ್ನಂತೂ "ಮರೇತೇನಂದ್ರೆ ಮರೆಯಲಿ ಹ್ಯಾಂಗಾ"...?
ಹೀಗೆಯೇ ಒಂದು ದಿನ ನಡೆದ ಸ್ವಾರಸ್ಯಕರ ಮಾತುಕತೆಯನ್ನ ಚುಟುಕು ಕಾವ್ಯವನ್ನಾಗಿಸಲು ಇದೊಂದು ಸಣ್ಣ ಪ್ರಯತ್ನವಷ್ಟೇ....

*****

ಹುಬ್ಬಳ್ಳಿಯ ನನ್ನ ಸ್ನೇಹಿತನೊಮ್ಮೆ
ಮರವನ್ನಿಳಿಯುತಲಿದ್ದವನನ್ನು ನೋಡಿದ
ಅಲ್ನೋಡೋ ಯಪ್ಪಾ..ಅವ ಮರಾನ ಇಳ್ಯಾಕ್ ಹತ್ತಾನ..! ಅಂದ
ಹೌದೋ ಅವ ಮರಾನ ಇಳ್ಯೋಕೇ.. ಹತ್ತಿರೋದು! ಅಂದೆ
ತುಸು ಛೇಡಿಸಲೆಂದೇ..

*****