ಓಹ್ ಇದು ವೀಕೆಂಡ್!!

Submitted by karthi on Tue, 06/02/2009 - 17:15

ಮೊನ್ನೆ, ಭಾನುವಾರ ನನ್ನ ಸ್ಕೂಲಿನ ಗೆಳೆಯರನ್ನು ಭೇಟಿ ಮಾಡೋಕ್ಕೆ ಅಂತ ಫೋರಮ್ ಮಾಲ್ ಗೆ ಹೋಗಿದ್ದೆ. ಅಲ್ಲಿಯ ಜನ ಸಾಗರವನ್ನು ಕಂಡು ಬೆರಗಾಗಿ ಹೋದೆ. ನಾನು ಚಿಕ್ಕವನಾಗಿದ್ದಾಗ ಭಾನುವಾರದಂದು ಅಮ್ಮ ಏನಾದ್ರೂ ಸಿಹಿ ಮಾಡೋರು. ಅದೇ ನಮಗೆ ಸ್ಪೆಷಲ್ ಆಗೋದು, ಆದ್ರೆ ಇವತ್ತು ನನಗನ್ನಿಸುತ್ತೆ ಬಹುತೇಕ ಬೆಂಗಳೂರಿಗರು ಶನಿವಾರ ಭಾನುವಾರಗಳನ್ನು ಕೇವಲ ಈ ರೀತಿಯ ಮಾಲ್ ಗಳಲ್ಲಿ ಕಳೆಯುತ್ತಾ, ದರ್ಶಿನಿಗಳಲ್ಲಿ ಊಟ ಮಾಡಿ ರಾತ್ರಿ ನಿದ್ದೆಯ ಸಮಯಕ್ಕೆ ಸರಿಯಾಗಿ ಮನೆಗೆ ತೆರಳುತ್ತಾರೆ. ಇದರಿಂದಲೇ, ಮನೆಯ "ಆ" ವಾತಾವರಣ ಇಂದು ಮಾಯವಾಗುತ್ತಿದೆ. ಮನೆಯ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡಿ, ಮನೆಯ ಸಮಸ್ಯೆಗಳಿಗೆ ಸಮಾಧಾನ ಹುಡುಕುವ ಆ ಸೊಗಸಾದ ವಾತಾವರಣ ಇಂದು ಮಾಯವಾಗುತ್ತಿದೆ. ಜಾಗತೀಕರಣ ಕೇವಲ ಭಾರತೀಯ ಮಾರುಕಟ್ಟೆಯಲ್ಲದೆ, ಭಾರತೀಯರ ಮನೆ ಮನಗಳ ಮೇಲೆಯೂ ಬಹಳವಾಗಿ ಪರಿಣಾಮ ಬೀರುತ್ತಿದೆ. ಭಾನುವಾರದಂದು ಮನೆಯವರೆಲ್ಲ ಒಟ್ಟಾಗಿ ಕುಳಿತು ಕಷ್ಟ ಸುಖ ಹಂಚಿಕೊಳ್ಳುವ ಆ ಸುಂದರ ಕ್ಷಣಗಳು ನಿಜಕ್ಕೂ ವರ್ಣಿಸಲು ಸಾಧ್ಯವಿಲ್ಲ, ಅದನ್ನು ಅನುಭವಿಸಿಯೇ ಪಡೆಯಬೇಕು. ನಾನು ಈ ವಿಚಾರದಲ್ಲಿ ತುಂಬಾ ಭಾಗ್ಯಶಾಲಿ ಎಂದು ಅಂದುಕೊಳ್ಳುವಷ್ಟರಲ್ಲೇ, ನನ್ನ ಓದಿನ ಸಲುವಾಗಿ, ಕೆಲಸದ ಸಲುವಾಗಿ ಈ ಊರಿಗೆ ಬರುವಂತಾಯ್ತು. ಇಲ್ಲಿಗೆ ಬಂದ ಮೇಲೆ ನಾನೂ ಈ ವೀಕೆಂಡ್ ಬೆಂಗಳೂರಿಗರಲ್ಲಿ ಒಬ್ಬನಾಗಿದ್ದೇನೆ. ಆದರೂ ನನ್ನ ಆ ಹಳೆಯ ಅಸ್ತಿತ್ವವನ್ನು ಕಂಡುಕೊಳ್ಳುವ ಪ್ರಯತ್ನ ಇನ್ನೂ ಮುಂದುವರಿಸಿದ್ದೇನೆ.

Comments