ನನ್ನಾಕಿ

Submitted by vinideso on Mon, 06/29/2009 - 16:25

ಹೊರಟು ನಿಂತಾಳೆ ನನ್ನಾಕಿ
ತವರಿಗೆ ಮೂಡತೊಡಗಿದೆ
ಏಕಾಂತದ ಬೇಸರ ಮನಸಿಗೆ

ಬರುವಳಂತೆ ಬಿಟ್ಟು ಇನ್ನೊಂದು ವಾರ
ಹೇಗಿರಲಿ ನಾ ಬಿಟ್ಟು ಮುದ್ದಿನ
ಆ ಮಲ್ಲಿಗೆಯ ಹಾರ

ತಿನ್ನಬೇಕಂತೆ ಹೊತ್ತು ಹೊತ್ತಿಗೆ
ಹೊಟ್ಟೆ ತುಂಬಾ , ಅವಳಿಲ್ಲದೆ ತಿಂದರೂ
ಹೊಟ್ಟೆ ತುಂಬ ನಿಗೀತೆ ಅದು
ಮನಸಿನ ಹಸಿವ

ಮಾಡಿರೆನ್ನುತಿಹಳು ಚೆನ್ನಾಗಿ ನಿದ್ದೆ
ಹಾಸಿಗೆ ದಿಂಬು ತನ್ನೊಡನೆ ಒಯ್ಯುತ್ತ
ಮುರುಕಲು ಚಾಪೆಯ ನನ್ನೆಡೆಗೆ ಎಸೆಯುತ್ತ

ಹೊರಟು ನಿಂತಾಳೆ ನನ್ನಾಕಿ
ತವರಿಗೆ ಮೂಡತೊಡಗಿದೆ
ಏಕಾಂತದ ಬೇಸರ ಮನಸಿಗೆ.

ಬ್ಲಾಗ್ ವರ್ಗಗಳು

Comments