ಮುಟ್ಟಿ ನನ್ನ ಮನಸ...!!!

Submitted by thesalimath on Tue, 06/30/2009 - 14:39

ಈ ಬಾರಿ ’ಯಾರಾನಾ’ ಚಿತ್ರದ ’ಛೂಕರ್ ಮೆರೆ ಮನ್ ಕೊ....’ ಚಿತ್ರದ ಗೀತೆಯ ಭಾವಾನುವಾದ. ಕಿಶೊರ್ ದಾ ಹಾಡು, ರಾಜೇಶ್ ರೋಶನ್ ಸಂಗೀತ.

ಪ್ರತಿಕ್ರಿಯೆಯಾಗಿ ತಮ್ಮ ಅನುವಾದವನ್ನು ಬರೆಯುವ ಕವಿಗಳ ಅನುವಾದ ಮೂಲ ರಾಗದಲ್ಲಿ ಹಾಡುವಂತಿದ್ದರೆ ಇನ್ನೂ ಚೆಂದ.
ಪಾಲ ಮತ್ತು ಶೊಭಾ ಜೊತೆಗೆ ಇನ್ನಿತರರೂ ಭಾಗವಹಿಸಲು ವಿನಂತಿ. ಭಾಗವಹಿಸುವ ಕವಿಗಳಿಗೆಲ್ಲಾ ಅಡ್ವಾನ್ಸ್ ಥ್ಯಾಂಕ್ಸ್.

ಮುಟ್ಟಿ ನನ್ನ ಮನಸ
ನೀ ಎಂಥ ಸನ್ನಿ ಮಾಡಿದಿ.
ಬದಲಾಗೇತಿ ಹವಾ
ಜಗತ್ತೆಲ್ಲಾ ಚೆಂದ ಅನ್ನಸ್ಲಿಕ್‍ಹತ್ತೇತಿ....!!!

ನೀ ಹೇಳಿದಿ ಅಂದ್ರ
ನಿನ್ನ ಸಲುವಾಗಿ ನಾ ಹಾಡ್ತೇನಿ
ನಿನ್ನ್ ಸಲುವಾಗಿ ನಾ ಹಾಡ್ತೇನಿ..
ನಿನ್ನ ಮಾತಿನ ಮ್ಯಾಲೇ
ನಾ ಹಾಡು ಬರೀತೇನಿ ನಾ ಹಾಡು ಬರಿತೇನಿ..
ನನ್ನ ಪದದೊಳಗ ನಿನ್ನ ಹುಡುಕ್ತತಿ ಜಗತ್ತೆಲ್ಲಾ...!!! || ಮುಟ್ಟಿ ನನ್ನ ಮನಸ..||

ಬಾ ನಿನ್ನ ಮಡಿಲೆಲ್ಲಾ..
ಪ್ರೀತಿಲೆ ತುಂಬತೇನಿ ಪ್ರೀತಿಲೆ ತುಂಬತೇನಿ
ಜಗತ್ತಿನ ಖುಷಿಯೆಲ್ಲಾ
ನಿನ್ನ ಕಡಿ ತಿರುಗಿಸ್ತೇನಿ ನಿನ್ನ ಕಡಿ ತಿರುಗಿಸ್ತೇನಿ ...
ನೀನೆ ನನ್ನ ಬದುಕು ನನ್ನ ಬದುಕಿಗೆ ನೀ ಆಸರಾ..... !!! ||ಮುಟ್ಟಿ ನನ್ನ ಮನಸ...||

ಬ್ಲಾಗ್ ವರ್ಗಗಳು

Comments