ಊರಿನ ಹೆಸರುಗಳಲ್ಲಿ ಬೞಕೆಯಾಗುವ ಪದಗಳು

ಊರಿನ ಹೆಸರುಗಳಲ್ಲಿ ಬೞಕೆಯಾಗುವ ಪದಗಳು

Comments

ಬರಹ

ಊರಿಗೆ ಒಂದು ಹೆಸರು ಬರುವುದೇ ಒಂದು ವಿಶೇಷ. ಮನುಷ್ಯ ಎಲ್ಲವಕ್ಕೂ ಹೆಸರಿಡುತ್ತಾನೆ. ಊರಿನ ಹೆಸರುಗಳ ವಿಶೇಷತೆ ನೋಡೋಣ. ಊರುಗಳ ಹೆಸರುಗಳ ಜೊತೆ ಊರ್(ಊರು), ಹಳ್ಳಿ, ಪುರ, ನಗರ, ಹೊೞಲ್(ಹೊೞಲು), ಪೇಟೆ, ಪಟ್ಟಣ, ಗ್ರಾಮ, ಗಾವ, ಗಾವಿ, ಗಾಂವಿ, ಬೆಟ್ಟ, ಕುಂದ, ಗಿರಿ, ಕೆಱೆ, ಸಾಗರ, ಕೊಪ್ಪ, ಕೊಪ್ಪಲ್, ಪಾಡಿ(ಹಾಡಿ), ಸಂತೆ, ದುರ್ಗ, ಕೋಟೆ ಇತ್ಯಾದಿ ಸೇರುವುದು ವಿಶೇಷ. ಕೆಲವು ಊರುಗಳ ವಿಶೇಷತೆ ನೋಡೋಣ.
ಸೋಮವಾರಪೇಟೆ, ಶನಿವಾರಸಂತೆ: ಈ ಊರುಗಳಲ್ಲಿ ಸಂತೆ ಕ್ರಮವಾಗಿ, ಸೋಮವಾರ ಹಾಗೂ ಶನಿವಾರಗಳಲ್ಲಿ.
ನರಗುಂದ, ನವಲಗುಂದ, ಕುಂದ= ಇವು ನರಿಗುಂದ, ನವಿಲಗುಂದ ಮತ್ತು ಕುಂದ ಈ ಊರುಗಳಲ್ಲಿ ಕುಂದ=ಬೆಟ್ಟಗಳಿವೆ. ಹಿಂದೆ ನರಗುಂದ ಮತ್ತು ನವಲುಗುಂದದ ಬೆಟ್ಟಗಳಲ್ಲಿ ನರಿ ಮತ್ತು ನವಿಲುಗಳಿದ್ದವೇನೋ?
ಶ್ರೀರಂಗಪಟ್ಟಣ, ಬಸವಾಪಟ್ಟಣ.
ದಾವಣಗೆಱೆ, ಸಿರಿಗೆಱೆ, ಅರಸೀಕೆಱೆ, ಕೊರಟಗೆಱೆ, ಮೂಡಿಗೆಱೆ, ಅಱಕೆಱೆ, ಹೊೞಲ್ಕೆಱೆ : ಪ್ರಾಯಶಃ ಈ ಊರುಗಳಲ್ಲಿದ್ದ ಪ್ರಮುಖ ಕೆಱೆಗಳಿಂದಾಗಿ ಈ ಹೆಸರುಗಳು
ಚಿತ್ರದುರ್ಗ, ಹೊಸದುರ್ಗ: ಕೋಟೆಗಳಿರುವುದಱಿಂದ ಈ ಹೆಸರು
ಹನುಮಸಾಗರ, ಭರಮಸಾಗರ, ಶಾಂತಿಸಾಗರ, ಸಾಗರ: ಕೆಱೆಗಳಿಂದ ಈ ಹೆಸರು. ಸಾಗರ ಪಟ್ಟಣದ ಕೆಱೆಯನ್ನು ಕೆಳದಿಯ ಪಾಳೆಯಗಾಱನಾಗಿದ್ದ ಸದಾಶಿವನಾಯಕ ಕಟ್ಟಿಸಿ ಅದನ್ನು ಸದಾಶಿವಸಾಗರನೆಂದು ಕರೆದನಂತೆ. ಜನರು ಊರಿನ ಹೆಸರು ದೊಡ್ಡದಾಯಿತೆಂದು ಸದಾಶಿವನನ್ನು ಬಿಟ್ಟು ಸಾಗರ ಮಾತ್ರ ಉೞಿಸಿಕೊಂಡರೆಂದು ನಂಬಿಕೆ. ಇನ್ನೂ ಊರಿನ ಹೆಸರುಗಳಲ್ಲಿ ವಿಶೇಷತೆಯಿರಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet