ವೈದ್ಯೋ ನಾರಾಯಣೋ ಹರಿಃ |

ವೈದ್ಯೋ ನಾರಾಯಣೋ ಹರಿಃ |

ಬರಹ

ಮನೋವೈದ್ಯ( psychiatrist), ಮನಃಶಾಸ್ತ್ರಜ್ಞ (clinical psychologist), ಮಾರ್ಗದರ್ಶಿ (psychiatric counsellor)  ಈ  3 ಶಬ್ದಗಳ ನಡುವಿನ ವ್ಯತ್ಯಾಸವನ್ನು ಅರಿತಿರುವುದು ಮುಖ್ಯ; ಕಾರಣ: ನಮ್ಮ ತೊಂದರೆಗಳಿಗೆ ಯಾವ ವರ್ಗದವರನ್ನು ನೋಡಬೇಕು ಎಂಬುದು ತಿಳಿದಿರಬೇಕಾದ್ದು ಒಳ್ಳೆಯದು.


ಮನೋವೈದ್ಯ ಎಂದರೆ ವೈದ್ಯಕೀಯ ಶಾಸ್ತ್ರ (MBBS, MD) ಓದಿ, ಔಷಧಿಗಳಿಂದ ಮಾನಸಿಕ ಕಾಯಿಲೆಗಳನ್ನು  ಗುಣಪಡಿಸುವವನು. 


Clinical Psychologist  ಇವರು psychological assessment ಮತ್ತು psycho therapyಗಳ ಮೂಲಕ ಮಾನಸಿಕ ತೊಂದರೆಗಳನ್ನು ನಿವಾರಿಸುವವರು. (ನೋಡಿ:   http://en.wikipedia.org/wiki/Clinical_psychology  ) 
ಮಾರ್ಗದರ್ಶಿ (psychiatric counsellor) ಗಳು ಮಾನಸಿಕ ಸಮಸ್ಯೆ ಇರುವವರಿಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವಲ್ಲಿ ಸಹಾಯ/ಮಾರ್ಗದರ್ಶನ ಮಾಡುವವರು.


ಇದರ ಬಗ್ಗೆ ಡಾ| ದಿವಂಗತ ಮೀನಗುಂಡಿ ಸುಬ್ರಮಣ್ಯ ಇವರು ಕನ್ನಡದಲ್ಲಿ ಒಂದೆರಡು ಒಳ್ಳೆಯ ಪುಸ್ತಕಗಳನ್ನು ಬರೆದಿದ್ದಾರೆ.



(ಈ ಬರಹಕ್ಕೆ ಸ್ಪೂರ್ತಿ ಸಂಪದ್ ಮಿತ್ರ ಹರಿಹರಪುರ ಶ್ರೀಧರ್ ಅವರ ಪಾಂಡಿತ್ಯಪೂರ್ಣ ಲೇಖನ.  ಅವರಿಗೆ ನನ್ನ ಧನ್ಯವಾದಗಳು.)