ಸ್ವಾಮಿ ವಿವೇಕಾನಂದರು ಹೇಳಿದ ಒಂದು ಕಥೆ....

ಸ್ವಾಮಿ ವಿವೇಕಾನಂದರು ಹೇಳಿದ ಒಂದು ಕಥೆ....

ಬರಹ

ನನಗೊಬ್ಬಳು ಗೆಳತಿ ಇದ್ದಳು, ನಮ್ಮಿಬ್ಬರದು ತುಂಬ ಒಳ್ಳೆಯ ಗೆಳೆತನ...


ಒಮ್ಮೆ ನಾನು ಅವಳು ಒಂದು ಸರೋವರದ ಹತ್ತಿರ ಕುಳಿತಿದ್ದಾಗ ಅವಳು ತನ್ನ ಬೊಗಸೆಯಲ್ಲಿ ನೀರು ಹಿಡಿದು ನನ್ನೆಡೆಗೆ ತೋರಿಸಿ ಹೀಗಂದಳು:


"ನಿ ಈ ನೀರನ್ನು ಸೂಕ್ಷ್ಮವಾಗಿ ಗಮನಿಸು..., ಇದು ಪ್ರೀತಿಯನ್ನು ಸೂಚಿಸುತ್ತದೆ.."


ಆದರೆ ನಾ ಅದನ್ನು ಹೀಗೆ ವಿಶ್ಲೇಷಿಸಿದೆ:


"ನಾವು ನೀರನ್ನು ಬೊಗಸೆಯಲ್ಲಿ ಹಗುರವಾಗಿ ಇಟ್ಟು ನೀರನ್ನು ತನ್ನ ಪಾಡಿಗೆ ಇರಲು ಬಿಟ್ಟರೆ ಅದು ಹೆಚ್ಚು ಹೊರಹೋಗದೆ ಅಲ್ಲೇ ಇರುತ್ತದೆ,


ಅದೇ ನಾವು ಬೊಗಸೆಯಲ್ಲಿನ ನೀರನ್ನು ಬಿಗಿಯಾಗಿ ಹಿಡಿಯಲು ಹೋಗಿ ನಮ್ಮ ಹತೋಟಿಯಲ್ಲಿ ಇಡಲು ಪ್ರಯತ್ನ ಪಟ್ಟರೆ ಅದು(ನೀರು) ಕೈ ಬದಿಯಲ್ಲಿ ಅದಷ್ಟು ಹೊರಚಲ್ಲಿ ಹೋಗಲು ಪ್ರಯತ್ನಿಸುತ್ತದೆ.


ಇದೇ ನನ್ನ ಪ್ರಕಾರ ಜನರು ಪರಸ್ಪರ ಭೇಟಿಯಾದಾಗ/ನೋಡಿದಾಗ ಮಾಡುವ ಡೊಡ್ಡ ತಪ್ಪು...:


ಪ್ರೀತಿ: ತಮ್ಮ ವಶಕ್ಕೆ ಪಡೆಯಲು/ತಮಗೆ ಆಗಲಿ ಎಂದು ಬಯಸುವುದು, ಅವರ ಆಕಾಂಕ್ಷೆ, ಅವರ ಬಯಕೆ.... ಬೊಗಸೆಯಲ್ಲಿನ ನೀರು ಕೈಯಿಂದ ಚಲ್ಲಿ ಹೊರಹೋಗುತ್ತಿರುವ ಹಾಗೆ....


ಪ್ರೀತಿಯೂ ಅದೇ ತರಹ..., ಅದು ಎಂದೆಂದೂ ಸ್ವತಂತ್ರ... ನಮಗೆ ಅದರ ಗುಣವನ್ನು ಎಂದೂ ಬದಲಾಯಿಸಲಾಗುವುದಿಲ್ಲ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರಾ ಅಂದರೆ ನೀವು ಅವರನ್ನು ಅದಷ್ಟು ಮುಕ್ತವಾಗಿ/ಸ್ವತಂತ್ರವಾಗಿ ಇರಲು ಬಿಡಿ...


ನಿಮ್ಮಿಂದಾದಷ್ಟು ಅವರಿಗೆ ಕೊಡಿ/ಸಹಾಯ ಮಾಡಿ.., ಅದರೆ ಅವರಿಂದ ಹೆಚ್ಚು ಬಯಸಬೇಡಿ....


ಅವರಿಗೆ ಸಲಹೆ ನೀಡಿ.., ಅದರೆ ಅವರ ಮೇಲೆ ಅಧಿಕಾರ ತೋರಿಸಬೇಡಿ....


ಕೇಳಿ.., ಅದರೆ ಬೇಡ ಬೇಡಿ...


ಇದು ಕೇಳುವುದಕ್ಕೆ/ಹೇಳುವುದಕ್ಕೆ ಸುಲಭವನಿಸಬಹುದು... ಅದರೆ ಪ್ರಯತ್ನ ಪಟ್ಟು ಅನುಸರಿಸಲು ಹೊರಟರೆ ನಿಮ್ಮ ಜೀವಮಾನವೇ ಸಾಕಾಗದಿರಬಹುದು... ಅದರೆ ಇದೇ ನಿಜವಾದ ಪ್ರೀತಿಯ ಗುಣ ಲಕ್ಷಣ... ಇದನ್ನ ನೀವು ಅನುಭವಿಸಬೇಕಂದರೆ ನೀವು ನಿಮ್ಮ ಪ್ರೀತಿ ಪಾತ್ರರಲ್ಲಿ ಹೆಚ್ಚನ್ನು ಬಯಸಬಾರದು.


ನಿಜ ಪ್ರೀತಿಗೆ ನಿಮ್ಮ ನಿಶ್ಕಲ್ಮಷ ಹೃದಯ, ನೀವು ತೋರುವ ಆ ಬೆಚ್ಚಗಿನ ಆರೈಕೆಯಷ್ಟೇ ಸಾಕು.., ಎಲ್ಲರ ಹೃದಯ ಗೆಲಲ್ಲು..."


-------------------------------------


--- ಇದು ಸ್ವಾಮಿ ವಿವೇಕಾನಂದರು ಹೇಳಿದ ಒಂದು ಸುಂದರವಾದ ಕಥೆ... ನಮ್ಮ ಬಾಳಿಗೆ ನಿಜವಾದ ದಾರಿದೀಪ. ಕಲ್ಕತ್ತ ದಲ್ಲಿನ ಒಂದು ಸಂಪ್ರದಾಯಸ್ಥ ಕಾಯಾಸ್ತ ಕುಟುಂಬದಲ್ಲಿ ೧೨ ಜನವರಿ ೧೮೬೩ ರಂದು ಹುಟ್ಟಿದ ಸ್ವಾಮಿ ವಿವೇಕಾನಂದರು ತಮ್ಮ ಅತಿ ಕಡಿಮೆ ಜೀವಿತಾವಧಿಯಲ್ಲಿ ಮಾಡಿದ ಕಾರ್ಯ ಅವರನ್ನು ಇಂದೂ ಸಹ ಭಾರತದ ಶ್ರೇಷ್ಠ ಪುತ್ರರಲ್ಲಿ ಒಬ್ಬರೆಂದು ಪೂಜಿಸಲಾಗುತ್ತದೆ. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಅವರು ವೇದಗಳ ಅಧ್ಯಯನ ಮಾಡಿ, ದೇಶದ ಉದ್ದಗಲಕ್ಕೂ ಸುತ್ತಿ, ನಮ್ಮ ದೇಶದ ಪರಮೋತ್ತಮ ಪ್ರತಿನಿಧಿಯಾಗಿ ೧೮೯೩ ರಲ್ಲಿ ನೆಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ವೇದಾಂತ, ಯೋಗ ಮತ್ತು ಹಿಂದುತ್ವದ ಬಗ್ಗೆ ಅಮೇರಿಕದಲ್ಲಿ ಪ್ರವಚನ ಮತ್ತು ಭಾಷಣಗಳನ್ನ ಮಾಡಿದರು. ೧೮೯೭ ರಲ್ಲಿ ಅವರು ಸ್ಥಾಪಿಸಿದ "ರಾಮಕೃಷ್ಣ ಮಠ" ಮತ್ತು "ರಾಮಕೃಷ್ಣ ಮಿಷನ್" ಇಂದೂ ಸಹ ವಿಶ್ವದ ಉದ್ದಗಲಕ್ಕೂ ಭಾರತ ಧರ್ಮದ ಐತಿಹ್ಯದ ಬಗ್ಗೆ ಪ್ರಚಾರ ಮಾಡುತ್ತಿದೆ, ಲಕ್ಷಾಂತರ ಅನುಯಾಯಿಗಳನ್ನು  ಪಡೆದಿದೆ...


ಇಂದು ಅವರ ೧೪೭ ನೇ ಜನ್ಮದಿನ... ಭಾರತ ಕಂಡ ಈ ಶ್ರೇಷ್ಠ "ಸಂತ" ನಿಗ ನಮ್ಮೆಲ್ಲರ ನಮನ....