ಹೀಗೂ ಆಗುತ್ತೆ...

ಹೀಗೂ ಆಗುತ್ತೆ...

ನಾನು ಪುಣೆಯಲ್ಲಿದ್ದಾಗ ನಡೆದ ಘಟನೆ..
ನಾನಿದ್ದ ಮನೆಯಲ್ಲಿ ಐವರ ವಾಸ.. ಅದರಲ್ಲಿ ನಾನು ಮತ್ತು ನನ್ನ ಸಹೋದ್ಯೋಗಿ ಒಂದು ಕೋಣೆಯಲ್ಲಿ ವಾಸವಿದ್ದರೆ. ಸಹೋದ್ಯೋಗಿಯ ತೆಲುಗು ಮಿತ್ರರಿಬ್ಬರು ಇನ್ನೊಂದು ಕೋಣೆಯಲ್ಲಿದ್ದರು. ಉಳಿದೊಬ್ಬ ಮರಾಠಿ ಹಾಲ್ ನಲ್ಲಿ ಇರುತ್ತಿದ್ದ. ನನ್ನ ಮರಾಠಿ ಸ್ನೇಹಿತನಿಗೆ ಬೆಳ್ಳಂಬೆಳಗ್ಗೆ ಅರ್ಜೆಂಟ್ ಆಗಿ ಎನೋ ಕೆಲಸಕ್ಕಾಗಿ ಹೋಗಬೆಕಾಗಿತ್ತು. ಅದಕ್ಕೆ ಸ್ನಾನ ಮಾಡ್ತಾ ಇದ್ದ.. ಆಗ ಅವನ ಮೊಬಾಯ್ಲ್ ಫೋನ್ ರಿಂಗಣಿಸಿತು ಅದರಲ್ಲಿ ಅಮಿತ್ ಎಂದು ಬರೆದಿತ್ತು. ಹಾಲ್ ನಲ್ಲಿ ಪೇಪರ್ ಓದುತ್ತಿದ್ದ ಪಕ್ಕದ ರೂಮಿನ ಹಿಂದಿ ಬರದ ತೆಲುಗು ಸ್ನೇಹಿತ(ಸತ್ಯ) ಫೋನ್ ಎತ್ತಿಕೊಂಡ. ಅಲ್ಲಿ ನಡೆದ ಸಂಭಾಷಣೆ ಹೀಗಿತ್ತು.

ಅಮಿತ್ : ಬನ್ಯ(ಮರಾಠಿ ಸ್ನೇಹಿತನ ಅಡ್ಡ ಹೆಸರು)
ಸತ್ಯ : ಬನ್ಯ ನಹಿ ಸತ್ಯ.
ಅ : ಬನ್ಯ ಕಹಾ ಗಯ?
ಸ : ಬನ್ಯ ನಾಚ್ ರಹಾ ಹೆ (ಬನ್ಯ ಕುಣಿಯುತ್ತಿದ್ದಾನೆ)
ಅ : ಕ್ಯು?
ಸ : ಕ್ಯು ಮತಲಬ್ ಕ್ಯಾ ಹೆ? ವೊ ಡಯ್ಲಿ ನಾಚ್ತಾ ಹೆ.. (ದಿನಾ ಕುಣಿಯುತ್ತಾನೆ)
ಅ : ಪರ್ ಕಿಸ್ಕೆ ಸಾಥ್? (ಯಾರ್ಜೊತೆ)
ಸ : ಅರೆ ತುಮ್ ಭಿ... ಮಜಾಕ್ ಕರ್ ರಹೆ ಹೊ.. ಒ ಅಕೆಲಾ ನಾಚ್ತಾ ಹೆ.. (ಒಬ್ಬನೆ)
ಅ : ಕುಚ್ ತೊ ಗಡ್ಬಡ್ ಹೆ.. ಸುಬೆ ಸುಬೆ ಕ್ಯು ನಾಚೆಗ.. ಉಸ್ಕ್ಕೊ ಮೈನೆ ಬುಲಾಯಾ ಥ ಇದರ್... (ನಾನ್ ಇಲ್ಲಿಗೆ ಕರ್ದಿದ್ದೆ)
ಸ : ಅರೆ ನಹಿ... (ಏನೊ ತಪ್ಪಿದೆ ಅಂತ ಆರನೆ ಇಂದ್ರಿಯಕ್ಕೆ ಹೊಳೆಯಿತು ಅನ್ಸುತ್ತೆ). ವೊ ಬಾತ್ ಕರ್ ರಹಾ ಹೆ..(ಮಾತಾಡ್ತ ಇದ್ದಾನೆ)
ಅ : ಕಿಸ್ಕೆ ಸಾಥ್? (ಯಾರ್ಜೊತೆ)
ಸ : ವೊ ಅಕೆಲಾ ಬಾತ್ ಕರ್ತಾ ಹೆ.. (ಒಬ್ಬನೆ)
ಅ : ಪಾಗಲ್ ಹೆ ಕ್ಯಾ ತು??(ಫೋನ್ ಡಿಸ್ಕನ್ನೆಕ್ಟ್ ಆಯ್ತು)
ಈ ಕಥೆ ಬನ್ಯ ಅವನ ಕೆಲಸ ಮುಗಿಸ್ಕೊಂಡು ವಾಪಾಸ್ ಬಂದ ಮೇಲೆ ತಿಳಿಯಿತು

Rating
No votes yet

Comments