ಈಗೇನು ಲೈಟ್ ಆಫ್ ಮಾಡ್ಲಾ?

Submitted by Chikku123 on Wed, 06/03/2009 - 17:33

ಮೊನ್ನೆ ಊರಿಗೆ ಹೋಗಿದ್ದಾಗ ನಾನು, ನಮ್ಮಪ್ಪ ಮತ್ತೆ ನಮ್ಮಮ್ಮ ಅತ್ತೆ ಮನೆಗೆ ಹೋಗಿದ್ವಿ. ಮನೆಗೆ ವಾಪಸ್ ಬರೋವಾಗ ರಾತ್ರಿಯಾಗಿತ್ತು, ನಾನು ಡ್ರೈವ್ ಮಾಡ್ತಿದ್ದೆ, ನಮ್ಮಪ್ಪಂಗೆ ಅವರ ಡ್ರೈವಿಂಗ್ ಮೇಲೆ ಇರುವಷ್ಟು ಭರವಸೆ ನನ್ನ ಡ್ರೈವಿಂಗ್ ಮೇಲೆ ಇಲ್ಲ, ಅದೇ ರೀತಿ ನನಗೂ ಸಹ (ಅಂದ್ರೆ ಅವರ ಡ್ರೈವಿಂಗ್ ಮೇಲೆ ನನಗೆ ಭರವಸೆ ಇಲ್ಲ).

ಕಾರಿನ ಬ್ಯಾಟರಿ ತುಂಬಾ ಸಲ ನಮ್ಮಪ್ಪಂಗೆ ಕೈ ಕೊಡ್ತಿತ್ತು, ಅದನ್ನೇ ರಿಪೇರಿ ಮಾಡ್ಸ್ತಿದ್ರು.

ಈಗ ವಿಷಯಕ್ಕೆ ಬರೋಣ, ಸುಮಾರು 10 ಗಂಟೆ ಆಗಿತ್ತು, ಇನ್ನೂ ಅರ್ಧ ಗಂಟೆ ದಾರಿ ಬಾಕಿ ಇತ್ತು, ಸುತ್ತ ಭಯಾನಕ ಕತ್ತಲು, ಹೆಡ್ಲೈಟ್ ಆಫ್ ಮಾಡಿದ್ರೆ ಯಾರೂ ಕಾಣ್ತಿರ್ಲಿಲ್ಲ, ಕಾರು ಮನೆಯ ಹಾದಿಯಲ್ಲಿ ಸಾಗುತ್ತಿತ್ತು. ನಮ್ಮಪ್ಪ, ಹೀಗೆ ಮಾತಾಡ್ತಾ, ಹೆಡ್ಲೈಟ್ ಜಾಸ್ತಿ ಉಪಯೋಗಿಸಿದರೆ ಬ್ಯಾಟರಿ ವೀಕ್ ಆಗತ್ತೆ ಗೊತ್ತಾ ಅಂದ್ರು (ಸುಮ್ನೆ ವಿಷಯ ಹೀಗೆ ಅಂತ ಹೇಳಿದ್ರು).

ನಾನು ತಕ್ಷಣ, ಈಗೇನು ಆಫ್ ಮಾಡ್ಲಾ? ಅಂದೆ......

ನಮ್ಮಮ್ಮ ಬಿದ್ದು ಬಿದ್ದು ನಗಾಡ್ತಿತ್ತು, ನಮ್ಮಪ್ಪ ಒಂದು 10 ನಿಮಿಷ ಏನು ಮಾತನಾಡದೆ ಸುಮ್ಮನೆ ಕುಳಿತಿದ್ರು.

Comments