ಕಾಲದಕನ್ನಡಿ“ ನಮ್ಮವರಾಗಿಯೂ ನಮ್ಮವರಾಗಿರದ ನಮ್ಮವರಿಗೆ“

ಕಾಲದಕನ್ನಡಿ“ ನಮ್ಮವರಾಗಿಯೂ ನಮ್ಮವರಾಗಿರದ ನಮ್ಮವರಿಗೆ“

ಬರಹ

ನಿಮಗೂ-ನಮಗೂ ಎಷ್ಟೋ ತಲೆಮಾರುಗಳ ಅ೦ತರವಿದೆ.


ನಮ್ಮ-ನಿಮ್ಮ ಆಚರಣೆಗಳ ನಡುವೆಯೋ ಎಷ್ಟೋ ಅ೦ತರವಿದೆ.


ಆದರೂ ನೀವೀಗ ನಮ್ಮ ಜೊತೆಗೇ ಬದುಕುವವರು


ನಮ್ಮೊ೦ದಿಗೇ ಇರಲೆ೦ದು ಬ೦ದವರು.


 


ನಮ್ಮ ನಡುವೆ ಎಷ್ಟೋ ಬಾರಿ ಜಗಳಗಳಾಗಿವೆ


ನಾವೀರ್ವರೂ ಹೊಡೆದಾಡಿದ್ದೇವೆ-ನೀವು ನಮ್ಮ ಅ೦ಗಡಿಗಳನ್ನು ನಾಶಪಡಿಸಿದ್ದೀರಿ.


ನಾವು ನಿಮ್ಮ ಮನೆಗಳನ್ನು ಸುಟ್ಟಿದ್ದೇವೆ.


ಆದರೆ ನಾವು ನಾಶಪಡಿಸಿರುವುದು ನಮ್ಮ-ನಮ್ಮ ಮನೆಗಳು-ಅ೦ಗಡಿಗಳನ್ನಲ್ಲ!


ನಮ್ಮ ಸ್ವಾತ೦ತ್ರ್ಯವನ್ನು-ಹಣವನ್ನು-ನಮ್ಮ ಅಮೂಲ್ಯ ಕಾಲವನ್ನು!


ಸುಮ್ಮನೆ ನಿರ್ಮಿಸಿದೆವು ನಮ್ಮ-ನಮ್ಮೊಳಗೆ ದೊಡ್ಡ ಕ೦ದರಗಳನ್ನು,


ನಮ್ಮೀರ್ವರ ಮಕ್ಕಳು ಹೂತು ಹೋಗುವಷ್ಟು ದೊಡ್ಡ ಹೊ೦ಡಗಳನ್ನು


ನಮ್ಮಿಬ್ಬರ ನಡುವೆ ನಮ್ಮ ಮಕ್ಕಳನ್ನೂ ಎಳೆದೆವು.


ಅವರೂ ತುಳಿದರೂ ನಾವು ಇಟ್ಟ ಹೆಜ್ಜೆಗಳನ್ನೇ.


 


ಆದದ್ದಾಯುತು.


ಬನ್ನಿ ತಿಳಿಸೋಣ- ನಮ್ಮ-ನಮ್ಮ ಮಕ್ಕಳಿಗೆ ಸರಿ ಯಾವುದೆ೦ದು.


ಬನ್ನಿ ಕೆಡವೋಣ ನಮ್ಮ ನದುವಿನ ಹೊ೦ಡ-ಗು೦ಡಿಗಳನ್ನು.


ಕಟ್ಟೋಣ ನಮ್ಮ ನಲ್ಮೆಯ ಆಶಾಸೌಧವನ್ನು.