ಬಂತಣ್ಣ ಬಂತು ಚುನಾವಣೆ,

ಬಂತಣ್ಣ ಬಂತು ಚುನಾವಣೆ,

ಬರಹ

ಬಂತಣ್ಣ ಬಂತು ಚುನಾವಣೆ,
ಕೇಳ್ರಣ್ಣ ಕೇಳ್ರಿ ಇವ್ರ ಚಿತಾವಣೆ,

ಎಲ್ಲಾರೂ ಹೇಳ್ತಾರೆ ಒಂದೇ ಮಾತ್ನ,
ವೋಟ್ ಹಾಕಿ, ವೋಟ್ ಹಾಕಿ, ವೋಟ್ ಹಾಕ
ನಾವಂಗೆ ಮಾಡ್ತೀವಿ, ನಾವಿಂಗೆ ಮಾಡ್ತೀವಿ
ನಮ್ಗೇನೇ ವೋಟ್ ಹಾಕಿ, ಸ್ವರ್ಗಾನೆ ತರ್ತೀವಿ!

ಕಮ್ಲದವ್ರು, ಕೈನವ್ರು, ಹೆಂಗಸ್ನಿಂದೆ ಬಂದವ್ರು
ಮುಗಿದ್ರಣ್ಣ ಮುಗಿದ್ರಣ್ಣ ಎರ್ಡು ಕೈನ,
ಕೈ ಹಿಡಿದ್ರು ಕಾಲ್ ಹಿಡಿದ್ರು ಕೊನ್ಗೆ
ತೋರ್ಸಿದ್ರು ಐನೂರ್ರ ನೋಟನ್ನ!

ಬಾಂಬನ್ನ ಹಾಕ್ದವ್ರು, ಕೈಯನ್ನ ಕಡ್ದವ್ರು, ದುಡ್ಡನ್ನ ಕದ್ದವ್ರು
ಎಲ್ಲಾರ್ಗು ಬೇಕು ಚುನಾವಣೆ,
ಹೊಟ್ಟೆಗಿಲ್ಲ, ಬಟ್ಟೆಗಿಲ್ಲ, ರಾತ್ರಿಯಾದ್ರೆ
ಮಲ್ಗಾಕೆ ಮನೆಯಿಲ್ಲ, ಆದ್ರೂನು ಬೇಕು ಚುನಾವಣೆ!

ಅವ್ರು ಕೊಡೋ ಬಿರ್ಯಾನಿ, ಐನೂರ್ರನೋಟು
ಎಲ್ಲಾದ್ನೂ ಮರ್ಸುತ್ತೆ, ಮತ್ತನ್ನ ಏರ್ಸುತ್ತೆ,
ಮನೆಯನ್ನ ಮಕ್ಳನ್ನ, ಹೆಂಡ್ತೀನ ತಾಯನ್ನ
ಅಪ್ಪನ್ನ ಅಕ್ಕ ತಂಗೀರ್ನ ತೊರ್ಸುತ್ತೆ ಚುನಾವಣೆ!

ಗೆದ್ದವ್ರು ಮೆರೀತಾರೆ, ಸೋತವ್ರು ಮಖಾಡೆ ಮಲಗ್ತಾರೆ,
ಗೆದ್ದವ್ರ ಬಾಲ ಹಿಡಿದವ್ರು ಬದುಕ್ತಾರೆ,
ಅವ್ರಿಗೆದುರಾದವರ್ನ ತುಳೀತ ನಗ್ತಾರೆ, ಲೆಕ್ಕ ಹಾಕ್ತಾರೆ
ಎಲ್ಲೆಲ್ಲಿ ನುಂಗೋಣ, ಎಷ್ಟೆಷ್ಟು ನುಂಗೋಣ!

ಬಂತಣ್ಣ ಬಂತು ಚುನಾವಣೆ,
ಕೇಳ್ರಣ್ಣ ಕೇಳಿ ಇವ್ರ ಚಿತಾವಣೆ!!