ಟೈಂ ಪಾಸ್ ಚುಟುಕುಗಳು!

ಟೈಂ ಪಾಸ್ ಚುಟುಕುಗಳು!

ಬರಹ

ಪಾಪಪ್ರಜ್ಞೆ:

ಪಾಪೋಹಂ ಪಾಪ ಕರ್ಮಾತ್ಮಾ ಎಂದು

ಪಾಪಪ್ರಜ್ಞೆ ಹುಟ್ಟಿಸುವ ಪುರೋಹಿತನ ಹೊಟ್ಟೆ

ಜನರು ಪಾಪ ಮಾಡದಿದ್ದರೆ ತುಂಬುವುದು ಹೇಗೆ?

 

ನಿರ್ಲಿಪ್ತ:

ಒಮ್ಮೆ ಬೈಗುಳ ಒಮ್ಮೆ ದೂಷಣೆ ಮತ್ತೊಮ್ಮೆ ನರಳಾಟ

ಜೀವನವೆಂಬುದು ಹೂವು ಮುಳ್ಳುಗಳ ಕೈತೋಟ

ಮುಳ್ಳು ಚುಚ್ಚುವಾಗ ಹೂಗಳ ಆಘ್ರಾಣಿಸು

ಎಲ್ಲವೂ ಶ್ರೀಕೃಷ್ಣ ಕಲಿಸಿವ ಪಾಠ!

 

ಎಂತಹ ಸ್ವತಂತ್ರ?:

ದೇಶದೇಶದ ನಡುವಿನ ಗಡಿಯನ್ನು ಸ್ವತಂತ್ರಗೊಳಿಸಿದ

ಅಂತರ್ಜಾಲ ಪ್ರಜೆಗಳನ್ನು ಗಣಕದ ಮುಂದೆ ಬಂಧಿಸಿದೆ!

 

ಯಾವುದು ಪಾಠ?:

 

ಉಪನಿಷತ್ ವಚನ ಕೀರ್ತನೆ ಗಾದೆಗಳನ್ನು

ಊರು ಹೊಡೆದು ಮೊದಲ ರ್ಯಾಂಕ್ ಬಂದವನಿಗೆ

ಅವನ್ನೆಲ್ಲಾ ಅರ್ಥಮಾಡಿಕೊಳ್ಳಲು

ನಲವತ್ತು ವರುಷ ಸಾಕಾಯಿತು!

 

ಗೋಮೂತ್ರ:

 

 ಹಾಲು ಹಿಂಡಿದ ಮೇಲೆ ಗೋವನ್ನು ಸಾಯಿಸುವಂತೆ ಹೆತ್ತ ತಾಯಿಯನ್ನು ಸಾಯಿಸುತ್ತೀರಾ

ಎಂದು ಕೇಳಿದ ಎಸಿ ಬೆಂಚಿನ ನೌಕರನಿಗೆ ಗೋವು ಸಾಕಿ ಗೊತ್ತಿಲ್ಲ!

ಆಕಳ ಉಚ್ಚೆಯೂ ಒಂದೇ ನಾಯಿಯ ಉಚ್ಚೆಯೂ ಒಂದೇ ಎಂದು ಅರುಹಿದವನಿಗೆ

ತಾನು ಕುಡಿಯುವುದು ಗೋವಿನ ಹಾಲು ನಾಯಿಯ ಹಾಲಲ್ಲ ಎಂಬುದು ನೆನಪಾಗಲಿಲ್ಲ!!

 

ಸಮಾಜ:

ದೀಪವಿಲ್ಲದ ದೇಗುಲ ಶ್ರದ್ಧೆಯಿಲ್ಲದ ಪಾಠ

ಹೊತ್ತಗೆಯಿಲ್ಲದ ಕೋಣೆ ಮನಸ ಕೇಳದ ಗೆಳತಿ

ಹಣ್ಣಿಲ್ಲದ ಮರ ಪ್ರೀತಿಯಲ್ಲದ ಕಾಮದಂತೆ

ನೀತಿಯಿಲ್ಲದ ಸಮಾಜ.