ಅಮ್ಮ

ಅಮ್ಮ

ಅಮ್ಮ
 ನೆರಿಗೆ ಲಂಗ ಚಿಮ್ಮಿಸಿಕೊಂಡು
ಓಡಾಡಿಕೊಂಡಿದ್ದ ಸಮಯ,
ವಯಸ್ಸು ತಿಳಿಯುವ ಮೊದಲೇ ,
ಕೊರಳಿಗೆ  ಮೂರು ಗಂಟು,

ಅವಳಿಗೆನಾಗಿತ್ತು ಅಂತ ಮಹಾವಯಸ್ಸು ,
ಆಡಿಸಿ,ಕೂಡಿಸಿ ,ಕಳೆದರೆ ಈಗಿರುವ ನನ್ನ
ವಯಸ್ಸಿಗಿಂತ ಮೂರು ನಾಲಕ್ಕು ವರ್ಷ
ಹೆಚ್ಚು....

ವಿಧಿಗೆ ಅಪ್ಪ ಬಹಳ ಇಷ್ಟವಾಗಿದ್ದ,
ಗೊತ್ತಿಲ್ಲ ಗುರಿಯಿಲ್ಲ ಹೇಳದೆ ಕೇಳದೆ
ಬಾರದ ಲೋಕಕ್ಕೆ ಹೋಗಿಬಿಟ್ಟ.

ಅಮ್ಮನ ಬಗಲಲ್ಲಿ ಎಳೆಯ ಕಂದಮ್ಮಗಳು ....
ಬದುಕೇ ದುಸ್ತರವಾಗಿರುವಾಗ
ಬದುಕಿನ ದಾರಿ ಕಣ್ಣಿಗೆ
ನಿಲುಕದಷ್ಟು ದೂರ.....
ಪಾಪ..ಹೆತ್ತಳು ,ಹೊತ್ತಳು
ನೆತ್ತರ ಸುರಿಸಿ ಬದುಕಿದಳು
ಬದುಕ ಕಲಿಸಿಕೊಟ್ಟಳು.

ನಾವು ನಮ್ಮ ನಮ್ಮ ಗೂಡುಗಳಲ್ಲಿ
ಬೆಚ್ಚಗಿದ್ದೇವೆ... ....
ಅಮ್ಮ ಅದೇ ಹಳೆಯ ರಾಜಿಯಾದರು
ರಾಜಿಯಾಗದ ನೆನಪುಗಳೊಂದಿಗೆ...

ಆದರೂ....ಅವಳ ಸ್ಪರ್ಶದಲ್ಲಿ...
ಸುಕ್ಕುಗಟ್ಟಿದ ನೆರಿಗೆಗಳಲ್ಲಿ....
ಸಾರ್ತಕತೆಯ...ನೆಮ್ಮದಿ

ಪವಿತ್ರ ಪ್ರಶಾಂತ್

Rating
No votes yet

Comments

Submitted by ವೆ೦ಕಟೇಶಮೂರ್ತಿ… Wed, 05/05/2010 - 09:47