ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು !

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು !

ಬರಹ

ಮೇ ತಿ೦ಗಳ ಒಂಬತ್ತನೇ ತಾರೀಖು 'ಅಮ್ಮಂದಿರ ದಿನ' ...


ಅಮ್ಮ'ನ ಬಗ್ಗೆ ಎಷ್ಟು ಬರೆದರೂ ಸಾಲದು ನಿಜ, ಅದಕ್ಕೆ, ಮತ್ತೆ ಚಲನ ಚಿತ್ರಗಳ ಹಾಡಿಗೆ ಮೊರೆಹೋಗುತ್ತಿರುವೆ ನನ್ನ ಮನದಲ್ಲಿ ಸುಳಿದ ಹಲವು ಹಾಡುಗಳು ಹೀಗಿವೆ …..


ಈ ಸಾರಿ ನಾನು ಈ ಹಾಡು ಯಾವ ಚಿತ್ರದ್ದು ಅಂತ ಕೇಳುವುದಿಲ್ಲ. ಬದಲಿಗೆ ಯಾವ ನಟ/ನಟಿಯರ ಮೇಲೆ ಚಿತ್ರಿತವಾಗಿದೆ ಎಂದು ಹೇಳಿ


ಮುಖ್ಯವಾಗಿ 'ಅಮ್ಮ'ನ ಹಾಡಿನ ಈ ಸರಣಿಗೆ ನಿಮಗೆ ಗೊತ್ತಿರುವ ಹಾಡುಗಳನ್ನು ಸೇರಿಸಿ :


೧ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು, ನಿನ್ನ ಸಂಗ ಆಡಲೆಂದು ಬಂದೆ ನಾನು ....


೨ ಅಮ್ಮ ನೀನು ನಕ್ಕರೆ, ನಮ್ಮಾ ಬಾಳೆ ಸಕ್ಕರೆ ...


೩ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ?


೪ ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ, ಬಾಳಲೇ ಬೇಕು ಈ ಮನೆ ಬೆಳಕಾಗಿ


೫ ಅಮ್ಮಾ ಎಂದರೆ ಏನೋ ಹರುಷವು, ನಮ್ಮಾ ಬಾಳಿಗೆ ಅವಳೇ ದೈವವು


೬ ತಾಯಿ ತಾಯಿ ಲಾಲಿ ಹಾಡು ಭೂಮಿ ತಾಯಿಗೆ, ಲಾಲಿ ಹಾಡು ಹೆತ್ತ ತಾಯಿಗೆ


೭ ಅಮ್ಮಾ, ಅಮ್ಮಾ ಎಂದು ಕೂಗಿದರೆ ಮೈ ನವಿರೇಳುವುದೂ, ಅಮ್ಮಾ ಎಂದು ಹಾಡಿದರೆ ಜಗವೇ


೮ ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ


೯ ಕೈ ತುತ್ತು ಕೊಟ್ಟವಳೇ ಐಯ್ ಲವ್ ಯು ಮಯ್ ಮದರ್ ಇಂಡಿಯಾ


 


ಅಮ್ಮಂದಿರ ದಿನದ ಅಂಗವಾಗಿ ಎಲ್ಲ ಅಮ್ಮಂದಿರಿಗೆ ಹಾರ್ದಿಕ ಶುಭಾಶಯಗಳು. ಭಗವಂತ ಎಲ್ಲೆಡೆ ತಾನೇ ಇರಲು ಸಾಧ್ಯವಿಲ್ಲ ಎಂದು ಸೃಷ್ಟಿ ಮಾಡಿದ ಜೀವಿ ಎಂದರೆ 'ಅಮ್ಮ' ಎಂದು ಹೇಳುತ್ತಾರೆ.


ಏನೆಂದಿರಿ ಟೆಕ್ಕಿಗಳೇ? ಔಟ್ ಸೋರ್ಸ್ ಅಂದಿರಾ? ಒಂಥರಾ ಅಂಗೇಯಾ ....