ರಂಗಶಂಕರದಲ್ಲಿ ಮಕ್ಕಳ ರಂಗಶಿಬಿರ

0

ರಂಗಭೂಮಿಯಲ್ಲಿ ಆಸಕ್ತಿ ಇರುವವರಿಗೆ ಇದೊಂದು ಒಳ್ಳೆಯ ಅವಕಾಶ. ರಂಗಶಂಕರದ ಆಹಾ! ಮಕ್ಕಳ ರಂಗಭೂಮಿಯು ಹೊಸ ನಾಟಕ 'ಮುಲ್ಲಾನಸ್ರುದ್ದೀನ' ಆರಂಭಿಸಲಿದೆ. ಇದಕ್ಕಾಗಿ ಆಸಕ್ತ ನಟರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜೂನ್‍ 10 ರಿಂದ ತರಬೇತಿ ಆರಂಭವಾಗಲಿದೆ. ಮುಂಬೈನ ನಿರ್ದೇಶಕ ಪುಷಾನ್‍ ಕೃಪಲಾನಿ ಇದನ್ನು ನಿರ್ದೇಶಿಸಲಿದ್ದಾರೆ. ದಿನವಿಡೀ ಇರುವ ತರಬೇತಿಗಳಿಗೆ ಅಭರ್ಥಿಗಳು ಹಾಜರಾಗಬೇಕು. ಸಂಗೀತ ವಾದ್ಯ ತಿಳಿದಿರುವ ಅಭರ್ಥಿಗಳಾದಲ್ಲಿ ಒಳ್ಳೆಯದು. ನಾಟಕದ ಮೊದಲ ಪ್ರದರ್ಶನ ಆಹಾ ಮಕ್ಕಳ ಅಂತರಾಷ್ಟ್ರೀಯ ನಾಟಕೋತ್ಸವದಲ್ಲಿ ಜುಲೈ 6ರಂದು ಇರುತ್ತದೆ. ಆಸಕ್ತರು ತಮ್ಮ ಹೆಸರನ್ನು ಜೂನ್‍ 1ರ ಒಳಗೆ ನೋಂದಾಯಿಸಿಕೊಳ್ಳಬೇಕು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.