ಪುಣೆಯಲ್ಲಿ ’ಮುಂಗಾರು ಮಳೆ’ ಚಿತ್ರ ಬಿಡುಗಡೆ - 11, ಜುಲೈ, 2007ರಿಂದ ಈ-ಸ್ಕ್ವೇರ್ ನಲ್ಲಿ ರಾತ್ರಿ 8.50ಕ್ಕೆ

0

ಪುಣೆ ಕನ್ನಡಿಗರು ಬಹಳ ಕಾತುರದಿದಂದ ನಿರೀಕ್ಷಿಸುತ್ತಿದ್ದ, ’ಮುಂಗಾರು ಮಳೆ’ ಚಿತ್ರ ಇಂದು(11-06-2007) ರಂದು ಬಿಡುಗಡೆಯಾಗುತ್ತಿದೆ. ಒಂದು ವಾರಕ್ಕೂ ಹೆಚ್ಚು ಕಾಲದಿಂದ ಪುಣೆಯ ಪ್ರಮುಖ ದಿನಪತ್ರಿಕೆಗಳಲ್ಲಿ, ಮುಂಗಾರು ಮಳೆಯ ಜಾಹೀರಾತು ರಾರಾಜಿಸುತ್ತಿತ್ತು. ಕೊನೆಯ ಕ್ಷಣದಲ್ಲಿ ಆದ ಕೆಲವು ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ, ನಿಗದಿತ ಸಮಯಕ್ಕೆ ಚಿತ್ರವನ್ನು ಬಿಡುಮಾಡಲಾಗದೆ, ಕಡೆಗೆ ಇಂದಿನಿಂದ, ಪ್ರದರ್ಶನ ಕಾಣುತ್ತಿದೆ. ನಗರದ ಪ್ರಮುಖ ಮಲ್ಟಿಪ್ಲೆಕ್ಸ್ ಈ-ಸ್ಕ್ವೇರ್ (ಯೂನಿವರ್ಸಿಟಿ ರಸ್ತೆ) ಯಲ್ಲಿ 11, ಜುಲೈ, 2007ರಿಂದ ನಾಲ್ಕು ದಿನಗಳ ಕಾಲ ರಾತ್ರಿ 8.50ಕ್ಕೆ ಚಿತ್ರ ಪ್ರದರ್ಶನ ನಿಗದಿಯಾಗಿದೆ. ಈ ಮೂಲಕ ಪುಣೆ ನಗರದ ಪ್ರಮುಖ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಕನ್ನಡ ಚಿತ್ರವನ್ನು ನೋಡುವ ಪುಣೆ ಕನ್ನಡಿಗರ ಕನಸು ಈಡೇರಿದಂತಾಗಿದೆ. ಮಾರ್ಸ್ ಡಿಸ್ಟ್ರಿಬ್ಯೂಟರ್ಸ, ಬೆಂಗಳೂರು (080) 22264227 ರವರು ಈ ಚಿತ್ರವನ್ನು ಪುಣೆಯಲ್ಲಿ ಬಿಡುಗಡೆಗೊಳಿಸಿರುತ್ತಾರೆ. ಚಿತ್ರ ಬಿಡುಗಡೆಯ ಬಗೆಗಿನ ಹೆಚ್ಚಿನ ಮಾಹಿತಿಗೆ, ಪುಣೆ ಕನ್ನಡಿಗರ ಬಳಗದ ವೆಬ್ ಸೈಟ್ http://www.punekannadigaru.tk , ಗೆ ಭೇಟಿ ನೀಡಬಹುದು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.