ದಪ್ಪ ಆಗಲು ಏನು ಮಾಡಬೇಕು ?

3.025

ಮೊನ್ನೆ ಹುಷಾರಿಲ್ಲದೆ ಒಂದು ವಾರ ರಜೆ ಹಾಕಿ ಊರಿನಲ್ಲಿದ್ದು ಬಂದೆ. ಒಬ್ಬ ಸ್ನೇಹಿತ ಸಿಕ್ಕಿದವನು ಏನೋ ಮತ್ತೂ ತೆಳ್ಳಗಾಗಿದೇಯಲ್ಲೋ ಅಂದ, ನಾನು ನಕ್ಕು ಸುಮ್ಮನಾದೆ.
ನಾನು ಎಷ್ಟು    ತೆಳ್ಳಗಿದ್ದೇನೆ ಅಂತ ಊಹಿಸಬೇಕಾದರೆ  ಹಿಂದೊಮ್ಮೆ  ನನ್ನ ಒಬ್ಬ ಸ್ನೇಹಿತ ಹೇಳಿದ್ದ  ಮಾತು ನೋಡಿ  :)  :)
"ಅರವಿಂದ ನೀನು ಇನ್ನೂ ತೆಳ್ಳಗೆ ಆಗೋಕೆ ಸಾಧ್ಯನೇ ಇಲ್ಲ, ನಾನು ಬೇಕಿದ್ರೆ ಬರೆದು ಕೊಡ್ತೀನಿ"

ದಪ್ಪ ಆಗಲು ಏನು ಮಾಡಬೇಕು ? (ನಾನು ಸಸ್ಯಹಾರಿ )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀನು ನನಗಿಂತ ತೆಳ್ಳಗಿದೀಯ ಮಾರಾಯ!

ಹೋದವರ್ಷ ನಾನೂ ಜ್ವರ ಬಂದು ತೆಳ್ಳಗಾದ್ ಮೇಲೆ ನಿತ್ಯದ diet ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದುಂಟು. ನಾನೂ ನಿನ್ನ ತರಹ ಸಸ್ಯಹಾರಿಯಾದ್ರಿಂದ ನಾನು ಅನುಸರಿಸುತ್ತಿರೋ ಸಿಂಪಲ್ ಡೈಯಟ್ ಪ್ರಯತ್ನಿಸಿ ನೋಡಬಹುದು.

೧) ಹೊರಗೆ (ಹೋಟೆಲ್ಲುಗಳಲ್ಲಿ) ತಿನ್ನೋದಿಲ್ಲ ಅಥವ avoid ಮಾಡ್ತೀನಿ. (pizza, Mcdonalds ಎಲ್ಲ ಸಾಧ್ಯವಾದಷ್ಟು ಕಡಿಮೆ ಮಾಡಿರುವೆ).
೨) ಕುಡಿಯೋದಿಲ್ಲ. ಪೆಪ್ಸಿ, ಕೋಕ್ ಕೂಡ ಕುಡಿಯೋದಿಲ್ಲ. ಸಿಗರೇಟು ಹೆಂಗಿದ್ರೂ ಸೇದಲ್ಲ.
೩) ಮೊಳಕೆ ಕಟ್ಟಿದ ಕಾಳುಗಳು ತಿನ್ನೋದು (ಪ್ರತಿದಿನ).
೪) ದಿನಕ್ಕೊಂದ್ ಸಾರಿ ರಾಗಿಯಿಂದ ಮಾಡಿರೋ ತಿಂಡಿ ತಿನ್ನೋದು. ಇತ್ತೀಚೆಗೆ ನಮ್ಮ ಮನೇಲಿ ರಾಗಿ ರೊಟ್ಟಿ ಜಾಗದಲ್ಲಿ ರಾಗಿ ಮುದ್ದೆ ಪಾಪ್ಯುಲರ್.
೫) ಕಾಫಿ ಕಡಿಮೆ ಮಾಡೋದು.
೬) ದಿನಕ್ಕೊಂದ್ ಸಾರಿ ಚಪಾತಿ (ಕಡಿಮೆ ಎಂದರೆ ನಾಲ್ಕೈದು) ತಿನ್ನೋದು ತರಕಾರಿ ಪಲ್ಯದ ಜೊತೆ.

ದಿನಾ ಮೊಟ್ಟೆ ತಿನ್ನಿ ಅಂತಿರ್ತಾರೆ ನಮ್ ಡಾಕ್ಟ್ರು. ಆದ್ರೆ ಮೇಲಿನ ಡೈಯಟ್ ಕಳೆದ ವರ್ಷದಲ್ಲಿ ನನಗೆ ವರ್ಕ್ ಆಗಿದೆ. ಆದರೆ ಈ ಬ್ಯುಸಿ scheduleನಲ್ಲಿ ಟೈಮಿಗೆ ಸರಿಯಾಗಿ ತಿನ್ನೋಕಾಗದೆ ಇರೋದು ಸ್ವಲ್ಪ ತೊಂದರೆ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಧನ್ಯವಾದ ಹರಿ
ನೀವು ಹೇಳಿದ ಡಯಟ್ ಪ್ರಯತ್ನಿಸಿ ನೋಡುತ್ತೇನೆ. ಕಾಫಿ ಕಡಿಮೆ ಮಾಡೋದೇ ದೊಡ್ಡ ಚಾಲೆಂಜ್ ನನಗೆ :)

ನಿಮ್ಮವನೇ,
ಅರವಿಂದ

ಅಲ್ವ? ಶಿವಮೊಗ್ಗ, ಮಲೆನಾಡು ಕಡೆಯವರು ಕಾಫಿ ಕುಡಿಯೋದು ಜಾಸ್ತಿ ಅಂತ ನನಗೆ ಬೆಂಗಳೂರಿಗೆ ಬಂದ ಮೇಲೆ ಗೊತ್ತಾಯ್ತು! :)

ಕಾಫಿ ಬಿಡೋದು ಬಹಳ ಕಷ್ಟ. ಕಡಿಮೆ ಮಾಡೋದೂ ಕಷ್ಟ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಜಿಮ್ ಸೇರಿ ಆಗ ಡಯಟಿಂಗ್ ಸರಿಯಾಗಿ ಮಾಡ್ಲಿಕ್ಕಾಗತ್ತೆ. ;) ನಾನು ಒಂದು ತಿಂಗಳಿನಿಂದ ಸೇರಿದ್ದೀನಿ. ನಿದ್ದೆ ಮಾಡಬಾರ್ದೂ ಅಂದ್ರೂ ನಿದ್ದೆ ಬರ್ತದೆ ಮತ್ತೆ ಹಸಿವೂ ಕೂಡ. ಹೊಟ್ಟೆಗೆ ಸರಿಯಾದ ಸಮಯಕ್ಕೆ ಬೀಳಲೇ ಬೇಕು ಇಲ್ಲಾಂದ್ರೆ ಅಷ್ಟೇ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಒ೦ದ್ ಸಲ ಸಣ್ಣಗಿದ್ದು ದಪ್ಪ ಆಗೋದೇನೋ ಸುಲಭ. ಆದ್ರೆ ದಪ್ಪವಾಗಿ ಸಣ್ಣ ಆಗೊದಿದೆಯಲ್ಲಾ, ರಾಮ ರಾಮ!! ಶತ್ರುಗಳಿಗೂ ಬೇಡ ಈ ಓದ್ದಾಟ. ನನಾಗಾಗಿರೋದೆ ಇದೆ ಸ೦ಕಟ. ಹೇಗಾದ್ರು ಮದುವೆಗೂ ಮು೦ಚೇನೇ ಸಣ್ಣಗಾಗ್ಬೇಕು ಅ೦ತ ತೀರ್ಮಾನ ಮಾಡಿ ಜಿಮ್ ಮೆಟ್ಟ್ಲೇರಿದ್ದೇನೆ, ಮತ್ತು ಡೈಯೆಟಿ೦ಗ್ ಕೂಡ ಸರಿಯಾಗ್ ಮಾಡ್ತಾ ಇದ್ದೇನೆ ಕೂಡ. ಸ್ವಲ್ಪ ಯಶಸ್ಸು ಸಿಕ್ಕಿದೆ ಈ ನಡುವೆ :)

ನನಗೋ ಸಣ್ಣಗಿರೋರ್ನ ನೋಡಿದ್ರೆ ಸಕತ್ ಹೊಟ್ಟೆ ಉರಿಯುತ್ತೆ ;) ಏನ್ಮಾಡೋದು ಎಲ್ಲದಕ್ಕೂ ಪಡ್ಕ್೦ಡು ಬ೦ದಿರ್ಬೇಕು:(

ನಿಮ್ಮವ
ಕ್ರಿಸ್ನ

ನಾನು ಹೇಗೆ ಸಣ್ಣ ಆಗೋದು ಅಂತ ತಲೆಕೆಡ್ಸ್ಕೊಂಡಿದ್ರೆ ನೀವು ದಪ್ಪ ಆಗ್ಬೇಕು ಅಂತೀರಾ. ನಿಜವಾಗ್ಲು, ಸಣ್ಣ ಇದ್ರೆ ಹಂಗೆ ಅರಾಮಾಗಿರಿ, ದಪ್ಪ ಆಗೋ ಗೋಳು ಯಾರಿಗೂ ಬೇಡ. ಆಮೇಲೆ ಸಣ್ಣ ಆಗೋಕು ಸಾಹಸ ಮಾಡ್ಬೇಕು

ದಪ್ಪ ಆಗೋದು ಅಂದ್ರೆ ಹೊಟ್ಟೆ ಬರೋದು ಅಂತಲ್ರೀ ಸರ್ರ :-)

ಹೊಟ್ಟಿ ಬಂದ್ರ ಕರ್ಗ್ಸೋದ್ ಕಷ್ಟ.

ತೆಳ್ಳಗಿದ್ದವರು ಸ್ವಲ್ಪ ತೂಕ ಜಾಸ್ತಿ ಮಾಡ್ಕೊಳ್ಳೋದು ಅಂತ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಒಣ ಹಣ್ಣುಗಳು ( dry fruits) , ಮೊಳಕೆ ಕಟ್ಟಿದ ಕಾಳುಗಳು , high calories food ,ತಂಗಳನ್ನಕ್ಕೆ ಮೊಸರನ್ನು ಹಾಕಿಕೊಂಡು ತಿಂದ್ರೆ ದಪ್ಪ ಆಗಬಹುದು. ಇದ್ರ ಜೊತೆಗೆ ವ್ಯಾಯಾಮನೂ ಮಾಡಿ.