ಉತ್ತರ ಕರ್ಣಾಟಕದವರಿಗೆ ಹೞಗನ್ನಡ ’ಱ’ ಮತ್ತು ’ೞ’ ಬಗೆಗಿನ ಅಱಿವು ಕಡಿಮೆ

0

ನಾನು ತಿಳಿದಂತೆ, ವಿಚಾರಿಸಿದಂತೆ, ಉತ್ತರ ಕರ್ಣಾಟಕದವರಿಗೆ ಹೞಗನ್ನಡದ ವಿಚಾರವಾಗಿ ಗೊತ್ತಿರುವುದು ಕಡಿಮೆ. ’ಱ’ ಮತ್ತು ’ೞ’ ಬಲುದೂರ. ಹೞಗನ್ನಡವೆಂದರೆ ಅದೇನು ತಮಿೞೋ ಎಂದುಕೊಳ್ಳುತ್ತಾರೆ. ಆದರೆ ಹೞಗನ್ನಡದ ಕವಿರಾಜಮಾರ್ಗಕಾರ, ಪಂಪ, ರನ್ನ, ಪೊನ್ನ, ನಾಗಚಂದ್ರ ಎಲ್ಲರೂ ಈ ಉತ್ತರಕರ್ಣಾಟಕದವರೇ ಎಂದರೆ ಒಮ್ಮೆಗೆ ಆಶ್ಚರ್ಯವಾಗುತ್ತದೆ. ಹಾಗೆಯೇ ತೊಱವೆ (ಬಿಜಾಪುರ) ನರಹರಿ ಬರೆದ ತೊಱವೆ ರಾಮಾಯಣ ಮತ್ತು ಗದುಗಿನ ನಾರಣಪ್ಪ ಬರೆದ ಕನ್ನಡ ಭಾರತವನ್ನು ಓದುವವರು ಹಾಗೂ ಅದಱಲ್ಲಿ ಆಸಕ್ತಿ ತೋಱಿಸುವವರು ದಕ್ಷಿಣ ಕರ್ಣಾಟಕದವರು. ಅಲ್ಲಿ ಇಲ್ಲಿ ಕೆಲವರು ಇರಬಹುದೇನೋ? ಆದರೆ ಹೆಚ್ಚಿನಂತೆ ಇವುಗಳಲ್ಲಿ ಆಸಕ್ತಿ ತೋಱುವವರು ದಕ್ಷಿಣ ಕರ್ಣಾಟಕದವರು. ಇದು ಹೀಗೇಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಸಗನ್ನಡದಲ್ಲಿ ಱ ೞ ಪ್ರಯೋಗ ಬಹಳ ಕಡಿಮೆ. ನಾನು ಗಮನಿಸಿದಂತೆ ನೀವು ರ ಳ ಬಳಸಬಹುದಾದ ಬಹಳಷ್ಟು ಕಡೆ ಱ ೞ ಬಳಸುತ್ತೀರಿ. ಹೀಗೇಕೆ?
ಕೀರ್ತಿ ಕಿರಣ್ ಎಂ

ಮುಂಚೆ ಕನ್ನಡದಲ್ಲಿ ತಮಿೞು, ಮಲಯಾಳಂನಂತೆ ’ಱ’ ಮತ್ತು ’ರ’, ಹಾಗೆಯೇ ’ೞ’ ಮತ್ತು ’ಳ’ ನಡುವೆ ಉಚ್ಚಾರವ್ಯತ್ಯಾಸವಿತ್ತು ಉದಾಹರಣೆಗೆ ಬಾಳ್=ಕತ್ತಿ, ಬಾೞ್=ಬದುಕು, ಹಾಗೆಯೇ ಬಾೞೆ=ಒಂದು ಹಣ್ಣು (Banana) ಆದರೆ ಬಾಳೆ=ಮೀನು. ಸೆರೆ=ಸೇಂದಿ, ಸೆಱೆ=ಜೈಲು(jail) ಹಾಗೆಯೇ ನಾಱು=ವಾಸನೆ ಬೀಱು, ನಾರು=ಸಸ್ಯದ ಕಾಯಿ ಹಣ್ಣು ಇತ್ಯಾದಿಗಳ ಭಾಗದಲ್ಲಿ ಎಳೆಯಂತೆ (ನೂಲಿನಂತೆ) ಬಿಡಿಸಬಹುದಾದ ಭಾಗ. ಉದಾಹರಣೆಗೆ: ಹೂವು ಘಮ್ಮೆಂದು ನಾಱುತ್ತದೆ. ಹೂವಿನ ಜೊತೆ ನಾರೂ ತಲೆಯೇಱಿತು.

ತಾವು ಇತ್ತೀಚಿಗೆ ಈ ಎರಡು ಅಕ್ಷರಗಳ ಬಳಕೆ ಕಡಿಮೆಯಾಉತ್ತಿದೆ ಅನ್ನುತ್ತಿದ್ದೀರೊ ಅಥವಾ ಅನುಗಾಲದ ಮಾತು ಹೇಳುತ್ತಿದ್ದೀರೊ?
ನನಗೆ ತಿಳಿದಿರೊ ಮಟ್ಟಿಗೆ ಇತ್ತೀಚಿನ ದಶಕಗಳಲ್ಲಂತೂ ಇವುಗಳ ಬಳಕೆ ನಿಂತೇ ಹೋಗಿದೆ.(ನೀವು ಬಳಸುತ್ತೀರಿ ಗೊತ್ತು).
ಒಂದು ಮಾತು ನಿಮ್ಮೆಲ್ಲರನ್ನು ಕೇಳಬೇಕಿದೆ, ಸಂಪದದ ಬಳಗಕ್ಕೆ ಸೇರಿದಾಗಲಿಂದ ಗಮನಿಸುತ್ತಿದ್ದೇನೆ,ನೀನು ಮಂಡ್ಯದವನು,ನೀನು ಮೈಸೂರಿನವನು,ನೀನು ಉತ್ತರ ಕರ್ನಾಟಕದವನು, ನಮ್ಮಲ್ಲಿ ಹಾಗೆ,ನಿಮ್ಮಲ್ಲಿ ಹೀಗೆ ಅಂತ ಮಾತಾಡ್ತೀರಿ(ಜಗಳಡ್ತೀರಿ!). ಕರ್ನಾಟಕವನ್ನೆ ಹೀಗೆ ಭಾಗ ಮಾಡಿಕೊಂಡು ಮಾತಾಡೋದು,ವರ್ಗೀಕರಣ ಎಷ್ಟು ಸರಿ? ನಮ್ಮಲ್ಲೆ ಒಗ್ಗಟ್ಟಿಲ್ಲವೆಂದಾದರೆ ಏನು ಚೆಂದ?
ಜಯಲಕ್ಷ್ಮೀ.ಪಾಟೀಲ್.

ನಾನು ಆ ತೆಱನಾಗಿ ವಿಂಗಡಣೆ ಮಾಡುತ್ತಿದ್ದೀನೆಂದು ನೀವು ತಿಳಿಯುವುದಾದರೆ ದಯವಿಟ್ಟು ಮನ್ನಿಸಿ. ಈ ವಿಶಾಲ ಕರ್ಣಾಟಕದ ಏಕೀಕರಣಕ್ಕೆ ಹೋರಿದವರೆ ಹೆಚ್ಚಾಗಿ ಧಾರವಾಡ ಮುಂತಾದ ಉತ್ತರಭಾಗದವರು. ನಮ್ಮ ಹೞಗನ್ನಡದ ಅನೇಕ ಕವಿಗಳು ಈ ಭಾಗದವರೇ. ಹೀಗಿದ್ದು ಈ ಭಾಗದವರ ಹೞೆಯ ಕೊಂಡಿ ಕಳಚಿತೇಕೇ? ಶ್ರೀಕಾಂತ ಮಿಶ್ರಿಕೋಟಿ ಅವರಂತೂ ಒಂದು ಹೆಜ್ಜೆ ಮುಂದುಹೋಗಿ ಯಾಕಾದರೂ ಇನ್ನು ಈ ’ಱ’ ಮತ್ತು ’ೞ’ಗಳನ್ನು ಲೇಖನಗಳಲ್ಲಿ ಬೞಸುತ್ತಾರೋ ಎಂದರು. ಗದುಗಿನ ನಾರಣಪ್ಪ, ತೊಱವೆ ನರಹರಿ, ಪಂಪ, ರನ್ನ, ಪೊನ್ನ, ನಾಗಚಂದ್ರ, ಕವಿರಾಜಮಾರ್ಗಕಾರರು ಬೞಸಿದ ಈ ’ಱ’ ಮತ್ತು ’ೞ’ ಗಳೇಕೆ ನಿಮಗೆ ಅಪರಿಚಿತವಾದವು ಎಂಬುದೇ ನನ್ನ ಪ್ರಶ್ನೆ. ಇವರೆಲ್ಲ ಈ ಭಾಗದ ಜನರೇ. ಇವರೆಲ್ಲ ಕನ್ನಡದಲ್ಲೆ ಅತ್ಯುನ್ನತ ಗ್ರಂಥಗಳನ್ನು ಬರೆದವರು.

"ಶ್ರೀಕಾಂತ ಮಿಶ್ರಿಕೋಟಿ ಅವರಂತೂ ಒಂದು ಹೆಜ್ಜೆ ಮುಂದುಹೋಗಿ ಯಾಕಾದರೂ ಇನ್ನು ಈ ’ಱ’ ಮತ್ತು ’ೞ’ಗಳನ್ನು ಲೇಖನಗಳಲ್ಲಿ ಬೞಸುತ್ತಾರೋ ಎಂದರು."

ಅಯ್ಯೋ ಅದನ್ನೇನು ಕೇಳ್ತೀರಾ ?
ಒಬ್ರಿಗಂತೂ ಈ ’ಱ’ ಮತ್ತು ’ೞ’ಗಳನ್ನು ತೆಗೆದು ಹಾಕಿದ್ದು ನಾನೇ ಅಂತ ಗುಮಾನಿ :)

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

"ನಾನು ತಿಳಿದಂತೆ, ವಿಚಾರಿಸಿದಂತೆ, ಉತ್ತರ ಕರ್ಣಾಟಕದವರಿಗೆ ಹೞಗನ್ನಡದ ವಿಚಾರವಾಗಿ ಗೊತ್ತಿರುವುದು ಕಡಿಮೆ. "

ಉತ್ತರದಲ್ಲಿ , ದಕ್ಷಿಣದಲ್ಲಿ ಎಷ್ಟೆಷ್ಟು ಜನರನ್ನು , ಯಾರ್ಯಾರನ್ನು ವಿಚಾರಿಸಿದಿರೋ ?

ನಾನು ಹೇಳ್ತೇನೆ .
"ದಕ್ಷಿಣ ಕರ್ನಾಟಕದವರಿಗೆ ಅ , ಆ ಅನ್ನಲು ಬರಲ್ಲ ; ಆ ಆ ಅಂತಾರೆ " ಏನಂತೀರಿ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನೀವೇ ಈ ಮುಂಚೆ ನಮ್ಮ ’ಱ’ ಮತ್ತು ’ೞ’ ಬಗ್ಗೆ ಅಸಹನೆ ತೋಱಿದವರು. ಗದುಗಿನ ಭಾರತ ಓದಿ. ಅದಱಲ್ಲಿ ಬರುವ ’ಱ’ ಬೞಸಿರುವ ಅಕ್ಷರಗಳ ಪಟ್ಟಿ ಮಾಡಿ. ಹಾಗೆಯೇ ಪಂಪನ ಇವನೇ ಹೇೞುವಂತೆ ಇವನ ಕನ್ನಡ ರಾಜತ್ಸುರಾಜ್ಯಧಾಬಿಯಾದ ಪುಲಿಗೆಱೆಯ ಸಾಜಗನ್ನಡದಲ್ಲಿ ಹೇೞುತ್ತಾನಂತೆ. ಇವನ ಕಾವ್ಯಗಳಲ್ಲಿ ಬರುವ ’ಱ’ ಮತ್ತು ’ೞ’ ಇರುವ ಶಬ್ದಗಳನ್ನೆಲ್ಲ ಪಟ್ಟಿ ಮಾಡಿ.

ಹಾಗೆಯೇ ನನಗೆ ಹೞಗನ್ನಡ ಕಲ್ಕೆಯಲ್ಲಿ ಸಹಾಯ ಮಾಡಲು ನನ್ನ ’ಱ’ ಮತ್ತು ’ೞ’ ಬಗ್ಗೆ ಇನ್ನೂ ಹೆಚ್ಚು ತಿಳಿಸುವ ಉತ್ತರ ಕರ್ಣಾಟಕದ ಗೆಳೆಯನಿನ್ನೂ ಸಿಕ್ಕಿಲ್ಲ.

ಹೞಗನ್ನಡದಲ್ಲಿ ಕಲ್ಕೆ, ಕಾಣ್ಕೆ, ನುಣ್ಪು ಇತ್ಯಾದಿ. ಇವೆಲ್ಲ ನಮಗೆ ರೂಢಿಸಿದ ಪದಗಳು. ಅವಂ ಹೆಚ್ಚು ಕಲ್ತವನಲ್ಲ ಎಂದೇ ಹೇೞೋದು. ಕಲಿತವನಲ್ಲ ಎಂತಲ್ಲ. ಹಾಗೆಯೇ ಹೇೞ್ಕೆ, ಕೇಳ್ಕೆ ಹೇಗೆ ಏೞ್ಗೆ (ಏೞಿಗೆ) ಇದೆಯೋ ಹಾಗೆ. ನೀವೇನಂತೀರಾ? ಹೇಳ್ ನ ದುಃಖಂ ಪಂಚಭಿಸ್ಸಹವೆನ್ನದೇ ವಚನ ಎಂದ ಗದುಗಿನ ನಾರಣಪ್ಪ.

ನೀವು ೨೦ನೇ ಶತಮಾನದಲ್ಲೇ ಹುಟ್ಟಿದ್ದಾ ಅಥವಾ ಪಂಪನ ಕಾಲದಿಂದ ಟೈಮ್ ಮಷೀನಿನಲ್ಲಿ ಇಲ್ಲಿಗೆ ಬಂದಿದೀರಾ?
ಕೀರ್ತಿ ಕಿರಣ್ ಎಂ

ನೋಡಿ. ನಿಮ್ಮ ಈ ಹೞೆಯದನ್ನು ಕಲಿಯಬೇಕೆಂಬ ಹಂಬಲ ಇಲ್ಲದಿರುವುದು. ಹಾಗೆಯೇ ಸುತ್ತಲಿನ ಜಗತ್ತನ್ನು ನೋಡಿದರೆ ನಿಮ್ಮ ದೃಷ್ಟಿ ಸಂಕುಚಿತವಾಗುತ್ತದೆ. ಮನುಷ್ಯ ಸುತ್ತಲಿನ ಎಲ್ಲವನ್ನೂ ಆಪೋಷಣ ಮಾಡಿಕೊಳ್ಲಬೇಕು.

ನೋಡ್ರೀ ,
ನನಗೇನೂ ಅಸಹನೆ ಇಲ್ಲ .
ಸದ್ಯ ಬಳಕೇಲಿ ಇಲ್ಲ ;ನೂರು ವರ್ಷದಿಂದಂತೂ ಯಾರೂ ಪ್ರಿಂಟು ಮಾಡ್ತಾ ಇಲ್ಲ ;
ಹಿಂದೆ ಅವನ್ನ ಯಾರು ಬಿಟ್ರೋ ಯಾಕೆ ಬಿಟ್ರೋ ನಂಗಂತೂ ಗೊತ್ತಿಲ್ಲ .
ಬಳಕೇಲಿ ಇಲ್ಲದ್ದನ್ನು ನೋಡಿದ್ರೆ ಓದೋಕೆ ತೊಂದ್ರೆ ಆಗುತ್ತೆ ಅಂತ ಅಷ್ಟೇ ನನ್ನ ಅಭಿಪ್ರಾಯ .

ಧಾರಾಳವಾಗಿ ಬಳಸಿ . ಬಳಸೋರ ಇಷ್ಟ .
ಇನ್ನು ಮುಂದೆ ನನ್ನದೇನೂ ತಕರಾರಿಲ್ಲ ;
ಮಹಾಪ್ರಾಣ ಬಿಡುವ ವಿಚಾರಕ್ಕೂ ಇದೇ ಮಾತು ಇವತ್ತು ಹೇಳ್ತೇನೆ . ಆಯ್ತಾ?
ಯಾರಿಗಾದ್ರೂ ಬೇಜಾರಾಗಿದ್ರೆ ಮನ್ನಿಸಿಯಪ್ಪಾ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಮಹಾಪ್ರಾಣ ಅಲ್ಪಪ್ರಾಣ ಒಂದೇ ಅಲ್ಲ. ಯಾರೇನೇ ಹೇೞುದ್ರೂ ಆಸೆಯೇ. ಪ್ರಾಣ ಬುಟ್ಟೇನು? ’ಱ’ ’ೞ’ ಬಿಡಂಗಿಲ್ಲ ನೋಡ್ರಿ ಮತ್ತೆ. ಅಂವ ಯಾವ್ನಾದ್ರೂ ಬಾಂಬ್‍ ಹಾಕಿ ಸುಡ್ಲಿ ನನ್ನ ನೋಡುಮ.

ನೋಡ್ರೀ ,
ನನಗೇನೂ ಅಸಹನೆ ಇಲ್ಲ .
ಸದ್ಯ ಬೞಕೇಲಿ ಇಲ್ಲ ;ನೂಱು ವರ್ಷದಿಂದಂತೂ ಯಾರೂ ಪ್ರಿಂಟು ಮಾಡ್ತಾ ಇಲ್ಲ ;
ಹಿಂದೆ ಅವನ್ನ ಯಾರು ಬಿಟ್ರೋ ಯಾಕೆ ಬಿಟ್ರೋ ನಂಗಂತೂ ಗೊತ್ತಿಲ್ಲ .
ಬೞಕೇಲಿ ಇಲ್ಲದ್ದನ್ನು ನೋಡಿದ್ರೆ ಓದೋಕೆ ತೊಂದ್ರೆ ಆಗುತ್ತೆ ಅಂತ ಅಷ್ಟೇ ನನ್ನ ಅಭಿಪ್ರಾಯ .

ಧಾರಾಳವಾಗಿ ಬೞಸಿ . ಬೞಸೋರ ಇಷ್ಟ .
ಇನ್ನು ಮುಂದೆ ನನ್ನದೇನೂ ತಕರಾರಿಲ್ಲ ;
ಮಹಾಪ್ರಾಣ ಬಿಡುವ ವಿಚಾರಕ್ಕೂ ಇದೇ ಮಾತು ಇವತ್ತು ಹೇೞ್ತೇನೆ . ಆಯ್ತಾ?
ಯಾರಿಗಾದ್ರೂ (ಬೇಜಾರಾ)ಬೇಸಱಾಗಿದ್ರೆ ಮನ್ನಿಸಿಯಪ್ಪಾ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಇದನ್ಣ ವಸಿ ನೋಡಿ. ಆಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ
’ಱ’ ಕಾರಕ್ಕೆ
ಕನ್ನಡಕಂದ ಬಱಿ ’ಱ’ ಮತ್ತು ’ೞ’ ಕುಱಿತೇ ಮಾತಾಡುತ್ತಾನೆ. ಅವನಿಗೇನ್ ಬೇಱೆ ಕೆಲಸವಿಲ್ಲವಾ? (ನೀವು ಅಸಡ್ಡೆ ತೋಱಿ ಈ ’ಬಱಿ’ ಮತ್ತು ’ಬೇಱೆ’ ಶಬ್ದಗಳನ್ನು ನಾಲಿಗೆ ನಡುಗಿಸಿ ಉಲಿಯುತ್ತೀರಾ?
ಅಂತಹ ಕಱ್ಱನೆ ಕಱಿಯನ್ನ ಹೇಗೆ ಮದುವೆಯಾಗಲಿ ಹೇೞೆ?
ಇದೊಂದು ಮಗು ಬಱಿ ’ಬಟಱ್’ ಅಂತ ಭೇದಿ ಮಾಡಿಕೊಳ್ಳುತ್ತೆ. ಕಿಱ್ ಅಂತ ಕಿಱುಚತ್ತೆ.
ಅವನ್ಣ ನೋಡು ಹೇಗೆ ಮಜ್ಜಿಗೆಯನ್ನು ಸುಱ್ ಅಂತ ಸುಱಿತಾನೆ. ಹಾಗೇ ಗೊಱ್ ಅಂತ್ನೂ ಗೊಱಕೆ ಹೊಡೆಯುತ್ತಾನೆ. ಅದಕ್ಕೇ ಏನೋ ಈ ಗಾದೆಯೇನೋ? ’ಸುಱಿದುಣ್ಣಬೇಕು. ಗೊಱೆದು ನಿದ್ದೆ ಮಾಡಬೇಕು’. (ಇಲ್ಲಿ ಸುಱಿ ಎಂದರೆ ಸುಱ್ ಅಂತ ಹೀರು)

ಹಕ್ಕಿ ಪುಱ್ ಎಂದು ಹಾಱಿತು.
ಬಸು ಬುಱ್ ಎಂದು ಹೊಱಟಿತು.
ಮಗು ಪಱ್ ಎಂದು ಹಾಳೆ ಹಱಿಯಿತು.

ೞ ಕಾರಕ್ಕೆ

ಗೞಗೞನೆ ಗುೞುಗುೞುವೆನುತುಂ ಪರಿವವೊನಲ್ ಸೊಗಯಿಸುಗುಂ
ಪೆರ್ಜುೞಿಯೊಳ್ ಪೊೞೆ ಜುೞುಜುೞುವೆನುತುಂ ಪರಿವುದು
ಗೞಗೞನೆ ಗೞಪುವನ ನುಡಿಗೇಳವೇಡ.
ಪೞಪೞವೆಂದು ಗಾಜು ಒಡೆಯಿತು
ಗಗನಸ್ಥಳದಿಂದುಡುಗಳ್ ಪೞಪೞನುದುರ್ವವೊಲ್ ಎಡೆವಿಡದಿೞಿವ ಆಲಿವರಲ ಮೞೆ.
(ಆಕಾಶದಿಂದ ನಕ್ಶತ್ರಗಳು ಪೞಪೞನೆ ಉದುರುವ ಹಾಗೆ ಆಲಿಹರಳ (ಆಲಿಕಲ್ಲಿನ) ಮೞೆ.

ಇಲ್ಲೆಲ್ಲ ’ಱ’ ರದ ತೆಱ ಉಚ್ಚರಿಸಲಾಗದು. ಹರಿವ ನದಿ ’ಜುೞುಜುೞು’ ಕೂಡ ನಾವುಚ್ಚರಿಸುವ ಜುಳುಜುಳುವಲ್ಲ. ಅದು ಜುೞುಜುೞು (ಕೇಳಿ ನೋಡಿ)

ಕನ್ನಡ ಕನ್ದರೇ,

ನಿಮ್ಮ ಕನ್ನಡ ಪ್ರೇಮ ಖುಷಿ ಕೊಟ್ಟಿದೆ. ನೀವು ಗಮನಿಸಬೇಕಾದ ಇನ್ನೊನ್ದು ಮಹತ್ವದ ಸಙ್ಗತಿ ಇದೆ - ಕನ್ನಡ ಬರವಣಿಗೆಯ ಬಗೆಗಿನದು. ಅದು "ಂ" ಯ ಬಳಕೆ. ಏಲ್ಲೆಲ್ಲಿ "ಙ್", "ನ್", "ಣ್", "ಮ್" ಉಪಯೋಗಿಸಬೇಕೋ ಅಲ್ಲೆಲ್ಲಾ ನಾವು "ಂ"ಉಪಯೋಗಿಸುತ್ತಿದ್ದೇವೆ. ದೇವನಾಗರಿಯಲ್ಲಿ ಹೀಗಿಲ್ಲ. ಇಙ್ಗ್ಲಿಷ್ ನಲ್ಲಿ ಹೀಗಿಲ್ಲ. ಕನ್ನಡದಲ್ಲಿ ಈ ತಪ್ಪು ಬರಹ ಏಕೆ?

ಉದಾಹರಣೆ: ಅಂಕ (ಇದು ಅಮ್ಕ ಎನ್ದಾಗುತ್ತೆ)--> ಅಙ್ಕ ಹಾಗೇ ಕಂಬ--> ಕಮ್ಬ ಆನಂದ--> ಆನನ್ದ ಅಂಚೆ--> ಅಞ್ಚೆ ಇತ್ಯಾದಿ.

ಏನನ್ತೀರ?

ದತ್ತಾತ್ರಿ

ನೀವು ಹೇೞುವುದೇ ಸರಿ. ಆದರೆ ಇದನ್ನಾಗಲೆ ರೂಢಿಸಿಕೊಂಡು ಬಿಟ್ಟಿದ್ದೇವೆ. ನಮಗೆ (ಕನ್ನಡಕ್ಕೆ ಹೆಚ್ಚಾಗಿ ತೆನ್ನುಡಿಗಳಿಗೇ) ಅನುಸ್ವಾರ ವಿಸರ್ಗವಿರದಿದ್ದರೂ ಕೆಲವರು ’ಙ’ ’ಞ’ ಬಿಡಬೇಕೆನ್ನುತ್ತಾರೆ. ಅವರಿಗೆ ನಾನು ಇವನ್ನೆಲ್ಲ ಬಿಡಲಾಗದು ಅಂಕ ಎನ್ನುವಾಗ ನಿಜವಾಗಿ ಅಙ್ಕವೆನ್ನುತ್ತೇವೆ. ಹಾಗೆಯೇ ನಂಜು, ಮಂಜು ಇಲ್ಲೆಲ್ಲಾ ನಿಜವಾಗಿ ನಞ್ಜು ಮತ್ತು ನಞ್ಜು ಎಂದೇ ಇರುವುದೆಂದಿದ್ದೇನೆ. (ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ ಈ ಲೇಖನದಡಿಯಲ್ಲಿ ನನ್ನ ವಿಚಾರ ಓದಿ). ಹಾಗೆಯೇ ಕುಂದಾಪುರದ ಕಂದಾವರ ಬ್ರಾಹ್ಮಣರು ಕಿಱುನಾಲಿಗೆಗೆ ಕುಞ್ಞಾಲಿಗೆ ಎಂದಾಗ ಅವರ ಭಾಷೆಯೂ ಕನ್ನಡವೇ ಆದಾಗ ಆ ಒಂದೇ ಪದವಿರಲಿ ಅದನ್ನು ಬಿಡಲಾಗದು. ಹಾಗಾಗಿ ಕನ್ನಡಕ್ಕೆ ಅನುಸ್ವಾರ ವಿಸರ್ಗಕ್ಕಿಂತ ಅನುನಾಸಿಕಗಳಾದ ಙ್, ಞ್, ಣ್,ನ್,ಮ್‍ ಗಳು ತೀರಾ ಅಗತ್ಯವಾಗಿವೆ. ದುಃಖಕ್ಕೆ ದುಕ್ಕವೆನ್ನಬಹುದು. ಸಿಂಹಕ್ಕೆ ಸಿಮ್ಮವೆನ್ನಬಹುದು. ಆದರೆ ನಂಜು ತಪ್ಪು ನಞ್ಜು ಸರಿ. ಆದರೆ ಹೞಗನ್ನಡಕಾಲದಿಂದಲೇ ಅನುಸ್ವಾರ ವಿಸರ್ಗಗಳ ಬೞಕೆಯಿದೆ.

ಪೂರ್ವದ ಹೞಗನ್ನಡದಲ್ಲಿ ಈ ತೆಱನಾಗಿಯೇ ಇರುವುದು. ಅಲ್ಲೆಲ್ಲ ಅಙ್ಕವೆಂದೇ ಹೇಳುವುದು. ಸಿ ಮರಿಜೋಸೆಫ್‍ರ ’ಸಲ್ಲೇಖನ’ ಕ್ಕೆ ನನ್ನ ಪ್ರತಿಕ್ರಿಯೆ ನೋಡಿ. ಅಲ್ಲಿ ನಾನು ಪೂರ್ವದ ಹೞಗನ್ನಡದ ಶಾಸನವೊಂದನ್ನು ಹೇಗೇ ’ಕನ್ನಡಶಾಸನಸಂಗ್ರಹ’ ಉಲ್ಲೇಖಿಸಿದೆಯೋ ಅದೇ ತೆಱನಲ್ಲಿ ಬರೆದಿದ್ದೇನೆ. ಉತ್ತರಿಸಿದ್ದೇನೆ. ಸಾಮಾನ್ಯ ಹೞೆಯ ಶಾಸನಗಳಲ್ಲಿ ಅನುಸ್ವಾರ, ವಿಸರ್ಗಗಳ ಉಪಯೋಗ ಕಡಿಮೆ.

ಉಚ್ಚರಿಸಲು ಕಷ್ಟವೆಂದೋ ಅಥವಾ ಕೇಳಲು ಒಂದೇ ಅಕ್ಷರದ ತೆಱ ಕಾಣುತ್ತದೆಂಬ ಕಾರಣಕ್ಕೆ ಕೆಲವು ಅಕ್ಷರಗಳನ್ನು ಬಿಡುವುದು ವಿಕಾಸದ ಲಕ್ಷಣವಲ್ಲ. ಕೆಲವು ವೇಳೆ ಅವನತಿಯ ಲಕ್ಷಣ. ಬಾಳ್‍ ಮತ್ತು ಬಾೞ್‍ ನಡುವಿನ ಉಚ್ಚಾರವ್ಯ್ತತ್ಯಾಸ ಹಾಗೂ ಅರ್ಥವ್ಯತ್ಯಾಸ ಗೊತ್ತಾಗದೆ ಕೆಲವು ಪದಗಳನ್ನು ಬಿಟ್ಟು ಬಿಡುತ್ತೇವೆ. ಕೆಲವು ವೇಳೆ ನೆಱವು ಮತ್ತು ನೆರವು ಈ ಶಬ್ದಗಳ ಅರ್ಥವ್ಯತ್ಯಾಸ ಕೂಡ ಗೊತ್ತಾಗದು. ಹಾರ್=ನೋಡು ಎಂಬ ಅರ್ಥ ಕೈಬಿಟ್ಟಿದ್ದೇವೆ. ಹಾಱ್=ಹಕ್ಕಿಯಂತೆ ಹಾಱ್(ರ್) ಎಂಬ ಬೞಕೆಯೊಂದೇ ನಮಗೆ ಗೊತ್ತಿರುವುದು. ಈ ವ್ಯತ್ಯಾಸದಂತೆ ಕೃ ಮತ್ತು ಕ್ರು ಕೃಷ್ಣ ಎಂದೂ ಕ್ರುಷ್ಣ ಆಗದು. ವಿಷಯ ಎಂದೂ ವಿಶಯವಾಗದು. ’ಷ’ ಕ್ಕೆ ’ಶ’ ಬೞಕೆ ’ಱ’ ಕ್ಕೆ ’ರ’, ಋ ಗೆ ರು ಹಾಗೆಯೇ ೞ ಕ್ಕೆ ಳ ಬೞಕೆಯನ್ನು ನಾನು ಅವನತಿಯೆಂದೇ ಭಾವಿಸುತ್ತೇನೆ. ಆದರೆ ವಿಷಯದ ಬದಲು ಬಿಸಯ ಅಥವಾ ಬೆಸಯ(ಬೆಸ)ವೆಂದರೆ ಒಪ್ಪುತ್ತೇನೆ. ಅಲ್ಲಿ ನಮ್ಮ ಕನ್ನಡತನ ಮೈವೆತ್ತಿದೆ.

ಹಾಗೇನೂ ಸಿಗಿದುಹಾಕೋಲ್ಲ ಸ್ವಾಮಿ. ಈ ನನ್ನ ಪರಿಕಲ್ಪನೆ ನೀವೂ ಬೇಱೆ ಜನಗಳಿಗೆ ವರ್ಗಾಯಿಸಿ ಎಂಬ ಪ್ರಾಮಾಣಿಕ ಕಳಕಳಿಕೆ ಅಷ್ಟೆ. ಅಕ್ಸಸ್ಮಾತ್, ತಮಿೞ್‍ಮಲೆಯಾಳಿಗರು ಈ ಱ ಮತ್ತು ೞ ನಮ್ಮ ಭಾಷೆಯಲ್ಲಿರೋದು ಎಂದ್ರೆ ಅವರನ್ನು ಹಿಗ್ಗಾಮುಗ್ಗ ಮಾಡಿ ಕನ್ನಡದಲ್ಲೂ ಇದೆ ಅಂತ ವಾದಿಸಿ ಸ್ವಾಮಿ. ಕನ್ನಡದ ಸ್ವರೂಪ ತಿಳಿಸುವಲ್ಲಿ ನನ್ನ ಅಳಿಲ್ಜತನ ಅಷ್ಟೆ.