ಸ೦ಪದದಲ್ಲಿ ಲೇಖನಗಳನ್ನ ಬರೆಯೋದಕ್ಕಿ೦ತ ಬೇರೆಯವರ ಬರಹಗಳಿಗೆ ಕಾಮೆ೦ಟ್ ಬರೆಯೋದೆ ಖುಶಿ ತರುತ್ತೆ ನನಗೆ...

0

ಸ೦ಪದದಲ್ಲಿ ಲೇಖನಗಳನ್ನ ಅಥವ ಬೇರಾವ article ಬರೆಯೋದಕ್ಕಿ೦ತ ಬೇರೆಯವರ ಬರಹಗಳಿಗೆ ಕಾಮೆ೦ಟ್ ಬರೆಯೋದೆ ಖುಶಿ ತರುತ್ತೆ ನನಗೆ...

ನೀವುಗಳೇನ೦ತೀರಾ?

ನಿಮ್ಮವ,

ಕ್ರಿಸ್ನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ೌದು,ಸ್ವತ: ಬರೆದಾಗ ಯಾರೂ ಕ್ಯಾರೇ ಅನ್ನುವುದಿಲ್ಲ. ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯೆ ಸಿಗುತ್ತೆ. :)
*ಅಶೋಕ್

ಅಶೋಕ್,
ನೀವು ಹೇಳಿದ್ದು ನೂರಕ್ಕೆ ನೂರು ಸರಿ...
ನಾವೇ ಸ್ವತಃ ಲೇಖನ, ಬ್ಲಾಗ್ ಬರೆಯೋದಕ್ಕೆ ತಲೆ ಕೆಡಸಿಕೊಂಡರೂ ಎನೂ ತೋಚುವುದಿಲ್ಲ...
At least ಇತರರ ಪ್ರತಿಕ್ರಿಯೆ ನೋಡಿ ನನ್ನ ತಲೆಗೆ ಎನಾದರೂ ಹೊಳಿಯುತ್ತೆ...
ಆಗ ಪ್ರತಿಕ್ರಯೆ ನೀಡಲು ಅನುಕೂಲವಾಗುತ್ತೆ... :-)

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

ಅಶೋಕ್,
ನೀವು ಹೇಳಿದ್ದು ನೂರಕ್ಕೆ ನೂರು ಸರಿ...
ನಾವೇ ಸ್ವತಃ ಲೇಖನ, ಬ್ಲಾಗ್ ಬರೆಯೋದಕ್ಕೆ ತಲೆ ಕೆಡಸಿಕೊಂಡರೂ ಏನೂ ತೋಚುವುದಿಲ್ಲ...
At least ಇತರರ ಪ್ರತಿಕ್ರಿಯೆ ನೋಡಿ ನನ್ನ ತಲೆಗೆ ಎನಾದರೂ ಹೊಳಿಯುತ್ತೆ...
ಆಗ ಪ್ರತಿಕ್ರಯೆ ನೀಡಲು ಅನುಕೂಲವಾಗುತ್ತೆ... Smiling

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

ತಮಾಷೆಗೆ.. ಬೊಗಳಿ ಬೊಗಳಿ ರಾಗ ನಿಜ ಆಗಿದ್ರೆ ನಮ್ಮ ಪಕದ್ ಮನೆ ನಾಯಿ ಈಗ ಯವ್ದಾದರು TVಷೊ ನಲ್ಲಿ ಬರ್ಬೇಕಿತ್ತು ಕಣ್ರಿ..:)

ಅಯ್ಯೋ ನೀವು ಗಮನಿಸಿಲ್ಲ..ನಿಮ್ಮ ಪಕ್ಕದ ಮನೆ ನಾಯಿಯ ಶೋ ನಿನ್ನೆ ಪ್ರಸಾರವಾಗ್ತಿತ್ತು... :)
*ಅಶೋಕ್

ನೀವು ನೊಡಿ ಟಿವಿ ಅಂತ ಅಂದುಕೊಡಿರೊದು ನಿಮ್ಮ ಮನೆ ಕಿಟಕಿನ..ಅದು ನಮ್ಮ ಮನೆ ಪಕ್ಕದ ನಾಯಿ ಅಲ್ಲ ನಿಮ್ಮ ಮನೇದು ಇರ್ಬೇಕು..:)

ನಮ್ಮ ಟಿವಿ ಇರೋದು ಏಸಿ ರೂಮಲ್ಲಿ...ಯಾವಾಗ್ಲೂ ಕ್ಲೋಸು...ಹೊರಗೆ ನೋಡಿ ಮಿಸ್ಟೇಕ್ ಮಾಡೋ ಪ್ರಮೇಯವಿಲ್ಲ..
(ನಾನು ಚಾಪೆ ಕೆಳಗೆ ..ಅಂದ್ರೆ ನೀವು ರಂಗೋಲಿ ಕೆಳಗೆ... :) )
*ಅಶೋಕ್

ಅದು ಹಾಡ್ತಾ ಹಾಡ್ತಾ ರಾಗ, ಉಗುಳ್ತಾ ಉಗುಳ್ತಾ ರೋಗ ಅಲ್ವಾ?

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

"ನರಳಿ ನರಳಿ ರೋಗ, ಬೊಗಳಿ ಬೊಗಳಿ ರಾಗ" ಎಂಬ ರೂಪದಲ್ಲೂ ಆ ನಾಣ್ಣುಡಿ ಚಾಲ್ತಿಯಲ್ಲಿದೆ. ಈಗಿನ ಬ್ಲಾಗಿಂಗ್ ಸಂದರ್ಭದಲ್ಲಿ ಅದನ್ನು "ಬೊಗಳಿ ಬೊಗಳಿ ಬ್ಲೋಗ್-ಅ" ಎಂದೂ ಟ್ವಿಸ್ಟಿಸಬಹುದು! :-)

[quote]"ಬೊಗಳಿ ಬೊಗಳಿ ಬ್ಲೋಗ್-ಅ"[/quote]
:) :)
ನಾನು ಕೇಳಿದಂತೆ ಗಾದೆ:
ಬೊಗಳಿ ಬೊಗಳಿ ರಾಗ..ಉಗುಳಿ ಉಗುಳಿ ರೋಗ
*ಅಶೋಕ್

ಅದು "ನರಳಿ ನರಳಿ ರೋಗ" ಎಂದು ಇರುವುದೇ ಹೆಚ್ಚು ಸಮಂಜಸವೆನಿಸುತ್ತದೆ. ಹೇಗೆಂದರೆ, ಒಬ್ಬನು ಕಾರಣವಿಲ್ಲದೆ ನರಳುವ ನಾಟಕವಾಡುತ್ತಿದ್ದನಂತೆ. ಹಾಗೆ ವಿನಾಕಾರಣ ನರಳುವುದು ಅವನಿಗೆ ಅಭ್ಯಾಸವೇ ಆಗಿಹೋಯಿತಂತೆ, ಕೊನೆಗೆ ಅವನಿಗೆ ರೋಗವೇ ಬಂತಂತೆ. ಅಂತೆಯೇ ಬೊಗಳುವವನ ಕತೆ. ಏನೋ ಸುಮ್ಮನೆ ಬೊಗಳುವ ಅಭ್ಯಾಸ ಶುರುಹಚ್ಚಿದ. ಅದು ಹಾಗೆಯೇ ಮುಂದುವರೆಯಿತು, ಒಳ್ಳೆಯ ರಾಗವಾಗಿ ಪರಿವರ್ತನೆಯಾಯಿತು!

"ಉಗುಳಿ ಉಗುಳಿ ರೋಗ" ಎನ್ನುವುದು "ಬೊಗಳಿ ಬೊಗಳಿ ರಾಗ"ಕ್ಕೆ ಧ್ವನಿಪ್ರಾಸವೇನೋ ಆಗುತ್ತದಾದರೂ ಅರ್ಥದಲ್ಲಿ "ನರಳಿ ನರಳಿ ರೋಗ"ದಷ್ಟು ಪರಿಣಾಮಕಾರಿ ಆಗುವುದಿಲ್ಲ. ಗಾದೆಗಳ ಸ್ವರೂಪದಲ್ಲಿ/ಅರ್ಥದಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿರುವುದು ನಿಜ.

ಬೊಗಳ್ತಾ ಬೊಗಳ್ತಾ ಅದು ರಾಗವಾಗೋದಕ್ಕೆ ಸಾಧ್ಯವೇ ಇಲ್ಲ!

ನಮ್ಮ ಕಡೆ ಇರೋ ಗಾದೆ - ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ :) ಅಂತ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಬೊಗಳಿ ಬೊಗಳಿ ರಾಗ ---ಸತತ ಅಭ್ಯಾಸದಿಂದ ಏನಾದರೂ ಸಾಧಿಸಬಹುದು ಎಂದರ್ಥ. :)
*ಅಶೋಕ್

ಅಂತರ್ಜಾಲದಲ್ಲಿ ಶೋಧಿಸಿದಾಗ ಸಂಪದದ ಈ ಬರಹ ಸಿಕ್ಕಿತು. ಮಂಗಳೂರಿನವರು ಬರೆದಿರಬೇಕು.
ಇಲ್ಲಿಯ ಗಾದೆಯ ಪ್ರಯೋಗ ನೋಡಿ:
ನನ್ನ ಕಲಿಕೆ ಸಾಗುತ್ತಲೇ ಇದೆ….
{ಕನ್ನಡ ಮಾಧ್ಯಮದಲ್ಲಿ ಕಲಿತ ನನಗೆ ಚಿಕ್ಕಂದಿನಲ್ಲಿ ಕನ್ನಡದಲ್ಲಿ ಅಭಿವ್ಯಕ್ತಿಸುವ ಸಾಮರ್ಥ್ಯ ಇತ್ತೆನ್ನಬಹುದು.ಕಾಲೇಜು ಸೇರಿದ ಮೇಲೆ ದೇಶ ವಿದೇಶಗಳ ವಿದ್ಯಾರ್ಥಿಗಳ ಜೊತೆ mingle ಆಗಿ ಅವರಂತೇ ಆಗುವ ಪ್ರಯತ್ನದಲ್ಲಿ ಕನ್ನಡದ ಮೇಲಿನ ಹಿಡಿತವು ಕೈತಪ್ಪಿ ಹೋದದ್ದು ತಿಳಿಯಲೇ ಇಲ್ಲ.ಇಲ್ಲಿ ಹಿಂದಿ ಭಾಷೆ ಕೇಳಿ ಸುಸ್ತಾದಾಗ ಕನ್ನಡಭಾಷೆಯು ಕಿವಿಗಳಿಗೂ,ಓದುವ ಕಂಗಳಿಗೂ ,ಮನಸ್ಸಿಗೂ,ಹಾಗೂ last not but the least ಬರೆಯುವ ಕೈಗಳಿಗೂ ಮುದ ನೀಡುತ್ತದೆ.ಹಾಗಾಗಿ ಇದು ನನ್ನ ಕನ್ನಡ ಮರುಕಲಿ[ಳಿ]ಕೆಯ ಪ್ರಯತ್ನ.’ಬೊಗಳಿ ಬೊಗಳಿ ರಾಗ’ ಎಂಬಂತೆ ಬರೆದು ಬರೆದು ನನ್ನ ಕನ್ನಡ ಸ್ವಲ್ಪ improve ಆದರೆ ನನಗೆ ಬಹಳ ಖುಷಿ}
ಲೇಖನದ ಕೊಂಡಿ ಇಲ್ಲಿದೆ:
http://sampada.net/blog/medhadongre/24/05/2007/4124
*ಅಶೋಕ್

[quote=hamsanandi]ನಮ್ಮ ಕಡೆ ಇರೋ ಗಾದೆ - ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ :) ಅಂತ![/quote]

ನಮ್ ಮನೇಲೂ ಇದೆ ಬಳಕೆ ಇರೋದು...

--ಶ್ರೀ

’ಬೊಗಳು’ ಎನ್ನುವುದನ್ನು ನೀವು ’ನಾಯಿಯಂತೆ ಬೌ ಬೌ ಎಂದು ಬೊಗಳು’ ಅಂತಲೇ ತೆಗೆದುಕೊಳ್ಳಬೇಕಿಲ್ಲ. ಹಾಗೆ ಅರ್ಥೈಸಿದರ ನೀವನ್ನೋದು ನಿಜ - "ಬೊಗಳ್ತಾ ಬೊಗಳ್ತಾ ಅದು ರಾಗವಾಗೋದಕ್ಕೆ ಸಾಧ್ಯವೇ ಇಲ್ಲ!"

ಆದರೆ ಬೊಗಳು ಎನ್ನುವುದಕ್ಕೆ ಹೇಳು/ಒದರು/ಬಡಬಡಿಸು ಇತ್ಯಾದಿ ಅರ್ಥಗಳೂ ಬರುತ್ತವೆ. ಉದಾ: "ಸತ್ಯ ಏನಂತ ಬೊಗಳೋ...". ಅದಕ್ಕಿಂತಲೂ ಚೆನ್ನಾಗಿ ಅರ್ಥವಾಗಬೇಕಾದರೆ ಈ ಕೆಳಗಿನ ವಾಕ್ಯವನ್ನು ರಂಗರಾವ್/ಉಪೇಂದ್ರರಾವ್ ಅಥವಾ ಇನ್ನಾರಾದರೂ ಹಳೇಕಾಲದ ಕನ್ನಡವಾರ್ತೆ ಓದುವವರ ಧಾಟಿಯಲ್ಲಿ ಓದಿನೋಡಿ:

"ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯವನ್ನು ಬೊಗಳಿದರು."

:-)

ಜೋಷಿಯವರೇ ನಿಮ್ಮ ವಿಚಿತ್ರಾನ್ನದಲ್ಲೂ ಈ ಗಾದೆ ಬರೆದಿದ್ದೀರಿ:
ಅಂತರ್ಜಾಲದಲ್ಲಿ ಈಗ ತುಂಬ ಜನಪ್ರಿಯವಾದ blogging ಎನ್ನುವ ಕಾನ್ಸೆಪ್ಟ್‌ ನಿಮಗೆ ಗೊತ್ತಿರಬಹುದು. ನರಳಿ ನರಳಿ ರೋಗ, ಬೊಗಳಿ ಬೊಗಳಿ ರಾಗ... ಎಂದು ಗಾದೆ ಕೇಳಿದ್ದೀರಲ್ಲ? ಬೊಗಳಿ ಬೊಗಳಿ ಬ್ಲೋಗ ಅಂತ ಅದನ್ನು ಬದಲಾಯಿಸಬಹುದು. ಸುಮ್ನೆ ನಮ್‌ ಪಾಡಿಗೆ ನಾವು ಬೊಗಳ್ತಾ ಬ್ಲಾಗಿಸುತ್ತಿರುವಾಗಲೇ, ಅದನ್ನು ಓದುವವರಿಗೂ ಒಳ್ಳೇ ಮಜಾ ಸಿಗಲಿ ಎನ್ನುವ ಉದ್ದೇಶದಿಂದ ನಮ್ಮ ಬ್ಲಾಗಿಂಗ್‌ಗೆ ’ಮಜಾವಾಣಿ’ ರೂಪವನ್ನು ಕೊಟ್ಟದ್ದು.
http://thatskannada.oneindia.in/column/vichitranna/2006/210306majavani.html
*ಅಶೋಕ್

ಅಶೋಕ್, ಈ ಪ್ರತಿಕ್ರಿಯೆಯಲ್ಲಿ ನೀವು ಏನು ಹೇಳಹೊರಟಿದ್ದೀರಿ ಎಂದು ಅರ್ಥವಾಗಿಲ್ಲ. ದಯವಿಟ್ಟು ವಿವರಿಸಿ.

ನಿಮ್ಮ ಬರಹ ನೋಡಿದೆ...ಅದನ್ನಲ್ಲಿ ಹಾಕಿರುವೆನಷ್ಟೆ..
ಏನೂ ಹೇಳಹೊರಟಿಲ್ಲ... :)

*ಅಶೋಕ್

ಶ್ರೀವತ್ಸ ಜೋಷಿಯವರಿಗೆ ನನ್ನ ಸಾಷ್ಟಾಂಗ ವಂದನೆಗಳು...

[quote=ಶ್ರೀಮಾನ್ ಶ್ರೀವತ್ಸ ಜೋಷಿ]"ನರಳಿ ನರಳಿ ರೋಗ, ಬೊಗಳಿ ಬೊಗಳಿ ರಾಗ" ಎಂಬ ರೂಪದಲ್ಲೂ ಆ ನಾಣ್ಣುಡಿ ಚಾಲ್ತಿಯಲ್ಲಿದೆ.[/quote]ಇದು ತಿಳಿದಿರಲಿಲ್ಲ. ಮಾಹಿತಿ ನೀಡಿದ್ದಕ್ಕಾಗಿ ನನ್ನಿ.[quote=ಶ್ರೀಮಾನ್ ಶ್ರೀವತ್ಸ ಜೋಷಿ]ಈಗಿನ ಬ್ಲಾಗಿಂಗ್ ಸಂದರ್ಭದಲ್ಲಿ ಅದನ್ನು "ಬೊಗಳಿ ಬೊಗಳಿ ಬ್ಲೋಗ್-ಅ" ಎಂದೂ ಟ್ವಿಸ್ಟಿಸಬಹುದು![/quote]ಇದನ್ನು ಹೀಗೇ ಟ್ವಿಸ್ಟಿಸಬಹುದು. :-D

ಮತ್ತೊಮ್ಮೆ ಧನ್ಯವಾದಗಳು...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.