what da

0

ಸುಮ್ಮನೇ ರಸ್ತೆಯಲ್ಲಿ ಹೋಗುತ್ತಿದ್ದವನಿಗೆ ಪಕ್ಕದಲ್ಲಿ ಕೆಲ ಹುಡುಗಿಯರು ಇ೦ಗ್ಲೀಷನಲ್ಲಿ ಫೋನಿನಲ್ಲಿ ಮಾತನಾಡಿದ್ದು ಕೇಳಿಸಿತು ಒಬ್ಬಳೆ೦ದಳು "why da ..","no da".ನನಗೇನೂ ಆ೦ಗ್ಲಭಾಷೆಯ ಮೇಲೆ ಅದ್ಭುತ ಹಿಡಿತವಿಲ್ಲ.ಆದರೆ ಈ "da" ಪದ ಆ೦ಗ್ಲ ಭಾಷೆಯಲ್ಲಿದೆಯೇ..?ಮಾತನಾಡುತ್ತಿದ್ದ ಹುಡುಗಿ ಮಾತ್ರ ಅಪ್ಪಟ ಕನ್ನಡತಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಲೆಕೆಟ್ಟವರ ಶೈಲಿ ಇದು.

ಡಾ - ಅನ್ನೋದು ತಮಿಳಲ್ಲಿ ಕನ್ನಡದ ಲೋ ಇದ್ದ ಹಾಗೆ.

ಇನ್ನು ವಾಟ್ ಡಾ ವೈ ಡಾ ಅನ್ನೋ ಬೆಂಗನ್ನಡಿಗರನ್ನ ಹಲವರನ್ನ ನೋಡಿರುವೆ ನಾನು :(

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಮ್ಮ ಹಳೆಯ ಬಾಸ್ ಹೀಗೆಯೆ ನಮ್ಮನ್ನು ಮಾತನಾಡಿಸುತ್ತಿದ್ದದು. what da...no da ಅಂತೆಲ್ಲಾ.... ಉತ್ತರದವರು da ಬದಲು ಎಲ್ಲಾ ವಾಕ್ಯಗಳ ಕೊನೆಯಲ್ಲಿ ’ಯಾರ್’ ಪದ ಸೇರಿಸ್ತಾರೆ..

ನಮ್ಮ ಇಂಜಿನೀಯರಿಂಗ್ ಕಾಲೇಜಿನಲ್ಲಿ ಬಳಕೆಯಲ್ಲಿದ್ದ ಇಂಗ್ಲೀಷ್ ನೆನಪಿಸಿತು.

ಕಾಲೇಜಿನಲ್ಲಿ ಹಲವರು ಹೀಗೆ ಮಾತನಾಡುತ್ತಿದ್ದ ಇಂಗ್ಲೀಷ್ ಬೆಂಗಳೂರಿಗೆ ಬಂದ ಹೊಸತರಲ್ಲಿ ನನಗೆ ಅರ್ಥವೇ ಆಗುತ್ತಿರಲಿಲ್ಲ. ಇದು ತಮಗೆ ತಿಳಿಯದೇ ಸೇರ್ಪಡೆಯಾಗಿರುವ ತಮಿಳಿನ ಒಗ್ಗರಣೆ ಎಂದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಆದರೆ ಬಳಕೆ ಮಾತ್ರ "ವೈರಲ್" ಎನ್ನುವಂತೆ ಹರಡುವುದುಂಟು.

ಮುಂದಿನ ಸಾರಿ ಕನ್ನಡಿಗರು ಯಾರಾದರೂ "come da, go da" ಎಂದಾಗ ಅದರಲ್ಲಿನ "da" ಎಂಬುದೇನು ಎಂದು ತಿಳಿಸಿಬಿಡಿ. ಮುಂದೆ ಬಳಸಲು at least ಹಿಂಜರೆದಾರು.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

'da' ಎಂದು ಕೊನೆಗೊಳ್ಳುವ ಸಂಭಾಷಣಾತುಣುಕು ಪ್ರಶ್ನೆಗಳಿಗೆ ‘ಬೋಂಡಾ’, ’ಸೋಡಾ’, ’ಬೀಡಾ’ ಇತ್ಯಾದಿ ನಾಮಪದಗಳನ್ನು ಚಿಕ್ಕ ಉತ್ತರವಾಗಿ (ಅದು ಅಸಂಬದ್ಧವೇ ಇರಬಹುದು) ಕೊಟ್ಟರೆ ‘da'ಕಾರಿಗರಿಗೆ ಇನ್ನು ಮುಂದೆ ತಾವು ಆ ರೀತಿ ಮಾತಾಡುವುದು ಬೇ‘ಡಾ’ ಎಂದು ಅನಿಸಬಹುದು!

English- come da
ಕನ್ನಡ-ಕಂದ :)

-ಗಣೇಶ.

ಗುಱುಱಾಜ
www.kannadaguru.blogspot.com

ಈಗ ಅರ್ಥವಾಯ್ತು ಬಿಡಿ,ತಮಿಳರ ಇ೦ಗ್ಲೀಶಿನಲ್ಲೂ ತಮಿಳು ತುರುಕುವ ಬಯಕೆಯ ಫಲ ಇದು

ಏನ್ಲಾ..ಬಾರ್ ಲಾ..ಅಂತ ನಾವು what la, why la ಅಂತ ಲಾ ಸೇರಿಸಿ ಮಾತಾಡಿದ್ರೆ? :)

ಅಯ್ಯೊ ಹಾಗೆ ಮಾತಾಡ ಬೇಡಿ..ಅಸಹ್ಯ ವಾಗಿದೆ.. ಬೇಕಾದರೆ what da ಅನ್ನುವವರ ಹತ್ತಿರ ಹಾಗೆ ಮಾತಾಡಿ..:)

ನಮ್ಮ ಕ್ಲಾಸಿನಲ್ಲಿ ಒಬ್ಬ ಇದ್ದ. ಅವ ಹೀಗೇನೆ. ಮಾತುಕತೆ ಹೀಗಿರುತ್ತಿತ್ತು.
(ಕಾಲೇಜಿನ ಗೇಟು ಹತ್ರ ಬಸ್ಸಿನಿಂದ ಇಳಿಯುತ್ತಿರುವಂತೆಯೇ)

(ಮನೆಯಲ್ಲಿ ತಮಿಳು ಮಾತನಾಡುವವ): "Hey, What da?"
(ಇವ): "ಏ... ಏನಿಲ್ಲ ಕಣ್ಲಾ! ಏಲ್ಲಾ ವೋಕೆ?"
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಾನು ಹೇಳಿದ್ದು ವ್ಯಂಗ್ಯವಾಗಿ ರೋಶನ್.. ನಮ್ಮ್ ಮನೆಯಲ್ಲಿ ನಾನು,ನನ್ನ ತಂಗಿ ’ಲೇ’ ಅಂತ ಬಳಸಿದರೆನೇ ಅಮ್ಮ ಬಯ್ಯುತ್ತಾರೆ. ಇನ್ನು ಯಾಕಲ...ಏನಲಾ ಅಂದ್ರೆ ಮುಗೀತು...

ನಾವು "what ya" "no ya" ಅಂತಿದ್ವಿ :-)
~ಕಲ್ಪನ

ಗುಱುಱಾಜ
www.kannadaguru.blogspot.com

ನಿನ್ನೆ ನಾನು ಈ ಮಾತುಗಳನ್ನು ಕೇಳಿಸಿ ಕೊ೦ಡಾಗ,ನನ್ನ ಜೊತೆ ಇದ್ದ ನನ್ನ ಉತ್ತರ ಕರ್ನಾಟಕದ ಮಿತ್ರನೊಬ್ಬ (ಆತ ಅದ್ಭುತವಾಗಿ ಇ೦ಗ್ಲೀಷ ಮಾತನಾಡುತ್ತಾನೆ,ಆದರೆ ಕನ್ನಡ ಮಾತ್ರ ತು೦ಬಾ ಒರಟು) "ಏನ್ ಹೊಲಸ್ ಇ೦ಗ್ಲೀಷ ಮಾತಾಡ್ತಾರಲೇ ಇವ್ರು, ವ್ಹಾಟ್ ಡಾ,,! ವೈ ಡಾ...! ಥೂ ಇವ್ರಜ್ಜಿ .....__ಡಾ ! " ಎ೦ದು ಬಯ್ದೇ ಬಿಟ್ಟ!