ಜಾವ ಮತ್ತು ಸಿ++

2

ಜಾವ ಮತ್ತು ಸಿ++ ನಡುವಿನ ವೆತ್ತಾಸಗಳೇನು?

ಜಾವದಲ್ಲಿ ಯಾಕೆ pointers ಇಲ್ಲ?

ಜಾವಾ,ಸಿ++ ಯಾವುದು ಹೆಚ್ಚು ಒಳ್ಳೇದು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗ ಎರಡೂ ಗೊತ್ತಿಲ್ಲ.... ಆದ್ರ...

"ಜಾವಾ,ಸಿ++ ಯಾವುದು ಹೆಚ್ಚು ಒಳ್ಳೇದು? "

ನಿಮ್ಮ requirement ಮ್ಯಾಲ depend ಆಗ್ತದ......

ಜಾವ ಮತ್ತು ಸಿ++ ನಡುವಿನ ವೆತ್ತಾಸಗಳನ್ನು ಇಂತು ಪಟ್ಟಿ ಮಾಡಬಹುದು,
೧) ಜಾವಾ structures ಮತ್ತು unions ಗಳನ್ನು ಹೊಂದಿಲ್ಲ.
೨) ಜಾವಾ ಆಪರೇಟರ್ ಓವಲೋಡಿಂಗ್ ಗೆ ಬೆಂಬಲ ಕೊಡದು.
೩) ಜಾವ ತನ್ನಿಂತಾನೇ ಟೈಪ್ ಕನ್ವರ್ಶನ್(automatic type conversion) ಮಾಡಲ್ಲ.
೪) ಜಾವದಲ್ಲಿ ಎಲ್ಲವನ್ನೂ class ನಲ್ಲಿಯೇ ಹಾಕಿರಬೇಕು, ಹಾಗಾಗಿ ಜಾವದಲ್ಲಿ global variables ಇಲ್ಲ.
೫) ಜಾವ ಮಲ್ಟಿಪಲ್ ಇನ್ಹೆರಿಟನ್ಸ್ (ಹಲವು ಪೇರೆಂಟ್ ಕ್ಲಾಸ್, ಒಂದು ಚೈಲ್ಡ್ ಕ್ಲಾಸ್)ಗೆ ಬೆಂಬಲ ಕೊಡುವದಿಲ್ಲ.
೬) ಜಾವ distructors ಗೆ ಬೆಂಬಲ ಕೊಡದು.
೭) ಟೆಂಪ್ಲೇಟ್ಸ್ ಇಲ್ಲ.

"ಸಿ ಮತ್ತು ಸಿ++ಗಳನ್ನು ಹೆಚ್ಚಾಗಿ ಸಿಸ್ಟಮ್ ಪ್ರೋಗ್ರಾಮಿಂಗ್-ಗೆ ಬಳಸುತ್ತಾರೆ ಅನ್ನುವದು ದಿಟ ಆದರೂ ಜಾವನ್ನೂ ಬಳಸಬಹುದು.."

ಗೌಡರೆ,

C - ನಲ್ಲೂ Object-Oriented Programming ಮಾಡಬಹುದು..... :)

Abstraction, polymorphism,... ಮುಂತಾದ OOPS concepts ಗಳಶ್ಟೆ.

OOP is a language-independent technique

OO-Concepts ಗಳನ್ನ implement ಮಾಡಲು OO-ಭಾಶೆನೇ ಬೇಕಿಲ್ಲ... :)

ಹೌದು ಹರ್ಷ, ಆದರೆ ಸಿ ಅನ್ನು, object-orientation ಅನ್ನು ಗಮನದಲ್ಲಿಟ್ಟುಕೊಂಡು ಮಾಡಿಲ್ಲ, ಅದರಲ್ಲಿ OOP ತುಂಬ ತ್ರಾಸು. C ಬಂದದ್ದು, OOP concept ಬರುವದಕ್ಕಿಂತ ತುಂಬಾ ಮುಂಚೆ.
ಆದರೆ C++ ಬಂದಿದ್ದು OOP ನಂತರ. ಹೀಗಾಗಿ Cಯ ಗುಣಗಳನ್ನು ಉಳಿಸಿಕೊಂಡು, OOPಗೆ ಹೊಂದುವಂತೆ Cಅನ್ನು ಮೇಲ್‍ಮಟ್ಟಕ್ಕೇರಿಸಲಾಯಿತು, ಅದೇ C++ ಅಂತ ಕರೆಸಿಕೊಂಡಿತು.

ಜಾವಾನಲ್ಲಿ ಮೆಮೊರಿ ಮ್ಯಾನೇಜ್-ಮೆಂಟ್ ಎಲ್ಲಾ ಹೆಂಗೆ ?

ಅಲಾಕೆಟ್ - ಫ್ರೀ ಹೆಂಗ್ ಮಾಡ್ತಾರೆ ?

ಮೆಮೋರಿ ಕರಪ್-ಶನ್ ಹೆಂಗೆ ತಪ್ಪಿಸ್ತಾರೆ..?

ಲೀನಕ್ಸ್ ಮೇಲೆ ಜಾವಾ ಪ್ರೋಗ್ರ್ಯಾಮ್ ರನ್ ಆಗೋವಾಗ, ಸಿಗ್ನಲ್ ಹ್ಯಾಂಡಲಿಂಗ್ ಹೆಂಗೆ (Ex..:-SIG 11)

>>C - ನಲ್ಲೂ Object-Oriented Programming ಮಾಡಬಹುದು.....
class ಮಾಡೋದು ಹೇಗೆ ಸಿನಲ್ಲಿ? ತುಸು code ಬರೆದು ತೋರಿಸಿ.
*ಅಶೋಕ್

ಅಶೋಕ್ ಅವರೆ.,
ನನಗೆ OO ಕಾನ್ಸೆಪ್ಟ್-ಗಳ ತಿಳುವಳಿಕೆ ಅಶ್ಟಕಶ್ಟೆ.. ಕಲಿತಿದಿನಿ.., :)
ತೀರ ಚರ್ಚೆ ಮಾಡುವಶ್ಟು ಮಟ್ಟ ಮುಟ್ಟಿಲ್ಲ, :) ಚರ್ಚೆ ಮಾಡಿಯಾದ್ರೂ ನಾನು ಕಲಿಬೇಕಂತಿದಿನಿ :), ಟೈಮ್ ಸಿಗಲಿ..
ನಿಮ್ಮ ಉತ್ತರಕ್ಕೆ ಇಲ್ಲಿ ಕ್ಲಿಕ್ಕಿಸಿ..

http://sunsite.uakom.sk/sunworldonline/swol-10-1995/swol-10-ooc.html

ನಿಮ್ಮ ಕೊಂಡಿಯಲ್ಲಿ ಕೊಟ್ಟಿರುವ ಕ್ರಮ ಸುಮ್ಮನೆ OOದ ನಾಟಕ ಮಾಡುವಂತಿದೆ. ಅದು ನೈಜ OO ಅಲ್ಲ. ನೀವು ಕಲಿಯುವುದಾದರೆ, ಸಿ ಬಳಸಿ OO programming ಮಾಡಲು ಯತ್ನಿಸದಿರುವುದೇ ಒಳಿತು. ಏನಂತೀರಿ? ಅದಕ್ಕೆ ಹೇಗೂ ಜಾವಾ, ಸಿ++ ಇದೆಯಲ್ಲ?
*ಅಶೋಕ್

ಅಲ್ಲಾ ಸಾರ್, concepts ಅರ್ಥ ಆದ್ರೆ ಮುಕ್ಕಾಲು ಕಲಿತಂತೆ ಅನ್ನೋನು ನಾನು..
perl ನಲ್ಲೂ OO concepts ಬಳಸಿ ಬರೆಯಬಹುದು(ನಾನು try ಮಾಡಿದ್ದೆ).

ಸಿ ನಲ್ಲೂ ಬರೆಯಬಹುದು...

ಬರೀ syntax ಕಲಿತುಬಿಟ್ರೆ, ಭಾಶೆ ಕಲಿತಂಗಲ್ಲಾ..... ಅಲ್ವಾ ಅಶೋಕ್..?

ಹಾಗೆ ನೋಡೋದಾದ್ರೆ ರಿಯೂಸೇಬಿಲಿಟಿ ಮಾಡೋದೂ ಸರಿಯಲ್ಲ....oo ಪ್ರೊಗ್ರಾಮುಗಳು codeನ ಮರುಬಳಕೆಗೆ ಪ್ರಯತ್ನಿಸುತ್ತವೆ!
*ಅಶೋಕ್

ರಿಯುಸೆಬಿಲಿಟಿ ಸರಿ ಅಲ್ಲ ಅಂತ ಯಾಕೆ ಅಂತಿದಿರ?... ಒಮ್ಮೆ ಆಗಲೇ ಕೋಡ್ ಮಾಡಿದ್ದನ್ನು, ಮತ್ತೊಮ್ಮೆ ಬರೀತ ಕೂಡೋದು, ಹೊತ್ತುಕಳೆದಂತೆ ಅಲ್ಲವೇ?..

ಸಂಗನಗೌಡರೇ,
ಹರ್ಷ>>"ಅಲ್ಲಾ ಸಾರ್, concepts ಅರ್ಥ ಆದ್ರೆ ಮುಕ್ಕಾಲು ಕಲಿತಂತೆ ಅನ್ನೋನು ನಾನು..
perl ನಲ್ಲೂ OO concepts ಬಳಸಿ ಬರೆಯಬಹುದು(ನಾನು try ಮಾಡಿದ್ದೆ).

ಸಿ ನಲ್ಲೂ ಬರೆಯಬಹುದು...

ಬರೀ syntax ಕಲಿತುಬಿಟ್ರೆ, ಭಾಶೆ ಕಲಿತಂಗಲ್ಲಾ..... ಅಲ್ವಾ ಅಶೋಕ್..?"

ಅವರ ಪ್ರತಿಕ್ರಿಯೆಗೆ ನಾನು ಪ್ರತಿಕ್ರಿಯಿಸುತ್ತಿದ್ದೆ. ನನ್ನದು ಕೋಡ್ ಮರುಬಳಕೆ ಬಗ್ಗೆ ಯಾವ ಆಕ್ಷೇಪವೂ ಇಲ್ಲ. ಅದು ಮಾಡಬೇಕಾದ್ದೆ.
*ಅಶೋಕ್