"ವೇಶ್ಯೆಯ ಮೇಲೆ ಅತ್ಯಾಚಾರ ": ವಿ ಕ ವರದಿ , ಇದೆಂಥಾ ಶೀರ್ಷಿಕೆ?

0

ಇಂದಿ ಅಪರಾಧ ಸುದ್ದಿಯಲ್ಲಿ
ವರದಿ ಮಾಡುವ ಭರದಲ್ಲಿ ಮೇಲಿನ ಶೀರ್ಷಿಕೆ ಕೊಟ್ಟಿದ್ದಾರೆ
ಇದಕ್ಕೆ ಏನನ್ನಬೇಕು?
ವೇಶ್ಯೆಯ ಮೇಲೆ ಎಂದೇಕೆ ಒತ್ತಿ ಹೇಳಬೇಕು?
ಮಹಿಳೆಯ ಮೇಲೆ ಎಂದು ಹೇಳಿ ನಂತರವೆಲ್ಲಾದರೂ ಈ ಅಂಶವನ್ನು ಪ್ರಸ್ತಾಪಿಸಬಹುದಿತ್ತಲ್ಲವವೇ?
ಸೆನ್ಸೇಶನಲ್ ಟೈಟಲ್ ಕೊಡುವ ಭರದಲ್ಲಿ ಹೀಗೆ ಕೊಡುವ ಅಗತ್ಯವೇನು?
ವೇಶ್ಯೆಯೂ ಒಬ್ಬ ಹೆಣ್ಣು . ಆಕೆಯ ಮೇಲಿನ ಅತ್ಯಾಚಾರವೂ ಯಾವುದೇ ಹೆಣ್ಣಿನ ಮೇಲಿನ ಅತ್ಯಾಚಾರದಂತೆಯೇ ಎಂಬುದನ್ನು ಪತ್ರಿಕಾಲಯದವರಿಗೆ ಹೇಳುವವರು ಯಾರು?.
ಇದು ಸರಿಯೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಹೇಳಿ ಕೇಳಿ ಪತ್ರಿಕೋದ್ಯಮ( ಮಹಾ ಉದ್ಯಮ) ...ಪತ್ರಿಕೆ ಸೇವೆಯಾಗಿ ಉಳಿದಿಲ್ಲ.....
ವಿಶ್ವೇಶ್ವರ ಬಟ್ಟರು ಎಲ್ಲೋ ಒಂದು ತಲೆನಾಮದ (ಶೀರ್ಶಿಕೆ) ಬಗ್ಗೆ ಹೊತ್ತಿಗೆ ಬರೆದ ನೆನಪಿದೆ ನನಗೆ... ಅವರ ಆ ತಲೆನಾಮ ತಿಳುವಳಿಕೆಯ ಪ್ರಯೋಗ ನಡೆದಿದೆ.
ಇನ್ನು ಪತ್ರಿಕೆಯ ಬಗ್ಗೆ ಮಾತನಾಡುವಶ್ಟು ಮಾನ ಅವು ಉಳಿಸಿಕೊಂಡಿಲ್ಲ ಬಿಡಿ. ಮಾತನಾಡಲೋದರೆ ನಮ್ಮ ಮಾssssssssssssssssss........!!

ಸ್ವಾಮಿ
ಪುಣೆ