ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

0

ಈವತ್ತು ಮಿಂಚಂಚೆಯಲ್ಲಿ ಬಂದ ಹೊಸ ವಿಚಾರ..

"ನಿಸರ್ಗ" - ಪರಿಸರ ಪ್ರೇಮಿಗಳಿಗೊಂದು ಮಾಸಿಕ.

http://nisarga.maasika.googlepages.com/

ಪ್ರಾಣಿ, ಪಕ್ಷಿ, ಕೀಟಗಳು, ಹೂವು, ಹಣ್ಣುಗಳು, ಪರಿಸರ, ಚಾರಣ, ಮನಸೆಳೆಯುವ ಪ್ರಕೃತಿಯ ಅಪಾರ ಚಿತ್ರಗಳು....ಹೀಗೆ ಅನೇಕ ವಿಷಯಗಳಿವೆ. ಉಪಯುಕ್ತ ಮಾಹಿತಿ ಹಂಚಿಕೊಳ್ಳಬೇಕೆನ್ನಿಸಿತು... ಅದಕ್ಕೆ ಇಲ್ಲಿ ಸೇರಿಸುತ್ತಿದ್ದೇನೆ :)

-ಸವಿತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ನನ್ನ ಸ್ನೇಹಿತರಾದ ನಿರಂಜನ್ ನಡೆಸುತ್ತಿರುವುದು...
ಸುಮಾರು ಒಂದು ವರ್ಷದಿಂದ ಈ ಪತ್ರಿಕೆ ನಡೆಸುತ್ತಿದ್ದಾರೆ.

ಇಂತಿ ನಿಮ್ಮ,
ಅನಿಲ್ ರಮೇಶ್.

ಖಂಡಿತ ಸವಿತ :)
ನಾನು ಛಾಯಾಗ್ರಹಣ ಅವರಿಂದಲೇ ಕಲಿಯುತ್ತಿರುವುದು :)
ಛಾಯಾಗ್ರಹಣದ ವಿಷಯದಲ್ಲಿ ನಾನಿನ್ನೂ ಎಳೇ ನಿಂಬೇಕಾಯಿ ;)

ಇನ್ನೊಂದ್ ವಿಷ್ಯ,

ಈ ಮಾಹಿತಿಯನ್ನು ಲೇಖನದಲ್ಲಿ ಸೇರಿಸಿದ್ರಲ್ಲಾ? ಅದು ಈಗ ಕಾಣಿಸ್ತಿಲ್ಲ?

ಇಂತಿ ನಿಮ್ಮ,
ಅನಿಲ್ ರಮೇಶ್.

ಚೆನ್ನಾಗಿ ಕಲೀರಿ, ನೀವು ಹಾಕಿರೋ ಚಿತ್ರಗಳೂ ಚೆನ್ನಾಗಿವೆ :)

>>ಈ ಮಾಹಿತಿಯನ್ನು ಲೇಖನದಲ್ಲಿ ಸೇರಿಸಿದ್ರಲ್ಲಾ? ಅದು ಈಗ ಕಾಣಿಸ್ತಿಲ್ಲ?
ನಾನು ಅದನ್ನೇ ಯೋಚಿಸ್ತಿದ್ದೆ ಅನಿಲ್. ನಾನು ಲೇಖನದಡಿಯಲ್ಲೇ ಸೇರಿಸಿದ್ದು...ಮರು ಕ್ಷಣದಲ್ಲಿ ಮಾಯವಾಗೋಯ್ತು...ಅದು ಹೇಗೆ ಚರ್ಚೆ ಕಡೆ ಬಂತು ಅಂತ ಗೊತ್ತಾಗ್ಲಿಲ್ಲ!?!
-ಸವಿತ

ಇಲ್ಲ, ಇದನ್ನಿಲ್ಲಿಗೆ ವರ್ಗಾಯಿಸಿದ್ದು ನಾನೇ. ಲೇಖನ ವರ್ಗದಲ್ಲಿ ಸ್ವಲ್ಪವಾದರೂ ದೀರ್ಘವಾದ ಬರಹ ಇರಬೇಕು ಎಂಬ ನಿಯಮವಿದೆ. ಪುಟ್ಟ ಬರಹಗಳನ್ನು ಬ್ಲಾಗ್ ಅಥವ (ಚರ್ಚೆಗೆ ಸೂಕ್ತವಾಗಿದ್ದಲ್ಲಿ) ಇಲ್ಲಿ ಸೇರಿಸಬಹುದು.

btw, 'ನಿಸರ್ಗ' ಒಳ್ಳೆಯ ಪ್ರಯತ್ನ. ಇದರ ಹಿಂದಿರುವವರಿಗೆ ಅಭಿನಂದನೆಗಳು. ಗೂಗಲ್ ಪೇಜಸ್ ಯಾಕೆ? ಕನ್ನಡದ್ದೇ ಕೆಲಸವಾದ್ದರಿಂದ ಸಂಪದದಲ್ಲೇ ಒಂದು ಸಬ್ ಡೊಮೈನ್ ಬಳಸಿಕೊಳ್ಳಬಹುದು. ಅದಕ್ಕೆ ಬೇಕಾದ ಪ್ರಬಂಧ ಮಾಡಬಲ್ಲೆ. ಪುಟವೂ ಸಾಧ್ಯವಾದರೆ ಕನ್ನಡದಲ್ಲೇ ಮಾಡಿ (ಬೇಕಿದ್ದರೆ ಇಂಗ್ಲೀಷಿನಲ್ಲೂ ಓದುವ ಆಯ್ಕೆ ನೀಡಬಹುದು). ಮ್ಯಾಗಝೀನ್ ಕೂಡ ಅಷ್ಟೆ - ಪೂರ್ಣ ಕನ್ನಡದಲ್ಲಿದ್ದರೆ ಇನ್ನೂ ಚೆನ್ನ.
- HPN
ನನ್ನ ಬ್ಲಾಗುಗಳು: [:http://sampada.net/blog/hpn|ಪರಿವೇಶಣ] | [:http://hpnadig.net/blog|PariveshaNa]

ಈ ವಿಷಯಕ್ಕೆ ಸಂಬಂಧಿಸಿದಂತೆ ನಿರಂಜನ್ ಗೆ ಇ-ಮೇಲ್ ಕಳುಹಿಸಿದ್ದೇನೆ.

ಅವರ ಅಭಿಪ್ರಾಯವೇನೆಂದು ಅವರ ಪ್ರತ್ಯುತ್ತರ ಬಂದ ಮೇಲೆ ಇಲ್ಲಿ ಹಂಚಿಕೊಳ್ಳುವೆ.

ಇಂತಿ ನಿಮ್ಮ,
ಅನಿಲ್ ರಮೇಶ್.